ಚಾರ್ಟೆಡ್ ಅಕೌಂಟೆಂಟ್ ಆಗಿ ಉತ್ತೀರ್ಣರಾಗಿರುವ ಸಹನಗೆ ಅಭಿನಂದನೆ
ಚಾರ್ಟೆಡ್ ಅಕೌಂಟೆ0ಟ್ ಆಗಿ ಉತ್ತೀರ್ಣರಾಗಿರುವ ಸಹನಗೆ ಅಭಿನಂದನೆ
ಕೋಲಾರ ಹೊರವಲಯದ ಛತ್ರಕೋಡಿಹಳ್ಳಿ ಸಮೀಪದ ಎಕ್ಸಲೆಂಟ್ ಕಾಲೇಜಿನಲ್ಲಿ ಸೋಮವಾರ ಚಾರ್ಟರ್ಡ್ ಅಕೌಂಟೆAಟ್ ಆಗಿ ಉತ್ತೀರ್ಣರಾಗಿ ಸಾಧನೆ ಮಾಡಿರುವ ಕಾಲೇಜಿನ ಹಳೆ ವಿದ್ಯಾರ್ಥಿನಿ ಹಾಗೂ ಸಾಧಕಿ ಎ.ಸಹನ ಅವರನ್ನು ಬೆÉಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ ರವಿ ಸನ್ಮಾನಿಸಿದರು.


ಕೋಲಾರ, ೨೩ ಮಾರ್ಚ್ (ಹಿ.ಸ):

ಆ್ಯಂಕರ್: ಕೃತಕ ಬುದ್ದಿಮತ್ತೆ ಹಾಗೂ ತಂತ್ರಜ್ಞಾನದ ಭ್ರಮೆಯಲ್ಲಿ ಯುವ ಪೀಳಿಗೆ ಕಲಿಕೆ ಸಂಸ್ಕಾರ,ನೈತಿಕ ಮೌಲ್ಯಗಳಿಂದ ದೂರವಾಗುವುದನ್ನು ತಪ್ಪಿಸಲು ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಬೆೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ ರವಿ ಕರೆ ನೀಡಿದರು.

ನಗರದ ಹೊರವಲಯದ ಛತ್ರಕೋಡಿಹಳ್ಳಿ ಸಮೀಪದ ಎಕ್ಸಲೆಂಟ್ ಕಾಲೇಜಿನಲ್ಲಿ ಸೋಮವಾರ ಚಾರ್ಟರ್ಡ್ ಅಕೌಂಟೆ0ಟ್ ಆಗಿ ಉತ್ತೀರ್ಣರಾಗಿ ಸಾಧನೆ ಮಾಡಿರುವ ಕಾಲೇಜಿನ ಹಳೆ ವಿದ್ಯಾರ್ಥಿನಿ ಹಾಗೂ ಸಾಧಕಿ ಎ.ಸಹನ ಅವರನ್ನು ಅಭಿನಂದಿಸಿ ಮಾತನಾಡಿದರು.

ಶಿಕ್ಷಣ ಸಂಸ್ಥೆ ಆರಂಭಿಸುವುದು ಅಷ್ಟು ಸುಲಭದ ಮಾತಲ್ಲ, ಇಂದು ಬದ್ದತೆ, ಕಲಿಸುವ ಹೊಣೆಗಾರಿಕೆ, ಗುಣಮಟ್ಟದ ಶಿಕ್ಷಣ ನೀಡುವ ಕೌಶಲ್ಯಭರಿತ ಶಿಕ್ಷಕ ವರ್ಗ, ಅಗತ್ಯ ಮೂಲಸೌಲಭ್ಯಗಳನ್ನು ಒಟ್ಟುಗೂಡಿಸಿಕೊಳ್ಳುವುದು ಕಷ್ಟದ ಕೆಲಸ ಇಂತಹ ಸಂದರ್ಭದಲ್ಲೂ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಬಿ.ಎಂ.ರAಗಪ್ಪ ಅವರ ಪ್ರಯತ್ನ, ಆಧುನಿಕ ಕಲಿಕಾ ಸೌಲಭ್ಯಗಳನ್ನು ಒದಗಿಸುವಲ್ಲಿ ಕೈಗೊಂಡಿರುವ ಕ್ರಮಗಳು ಶ್ಲಾಘನೀಯವಾಗಿದೆ.ಮಕ್ಕಳ ಸಾಧನೆಯನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸವು ಮುಂದಿನ ಪೀಳಿಗೆಗೆ ಹಾಗೂ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತೆ ಎಂದ ಅವರು, ಇಂತಹ ಕಾರ್ಯಕ್ರಮಗಳಿಂದಾಗಿ ನಾವೂ ಸಾಧಕರಂತೆ ಆಗಬೇಕು ಎಂದು ನಿರ್ಧರಿಸಿ ಪ್ರಯತ್ನಿಸುವ ಮನಸ್ಥಿತಿ ಮಕ್ಕಳಲ್ಲಿ ಬೆಳೆಸಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ಯುವ ಪೀಳಿಗೆ ತಂತ್ರಜ್ಞಾನದ ಭರಾಟೆಗೆ ಸಿಕ್ಕಿ ಹಾಕಿಕೊಂಡಿದೆ, ಹಿಂದೆ ವಿಷಯ ಸಂಗ್ರಹಕ್ಕೆ ಕಷ್ಟವಿತ್ತು ಆದರೆ ಇಂದು ಎಲ್ಲಾ ಮಾಹಿತಿ ಕಣ್ಣ ಮುಂದೇಯೇ ಸಿಗುತ್ತಿದೆ, ವಿಧ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತಿರುವ ಈ ತಂತ್ರಜ್ಞಾನ ಶಿಕ್ಷಕರ ಬೋಧನೆಯ ಜತೆಗೆ ಊಟಕ್ಕೆ ಉಪ್ಪಿನ ಕಾಯಿ ಇದ್ದಂತೆ ಇರಬೇಕು ಆದರೆ ಅದೇ ಭ್ರಮೆಯಲ್ಲಿ ಮುಳುಗಿದರೆ ಅಪಾಯ ಖಚಿತ ಎಂದು ಎಚ್ಚರಿಸಿದರು.

ತಂತ್ರಜ್ಞಾನ ಭರಾಟೆ ವೈಭವಿಕರಣ ಅಳವಡಿಸಿಕೊಳ್ಳಲು ನೀವು ಎಷ್ಟು ತಾಳ್ಮೆ ಬಳಸತ್ತೀರಿ ಎಂಬುದರ ಮೇಲೆ ಮುಂದಿನ ಭವಿಷ್ಯ ನಿಂತಿದೆ ಎಂದ ಅವರು, ರೈತರ ಮಗಳಾಗಿ ಕಷ್ಟಪಟ್ಟು ಸಿಎ ಪಾಸ್ ಆಗಿದ್ದಾರೆ ಸಾಧನೆ,ಛಲ ಇದ್ದರೆ ಎಲ್ಲವೂ ಸಾಧ್ಯ, ವಾಣಿಜ್ಯ ಶಾಸ್ತ ಎಷ್ಟು ಮುಖ್ಯ ಅಂತ ಇವತ್ತು ಸಮಾಜಕ್ಕೆ ಗೊತ್ತಾಗಿದೆ ಎಂದು ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಯುವ ಜನಾಂಗ ದೇಶದ ಭವಿಷ್ಯವಾಗಿದ್ದು, ಅವರನ್ನು ಸರಿದಾರಿಯಲ್ಲಿ ನಡೆಸುವ ಹೊಣೆ ಶಿಕ್ಷಣ ಸಂಸ್ಥೆಗಳ ಮೇಲಿದೆ, ಇಲ್ಲವಾದಲ್ಲಿ ದೇಶಕ್ಕೆ ಅದು ಆತಂಕವಾಗುತ್ತದೆ. ಕಾಲೇಜು ಕಟ್ಟುವುದು ಕಷ್ಟ ಆದರೆ ರಂಗಪ್ಪ ಅವರು ಶ್ರಮ ಪಟ್ಟು ಈ ಮಟ್ಟಕ್ಕೆ ತಂದಿದ್ದಾರೆ ಎಂದ ಅವರು, ವಿದ್ಯಾರ್ಥಿಗಳಲ್ಲಿ ಸಾಧನೆಯ ಛಲ ಅಗತ್ಯವಿದೆ, ಯಾರಿಗೆ ಯಾರೂ ಕಡಿಮೆ ಇಲ್ಲ ಅದರೆ ಆಸಕ್ತಿಯ ಕೊರತೆ ಇದೆ, ಅದನ್ನು ಮೀರಿ ನೀವು ಕಲಿಕೆಯಲ್ಲಿ ತೊಡಗಿಸಿಕೊಂಡರೆ ನೀವು ಸಾಧಕರಾಗಬಹುದು ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎ ಸಾಧಕಿ ಸಹನ ಮಾತನಾಡಿ, ಯಾವುದೇ ಪ್ರಯತ್ನದಲ್ಲಿ ಮೊದಲು ಸೋಲ ಬಹುದು ಆದರೆ ನಂತರ ಗೆಲುವು ಗುರಿಯಾಗಿರಬೇಕು, ಆಸಕ್ತಿ ಇದ್ದರೆ ಏನನ್ನಾದರೂ ಸಾಧಿಸಬಹುದು. ನನ್ನೀ ಪರಿಶ್ರಮಕ್ಕೆ ಪೋಷಕರು, ಎಕ್ಸಲೆಂಟ್ ಕಾಲೇಜಿನ ರಂಗಪ್ಪ ಅವರು, ಮಾರ್ಗದರ್ಶನ ನೀಡಿದ್ದಾರೆ ಎಂದ ಅವರು, ನೀವು ಕಷ್ಟಪಟ್ಟು ಓದಿದರೆ ಸಾಧನೆ ಮಾಡಬಹುದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷ ಎಂ.ವಿ ರಂಗಪ್ಪ ಮಾತನಾಡಿ, ಕಳೆದ ವರ್ಷ ಸತೀಶ್ ಎಂಬ ವಿದ್ಯಾರ್ಥಿ ಸಿಎ ಸಾಧಕರಾಗಿದ್ದು, ಈ ಬಾರಿ ಮಾಲೂರು ತಾಲ್ಲೂಕಿನ ಯಲವಗುಳಿಯ ರೈತ ಅಶ್ವಥ್ಥನಾರಾಯಣ,ಅರುಣಾ ದಂಪತಿಗಳ ಮಗಳು ಈ ಸಾಧನೆ ಮಾಡಿದ್ದಾಳೆ, ಆಕೆಯ ಸಾಧನೆಯ ಪರಿಚಯವನ್ನು ಇತರೆ ವಿದ್ಯಾರ್ಥಿಗಳಿಗೆ ಮಾಡಿಸುವುದರಿಂದ ಅದು ಇನ್ನಷ್ಟು ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ವಡಗೂರು ರಾಮು, ಕಾಲೇಜಿನ ಖಜಾಂಚಿ ಸುಷ್ಮಿತ, ಪ್ರಾಂಶುಪಾಲ ಎಂ.ಆನ0ದ್, ಉಪನ್ಯಾಸಕರಾದ ಕವಿತಾ,ಮಧುಶ್ರೀ,ಮಧುಕರ್, ರಮೇಶ್ಬಾಬು, ಮೀನಾ, ದೇವರಾಜ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande