ಕಾಡು ಉಳಿಸಿ, ಭವಿಷ್ಯ ಹಸಿರಾಗಿಸೋಣ–ಸಚಿವ ಎಂಬಿಪಾಟೀಲ್ ಕರೆ
ವಿಜಯಪುರ, 21 ಮಾರ್ಚ್ (ಹಿ.ಸ.) ಆ್ಯಂಕರ್ : ಅರಣ್ಯಗಳು ಭೂಮಿಯ ಶ್ವಾಸಕೋಶಗಳಾಗಿದ್ದು, ಸಾವಿರಾರು ಮರಗಳ ನೆಲೆ, ಲಕ್ಷಾಂತರ ಜೀವಜಾತಿಗಳ ಆಶ್ರಯ ಹಾಗೂ ಶುದ್ಧ ಗಾಳಿಯ ಪ್ರಮುಖ ಮೂಲವಾಗಿವೆ. ಅರಣ್ಯಗಳು ಹವಾಮಾನ ಸಮತೋಲನವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚ
ಅರಣ್ಯ


ವಿಜಯಪುರ, 21 ಮಾರ್ಚ್ (ಹಿ.ಸ.)

ಆ್ಯಂಕರ್ : ಅರಣ್ಯಗಳು ಭೂಮಿಯ ಶ್ವಾಸಕೋಶಗಳಾಗಿದ್ದು, ಸಾವಿರಾರು ಮರಗಳ ನೆಲೆ, ಲಕ್ಷಾಂತರ ಜೀವಜಾತಿಗಳ ಆಶ್ರಯ ಹಾಗೂ ಶುದ್ಧ ಗಾಳಿಯ ಪ್ರಮುಖ ಮೂಲವಾಗಿವೆ. ಅರಣ್ಯಗಳು ಹವಾಮಾನ ಸಮತೋಲನವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ವಿಶ್ವ ಅರಣ್ಯ ದಿನದ ಶುಭಾಶಯ ಕೊರುವ ಮೂಲಕ ಅವರು ಪ್ರಕಟಣೆಯಲ್ಲಿ

ತಿಳಿಸಿದ್ದಾರೆ

ನಾವು ಉಸಿರಾಡುವ ಗಾಳಿ, ವಾಸಿಸುವ ಮನೆ, ಬಳಸುವ ಕಾಗದ ಸೇರಿದಂತೆ ನಮ್ಮ ದಿನನಿತ್ಯದ ಬದುಕಿನ ಹಲವು ಅಗತ್ಯಗಳ ಹಿಂದೆ ಅರಣ್ಯಗಳೇ ಮೂಲಶಕ್ತಿಯಾಗಿವೆ. ಅರಣ್ಯಗಳು ಬೆಳೆದಷ್ಟೂ ಪರಿಸರ ಸಮತೋಲನ ಕಾಪಾಡಲ್ಪಟ್ಟು ಜನರ ಬದುಕು ಸಮೃದ್ಧವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಹಿನ್ನೆಲೆ ಇಂದು ಆಚರಿಸಲಾಗುತ್ತಿರುವ ವಿಶ್ವ ಅರಣ್ಯ ದಿನದ ಅಂಗವಾಗಿ ಕಾಡುಗಳನ್ನು ಉಳಿಸಿ, ಹೊಸ ಮರಗಳನ್ನು ನೆಟ್ಟು ಅರಣ್ಯ ಸಂಪತ್ತನ್ನು ವೃದ್ಧಿಸುವ ಸಂಕಲ್ಪಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಪರಿಸರ ಪ್ರೇಮಿಗಳು ಕರೆ ನೀಡಿದ್ದಾರೆ.

ನಿಸರ್ಗ ಉಳಿದರೆ ಮಾತ್ರ ಭವಿಷ್ಯ ಹಸಿರಾಗುತ್ತದೆ ಎಂಬ ಸಂದೇಶವನ್ನು ಈ ದಿನ ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande