
ಮಂಗಳೂರು, 22 ಮಾರ್ಚ್ (ಹಿ.ಸ.):
ಆ್ಯಂಕರ್:
ನವಮಂಗಳೂರು ಬಂದರುಗೆ 16,714 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಕಾರ್ಗೋ ಹಡಗು ಭಾನುವಾರ ಆಗಮಿಸಿದ್ದು, ರಾಜ್ಯದ ಅನಿಲ ಪೂರೈಕೆಗೆ ಮಹತ್ವದ ಉತ್ತೇಜನ ನೀಡಿದೆ.
ಅಮೆರಿಕಾದ ಟೆಕ್ಸಾಸ್‌ನಿಂದ ಪಿಕ್ಸಿಸ್ ಪಯನೀರ್ ಹಡಗು ಈ ಎಲ್‌ಪಿಜಿ ಸಾಗಾಣಿಕೆ ಮಾಡಿದ್ದು, ಏಜೀಸ್ ಕಂಪನಿಗೆ ಸರಕು ತಲುಪಿಸಿದೆ. ಇತ್ತೀಚೆಗೆ ಉಲ್ಬಣಗೊಂಡಿರುವ ಇರಾನ್–ಇಸ್ರೇಲ್ ಸಂಘರ್ಷದ ನಂತರ ಕರ್ನಾಟಕಕ್ಕೆ ಆಗಮಿಸಿದ ಮೊದಲ ಎಲ್‌ಪಿಜಿ ಹಡಗು ಇದಾಗಿದೆ.
ಮಾ.14ರಂದು ಟೆಕ್ಸಾಸ್‌ನಿಂದ ಹೊರಟ ಹಡಗು ಇಂದು ಮಂಗಳೂರಿಗೆ ತಲುಪಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಕಂಡುಬಂದಿದ್ದ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಕೊರತೆ ನಿವಾರಣೆಗೆ ಇದು ನೆರವಾಗುವ ನಿರೀಕ್ಷೆ ವ್ಯಕ್ತವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa