ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸ್ಟಚರ್ ಮೇಲೆ ಆಗಮಿಸಿ ಪರೀಕ್ಷೆಗೆ ಹಾಜರು
ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸ್ಟಚರ್ ಮೇಲೆ ಆಗಮಿಸಿ ಪರೀಕ್ಷೆಗೆ ಹಾಜರು
ಕೆಜಿಎಫ್ ನಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಕುಸುಮ ಎಂಬ ವಿದ್ಯಾರ್ಥಿನಿ ಆಂಬುಲೆನ್ಸ್ನಲ್ಲಿ ಆಗಮಿಸಿ ಪರೀಕ್ಷೆ ಬರೆದಳು.


ಕೋಲಾರ, ೧೮ ಮಾರ್ಚ್ (ಹಿ.ಸ)

ಆಂಕರ್ : ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದರೂ, ವಿದ್ಯಾರ್ಥಿನಿಯೊಬ್ಬಳು ಆಸಕ್ತಿಯಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದಿದ್ದಾರೆ. ಕೆಜಿಎಫ್ ಸೇಂಟ್ ಮೇರಿಸ್ ಹೈಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬಳು ಆಂಬುಲೆನ್ಸ್ನಲ್ಲಿ ಆಗಮಿಸಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಳು. ವಿದ್ಯಾರ್ಥಿನಿ ಕುಸುಮ ಕೆಜಿಎಫ್ ತಾಲ್ಲೂಕಿನ ಚಿನ್ನನಾಗನಹಳ್ಳಿಯ ನಿವಾಸಿ. ಕೆಜಿಎಫ್ ನ ಸೆಂಟ್ಮೇರಿಸ್ ಹೈ ಸ್ಕೂಲ್ನಲ್ಲಿ ಎಸ್ಎಸ್ ಎಲ್ ಸಿ ವ್ಯಾಸಂಗ ಮಾಡುತಿದ್ದು ಇತ್ತೀಚೆಗೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಳು ಸದ್ಯ ಶಸ್ತçಚಿಕಿತ್ಸೆ ನಡೆಯಬೇಕಾಗಿದ್ದು, ಆಸ್ಪತ್ರೆಯಲ್ಲೆ ಬಾಲಕಿ ಚಿಕಿತ್ಸೆ ಪಡೆಯುತಿದ್ದಳು. ತಾಯಿ ಸಹಾಯದೊಂದಿಗೆ ನಗರದ ಸೆಂಟ್ ಜೋಸೆಫ್ ಶಾಲೆಗೆ ಆಂಬುಲೆನ್ಸ್ನಲ್ಲೆ ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾಗಿ ಸ್ಟçಚರ್ ಬೆಡ್ ಮೇಲೆಯೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾಳೆ

ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ.ನಾರಾಯಣಸ್ವಾಮಿ ಅವರಿಂದ ಅನುಮತಿ ಪಡೆದು ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದಾಳೆ

ಜಿಲ್ಲೆಯ ೬೫ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಕೆಲವು ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಶಾಲಾ ಶಿಕ್ಷಣ ಉಪ ನಿದೇಶಕಿ ಅಲ್ಮಾಸ್ ಫರ್ವೀನ್ ತಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ಪರೀಕ್ಷೆ ಹಾಜರಾತಿ ಮಾಹಿತಿ ನೀಡಿ, ಮೊದಲ ದಿನ ೨೦೨ ಮಂದಿ ಗೈರಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಅವ್ಯವಹಾರ ನಡೆದಿಲ್ಲ, ಎಲ್ಲೂ ಗೊಂದಲಕ್ಕೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ ೧೯೦೯೮ ವಿದ್ಯಾರ್ಥಿಗಳ ಪೈಕಿ ೧೮೮೯೬ ಮಂದಿ ಹಾಜರಾಗಿದ್ದು, ೨೦೨ ಮಂದಿ ಮಂದಿ ಗೈರಾಗಿದ್ದರು.

ಬಂಗಾರಪೇಟೆ ತಾಲ್ಲೂಕಿನ ೮ ಕೇಂದ್ರಗಳಲ್ಲಿ ಪ್ರಥಮ ಭಾಷೆಗೆ ೨೫೪೭ ಮಂದಿ ನೊಂದಾಯಿಸಿದ್ದು, ೨೫೨೬ ಮಂದಿ ಹಾಜರಾಗಿ ೨೧ ಮಂದಿ ಗೈರಾಗಿದ್ದಾರೆ, ಕೆಜಿಎಫ್ ತಾಲ್ಲೂಕಿನ ೯ ಕೇಂದ್ರಗಳಲ್ಲಿ ೩೩೧೬ ಮಕ್ಕಳು ಹೆಸರು ನೊಂದಾಯಿಸಿದ್ದು, ೩೨೮೦ ಮಂದಿ ಹಾಜರಾಗಿ ೩೬ ಮಂದಿ ಗೈರಾಗಿದ್ದಾರೆ. ಕೋಲಾರ ತಾಲ್ಲೂಕಿನ ೧೮ ಕೇಂದ್ರಗಳಲ್ಲಿ ೪೮೧೧ ಮಂದಿ ಹೆಸರು ನೊಂದಾಯಿಸಿದ್ದು, ೪೭೭೪ ಮಂದಿ ಹಾಜರಾಗಿ ಕೇವಲ ೩೭ ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನ ೮ ಕೇಂದ್ರಗಳಲ್ಲಿ ೩೦೦೫ ಮಂದಿ ಹೆಸರು ನೊಂದಾಯಿಸಿದ್ದು, ೨೯೭೨ ಮಂದಿ ಹಾಜರಾಗಿದ್ದು, ೩೩ ಮಂದಿ ಗೈರಾಗಿದ್ದಾರೆ. ಮುಳಬಾಗಿಲು ತಾಲ್ಲೂಕಿನ ೧೨ ಕೇಂದ್ರಗಳಲ್ಲಿ ೨೮೬೫ ಮಂದಿ ನೊಂದಾಯಿಸಿದ್ದು, ೨೮೧೧ ಮಂದಿ ಹಾಜರಾಗಿದ್ದು, ೫೪ ಮಂದಿ ಗೈರಾಗಿದ್ದಾರೆ, ಶ್ರೀನಿವಾಸಪುರ ತಾಲ್ಲೂಕಿನ ೧೦ ಕೇಂದ್ರಗಳಲ್ಲಿ ೨೫೫೪ ಮಂದಿ ಹೆಸರು ನೊಂದಾಯಿಸಿದ್ದು, ೨೫೩೩ ಮಂದಿ ಹಾಜರಾಗಿದ್ದು, ೨೧ ಮಂದಿ ಗೈರಾಗಿದ್ದಾರೆ. ಮೊದಲ ದಿನದ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಯಾವುದೇ ಕೇಂದ್ರದಲ್ಲಿ ಯಾವುದೇ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ, ಪರೀಕ್ಷೆ ಸುಗಮವಾಗಿ ನಡೆಸುವಲ್ಲಿ ಜಿಲ್ಲಾಧಿಕಾರಿಗಳು,ಜಿಪಂ ಸಿಇಒ, ಎಸ್ಪಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ ಎಂದರು.

ಬೆಳಗ್ಗೆ ೯-೪೦ರಿಂದಲೇ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ನೀಡಲಾಗಿದ್ದು, ಕೋಲಾರ ನಗರದ ಅಲಮಿನ್ ಪ್ರೌಢಶಾಲೆ ಕೇಂದ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿಡಿಪಿಐ ಅಲ್ಮಾಸ್ ಫರ್ವೀನ್ತಾಜ್ ಅವರು ಮಕ್ಕಳಿಗೆ ಹೂ ನೀಡುವ ಮೂಲಕ ಸ್ವಾಗತಿಸಿ ಆತ್ಮಸ್ಥೆöÊರ್ಯ ತುಂಬಿದರು. ಮೊದಲ ದಿನದ ಪರೀಕ್ಷೆ ಬರೆಯುವ ಆತಂಕ ಮತ್ತು ಇಲಾಖೆ ಸಿಸಿ ಕ್ಯಾಮರಾ, ವೆಬ್ ಕಾಸ್ಟಿಂಗ್ ಮಾಡುತ್ತಿರುವ ಹಿನ್ನಲೆಯಲ್ಲಿ ಮಕ್ಕಳು ಭಯ ಕಾಡಿದ್ದರೂ ಮಕ್ಕಳು ಆತ್ಮಸ್ಥೆöÊರ್ಯದಿಂದಲೇ ಕೇಂದ್ರದತ್ತ ಬಂದಿದ್ದು ಕಂಡು ಬಂತು. ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು, ರಾಜ್ಯ ಜಾಗೃತದಳ ತಂಡ ಸೇರಿದಂತೆ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್, ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಶಂಕರೇಗೌಡ, ಶಿಕ್ಷಣಾಧಿಕಾರಿ ವೀಣಾ, ಡಿವೈಪಿಸಿಗಳಾದ ರಾಜೇಶ್ವರಿ, ಕೋಲಾರ ತಾಲ್ಲೂಕು ಬಿಇಒ ಮಧುಮಾಲತಿ ಪಡುವಣೆ, ವಿವಿಧ ತಾಲ್ಲೂಕುಗಳ ಬಿಇಒಗಳಾದ ಮಧುಮಾಲತಿ ಪಡುವಣೆ, ಶಶಿಕಲಾ, ನಾರಾಯಣಸ್ವಾಮಿ, ಕೆಂಪಯ್ಯ, ರಾಮಚಂದ್ರ, ಮುನಿಲಕ್ಷö್ಮಯ್ಯ ವಿಷಯ ಪರಿವೀಕ್ಷಕರಾದ ಸಮೀವುಲ್ಲಾ, ಕ್ರಿಸ್ಟಿನಾಬಬಿತಾ, ತಾಲ್ಲೂಕು ನೋಡಲ್ ಅಧಿಕಾರಿ ಇಸಿಒ ರಾಧಾ ಮತ್ತಿತರರು ಕೇಂದ್ರಗಳಿಗೆ ಭೇಟಿ ನೀಡಿದ್ದರು.

ಒಟ್ಟಾರೆ ಮೊದಲದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಮುಂದಿನ ಐದು ವಿಷಯಗಳ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವ ಆತ್ಮಸ್ಥೆöÊರ್ಯ ತಂದುಕೊಟ್ಟಿದೆ ಎಂದು ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ತಿಳಿಸಿದ್ದಾರೆ. ಅಲಮಿನ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಡಿಡಿಪಿಐ ಅಲ್ಮಾಸ್ ಫರ್ವೀನ್ತಾಜ್ ಅವರೊಂದಿಗೆ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಶಂಕರೇಗೌಡ ಕೇಂದ್ರದ ಮುಖ್ಯ ಅಧೀಕ್ಷಕ ವೇಣುಗೋಪಾಲ್, ಪ್ರಶ್ನೆಪತ್ರಿಕೆ ಅಭಿರಕ್ಷಕಿ ಮಂಜುಳಾ, ಸ್ಥಾನಿಕ ಜಾಗೃತದಳದ ವಿ.ಎಂ.ರಮೇಶ್, ಮೊಬೈಲ್ ಸ್ವಾಧೀನಾಧಿಕಾರಿ ಸಿಆರ್ಪಿ ಮೀನಾ, ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ಕೆ.ಬಿ.ಶಿವಶಂಕರರೆಡ್ಡಿ, ತಯಿಬಖಾನಂ, ಉಷಾರಾಣಿ, ಶ್ರೀನಿವಾಸಲು, ವಾಣಿಶ್ರೀ, ಶಿಲ್ಪಶ್ರೀ,ರೇಣುಕಾಲಕ್ಷಿö್ಮ, ಸವಿತ, ಫರೀದಾ ವಖಾನಂ, ಪುಷ್ಪ ಬಿ, ಯಾಸ್ಮೀನ್, ನಂಜುAಡಪ್ಪ, ರಮೇಶ್, ಮಂಜುನಾಥ್, ಜರೀನ್ ತಾಜ್, ಹರಿನಾಥ್ ಮತ್ತಿತರರಿದ್ದರು.

ಚಿತ್ರ : ಕೆಜಿಎಫ್ ನಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಕುಸುಮ ಎಂಬ ವಿದ್ಯಾರ್ಥಿನಿ ಆಂಬುಲೆನ್ಸ್ನಲ್ಲಿ ಆಗಮಿಸಿ ಪರೀಕ್ಷೆ ಬರೆದಳು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande