
ವಿಜಯಪುರ, 21 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ನಗರದ ಈದ್ಗಾ ಮೈದಾನದಲ್ಲಿ ಇಂದು ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ವಿಶೇಷ ಸಮೂಹ ಪ್ರಾರ್ಥನೆ ಭಕ್ತಿಭಾವದಿಂದ ನೆರವೇರಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರು ಭಾಗವಹಿಸಿ ಸಮಸ್ತ ನಾಡಿನ ಜನತೆಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಪ್ರಾರ್ಥನೆಯ ಬಳಿಕ ಮಾತನಾಡಿದ ಅವರು, ರಂಜಾನ್ ಹಬ್ಬವನ್ನು ಎಲ್ಲಾ ಧರ್ಮದವರೂ ಭಾವೈಕ್ಯತೆ ಹಾಗೂ ಸಹೋದರತ್ವದ ಮನೋಭಾವದಿಂದ ಆಚರಿಸುವುದು ಸಮಾಜದ ಸಾಮರಸ್ಯಕ್ಕೆ ಉತ್ತಮ ಮಾದರಿಯಾಗಿದೆ ಎಂದು ಹೇಳಿದರು. ವಿಶ್ವದಾದ್ಯಂತ ರಂಜಾನ್ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದ್ದು, ಎಲ್ಲ ದೇಶಗಳ ಜನರು ಪರಸ್ಪರ ಸಮನ್ವಯ, ಶಾಂತಿ, ಸಹಕಾರ ಹಾಗೂ ಗೌರವದೊಂದಿಗೆ ಬದುಕಬೇಕು ಎಂದು ಕರೆ ನೀಡಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಹೇಳಿದ ಸಚಿವರು, ಕೊನೆಯಲ್ಲಿ “ರಂಜಾನ್ ಮುಬಾರಕ್” ಎಂದು ಎಲ್ಲರಿಗೂ ಹಾರೈಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande