ಸೀತಿ ಬ್ರಹ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಜನಮನ ಸೆಳೆದ ರಸಮಂಜರಿ ಕಾರ್ಯಕ್ರಮ
ಸೀತಿ ಬ್ರಹ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಜನಮನ ಸೆಳೆದ ರಸಮಂಜರಿ ಕಾರ್ಯಕ್ರಮ
ಕೋಲಾರ ತಾಲ್ಲೂಕಿನ ಸೀತಿ ಶ್ರೀ ಸೀತಿ ಪತೇಶ್ವರ ಸ್ವಾಮಿ ಮತ್ತು ಭೈರವೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಕಲಾವಿದರು ಸಾರ್ವಜನಿಕರನ್ನು ರಂಜಿಸಿದರು.


ಕೋಲಾರ ೨೩ ಮಾರ್ಚ್ (ಹಿ.ಸ):

ಆ್ಯಂಕರ್: ಪುರಾಣಪ್ರಸಿದ್ಧ ಶ್ರೀ ಸೀತಿ ಪತೇಶ್ವರ ಸ್ವಾಮಿ ಮತ್ತು ಭೈರವೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಕಾರ್ಯಕ್ರಮದ ಪ್ರಯುಕ್ತ ಕೋಲಾರ ರಾತ್ರಿ ಪ್ರಖ್ಯಾತ ನಟ ಡಾಲಿ ಧನಂಜಯ್ ಮತ್ತು ಕಿರುತರೆ ನಟರು ಕಾಮಿಡಿ ನಟರು ನೃತ್ಯ ಕಲಾವಿದರು ಪ್ರೇಕ್ಷಕರಿಗೆ ಮನರಂಜನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುರುಳಿ ಗೌಡ ರವರು ಕಳೆದ ಐದು ವರ್ಷಗಳಿಂದ ಸೀತಿ ಶ್ರೀ ಪತೇಶ್ವರ ಸ್ವಾಮಿ ಮತ್ತು ಭೈರವೇಶ್ವರ ಸ್ವಾಮಿ ಕೃಪೆಯಿಂದ ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇನೆ. ನನ್ನ ಅಭಿವೃದ್ಧಿ ಸಹಿಸದ ಕೆಲವು ಸ್ಥಳೀಯ ಮುಖಂಡರು ಕಾರ್ಯಕ್ರಮ ನಡೆಯಲೇಬಾರದು ಎಂದು ಬಾರಿ ಪ್ರಯತ್ನಗಳು ಮಾಡಿದ್ದರು ನನಗೆ ದೇವರ ಆಶೀರ್ವಾದ ಮತ್ತು ಸ್ಥಳೀಯ ಸಾರ್ವಜನಿಕರ ಸಹಕಾರ ಇರುವುದರಿಂದ ಯಾವುದೇ ದುರ್ಘಟನೆ ನಡೆಯಲಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ್ ಮಾತನಾಡಿ, ಸೀತಿ ಹೊಸೂರು ಮುರಳಿಗೌಡ ಸುಮಾರು ವರ್ಷಗಳಿಂದ ಈ ಭಾಗದಲ್ಲಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ನಮ್ಮ ಕೋಲಾರ ಜಿಲ್ಲೆಯ ಯುವ ಜನತೆ ಕ್ರೀಡೆಯಲ್ಲಿ ಮುಂದೆ ಬರುವ ಉದ್ದೇಶದಿಂದ ಈ ಭಾಗದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆ ಯೋಜನೆ ಮಾಡುತ್ತಿದ್ದಾರೆ. ಇದರ ಸದುಪಯೋಗ ಯುವಕರು ಬಳಸಿಕೊಳ್ಳಬೇಕು ಇಷ್ಟೇ ಅಲ್ಲದೆ ಬಡ ಕುಟುಂಬದ ಜನತೆ ಮದುವೆ ಮತ್ತು ಇನ್ನಿತರ ಸಮಾರಂಭಗಳು ಮಾಡಿಕೊಳ್ಳಲು ಆರ್ಥಿಕ ಸಹಾಯದ ಹಸ್ತವನ್ನು ಸಹ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿ ರಾಜಕೀಯದಲ್ಲಿ ಅಧಿಕಾರ ಪಡೆದರೆ ಇನ್ನಷ್ಟು ಸಮಾಜ ಸಭೆ ಮಾಡಲು ಶಕ್ತಿ ಬರುತ್ತದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ನೀವು ಮುರಳಿ ಗೌಡರವರಿಗೆ ರಾಜಕಾರಣದಲ್ಲಿ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಸೀತಿ ಶ್ರೀ ಪತೇಶ್ವರ ಸ್ವಾಮಿ ಮತ್ತು ಭೈರವೇಶ್ವರಸ್ವಾಮಿ ಅನುಗ್ರಹದಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತರು ಆರ್ಥಿಕತೆಯಲ್ಲಿ ಮುಂದೆ ಬರುತ್ತಾರೆ ಎಂದು ತಿಳಿಸಿದರು.

ಡಿಐಜಿಪಿ ದೇವರಾಜ್ ಮಾತನಾಡಿ, ನಮ್ಮ ಸೀತಿ ಹೊಸೂರು ಮುರಳಿಗೌಡ ರವರು ಕಲಾವಿದರನ್ನು ಕರೆಸಿ ಅವರ ಕಲೆಯನ್ನ ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಮುರಳಿಗೌಡ ಮಾಡುತ್ತಾರೆ ಮೊನ್ನೆ ನಾನು ಕೋಲಾರದಲ್ಲಿ ಯುಗಾದಿ ಉತ್ಸವ ಮಾಡಿದ್ದೆ ಅದೇ ರೀತಿ ಕೂಡ ಮುರಳಿಗೌಡ ಸೀತಿ ಗ್ರಾಮದಲ್ಲಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಶಕ್ತಿ ತುಂಬುವ ಕೆಲಸ ನೀವು ಮಾಡಬೇಕಿದೆ ಎಂದು ತಿಳಿಸಿದರು..

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಜಿಲ್ಲಾಧ್ಯಕ್ಷೆ ಕುರ್ಕಿ ರಾಜೇಶ್ವರಿ, ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ ಚಂದ್ರಶೇಖರ್, ಒಕ್ಕಲಿಗ ಸಂಘದ ನಿರ್ದೇಶಕ ಡಿಕೆ ರಮೇಶ್, ಕೋಲಾರ ನಗರಸಭಾ ಸದಸ್ಯ ಮುರಳಿ, ಸೋಮಶೇಖರ್, ಜಯದೇವ, ಮಂಜುನಾಥ, ಅಮ್ಮನಲ್ಲೂರು ಅಂಬರೀಶ್, ಚಿಕ್ಕಂಡಳ್ಳಿ ಮಂಜುನಾಥ್, ರಾಜ್ಯ ಕಾರ್ಮಿಕ ಪರಿಷತ್ ಘಟಕದ ಸದಸ್ಯ ರಾಮಪುರ ನವೀನ್ ಕುಮಾರ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande