
ಬಾಗಲಕೋಟೆ, 21 ಮಾರ್ಚ್ (ಹಿ.ಸ.)
ಆ್ಯಂಕರ್ : ಜಮಖಂಡಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ಬಸವೇಶ್ವರ ಅಮರಾಯಿ (ಜಾನುವಾರುಗಳ) ಜಾತ್ರೆ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯುತ್ತಿದ್ದು ಜಾತ್ರೆಗೆ ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ ಅವರು ಚಾಲನೆ ನೀಡಿದರು.
ಜಾತ್ರೆಯಲ್ಲಿ ವಿವಿಧ ಪ್ರದೇಶಗಳಿಂದ ರೈತರು ತಮ್ಮ ಜಾನುವಾರುಗಳೊಂದಿಗೆ ಆಗಮಿಸಿ ಪರಂಪರೆಯ ವೈಭವವನ್ನು ಮೆರೆದರು.
ಈ ಸಂದರ್ಭದಲ್ಲಿ ಜಾತ್ರೆಯಲ್ಲಿ ಭಾಗವಹಿಸಿದ ಮುಖಂಡರು, ಹಿರಿಯರು ಹಾಗೂ ರೈತರೊಂದಿಗೆ ಸಂವಾದ ನಡೆಸಿದರು. ಗ್ರಾಮೀಣ ಸಂಪ್ರದಾಯ, ಜಾನುವಾರುಗಳ ಮಹತ್ವ ಮತ್ತು ರೈತರ ಜೀವನಶೈಲಿಯನ್ನು ಪ್ರತಿಬಿಂಬಿಸುವ ಈ ಜಾತ್ರೆಯ ವೈಭವ ಎಲ್ಲರ ಮನಸೆಳೆದಿತು.
ಅಮರಾಯಿ ಜಾತ್ರೆ ಗ್ರಾಮೀಣ ಸಂಸ್ಕೃತಿ ಹಾಗೂ ರೈತರ ಬದುಕಿನೊಂದಿಗೆ ಅಂಟಿಕೊಂಡಿರುವ ಪ್ರಮುಖ ಉತ್ಸವವಾಗಿದ್ದು, ಯುವ ರೈತರು ಸಹ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಜಾತ್ರೆಯಲ್ಲಿ ವಿವಿಧ ಜಾನುವಾರುಗಳ ಪ್ರದರ್ಶನ, ಖರೀದಿ–ಮಾರಾಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಗಮನಸೆಳೆದವು
---------------
ಹಿಂದೂಸ್ತಾನ್ ಸಮಾಚಾರ್ / jyothi deshpande