
ಕೋಲಾರ,ಮಾರ್ಚ,೧೮ (ಹಿ.ಸ.):
ಆಂಕರ್ ; ಕೋಲಾರದ ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ಆಶ್ರಯದಲ್ಲಿ ನಡೆದ ಚಿನ್ನದ ನಾಡು ಕಪ್ ಅಖಿಲ ಭಾರತ ಅಂತರ ಕಾಲೇಜಗಳ ಆಹ್ವಾನಿತ ಬ್ಯಾಸ್ಕೆಟ್ ಬ್ಯಾಲ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಜೈನ್ ಕಾಲೇಜಿನ ಪುರುಷರ ಮತ್ತು ಮಹಿಳಾ ತಂಡಗಳು ಚಿನ್ನದನಾಡು ಕಪ್ ಮುಡಿಗೇರಿಸಿಕೊಂಡವು.
ಅಂತಿಮ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ಬೆಂಗಳೂರಿನ ಜೈನ್ ಕಾಲೇಜಿನ ತಂಡ ಕ್ರೆಸ್ಟ್ ಕಾಲೇಜಿನ ತಂಡವನ್ನು ಪರಾಭವಗೊಳಿಸಿತು. ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಜೈನ್ ಕಾಲೇಜು ತಂಡ ತಮಿಳುನಾಡಿನ ಎಸ್.ಆರ್.ಎಂ. ತಂಡವನ್ನು ಪರಾಭವಗೊಳಿಸಿತು.
ಕೋಲಾರದ ಕುರುಬರಪೇಟೆಯ ಯುವಜನ ಸೇವಾ ಸ್ಟೇಡಿಯಂನಲ್ಲಿ ನಡೆದ ಅಖಿಲ ಭಾರತ ಮಟ್ಟದ ಪಂದ್ಯಾವಳಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬೆಂಗಳೂರಿನ ಜೈನ್ ಕಾಲೇಜಿನ ತಂಡಗಳು ಎರಡು ವಿಭಾಗಳಲ್ಲಿ ಕಪ್ ಗೆದ್ದವು. ಹೊನಲು ಬೆಳಕಿನ ಪಮದ್ಯಾವಳಿಗಳಲ್ಲಿ ಆಟಗಾರರು ಕ್ರೀಡಾ ಪ್ರೇಮಿಗಳಿಗೆ ರಸದೌತಣ ನೀಡಿದರು. ಅಜಾನು ಬಾಹು ಹಾಗು ಎತ್ತರದ ಆಟಗಾರ ಬೆಂಗಳೂರಿನ ಪೀಟರ್ ಕ್ರೀಡಾಪ್ರೇಮಿಗಳನ್ನು ರಂಜಿಸಿದರು. ವಿಜೇತ ತಂಡಗಳಿಗೆ ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಭಾಕರ್ ಕೋಲಾರ ನಗರ ಹಲವಾರು ಪ್ರತಿಭಾನ್ವಿತ ಆಟಗಾರರನ್ನು ಬ್ಯಾಸ್ಕೆಟ್ ಬಾಲ್ ಕ್ಷೇತ್ರಕ್ಕೆ ನೀಡಿದೆ. ಕೋಲಾರದ ಕ್ರೀಡಾಕೂಟಗಳು ರಾಷ್ಟ್ರ ಮತ್ತು ಅಂತಾರಾಷ್ಟಿಯ ಮಟದ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ. ಕೋಲಾರದಲ್ಲಿ ಹಲವಾರು ರಾಷ್ಟç ಮಟ್ಟದ ಪಂದ್ಯಾವಳಿಗಳು ನಡೆದಿವೆ. ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ಅಖಿಲ ಭಾರತ ಮಟ್ಟದ ಪಂದ್ಯಾವಳಿ ನಡೆಸಿ ಬ್ಯಾಸ್ಕೆಟ್ ಬ್ಯಾಲ್ ಕ್ರೀಡೆಯನ್ನು ಉತ್ತೇಜಿಸುತ್ತಿದೆ ಎಂದು ಶ್ಲಾಘಿಸಿದರು. ವಿಜೇತರಿಗೆ ಮತ್ತು ರನ್ರ್ಸ್ ತಂಡಗಳಿಗೆ ಪಂದ್ಯದ ಶ್ರೇಷ್ಟ ಆಟಗಾರರಿಗೆ ನಗದು ಬಹುಮಾನ ವಿತರಿಸಲಾಯಿತು. ಕ್ರೀಡಾ ಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ ಎಂದು ಕ್ರೀಡಾಕೂಟದಲ್ಲಿ ಭಾಗವಹಿಸಿದವರು ಮೆಚ್ಚುಗೆ ವ್ಯಕ್ಯಪಡಿಸಿದರು
ಅಧ್ಯಕ್ಷ ಮಧು ಕೆ.ಆರ್, ಕಾರ್ಯದರ್ಶಿ ವಿವೇಕ್.ಕೆ.ವಿ, ಭರತ್.ಕೆ, ಆನಂದ್ ಮತ್ತು ತಂಡವು ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಸಂಘಟಿಸಿ ಎಲ್ಲರ ಗಮನ ಸೆಳೆದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್