
ಕೋಲಾರ,೧೮ ಮಾರ್ಚ್ (ಹಿ.ಸ):
ಆಂಕರ್ : ಅರಣ್ಯ ಇಲಾಖೆ ಸೇರಿದ ಜಮೀನು ವಶಪಡಿಸಿಕೊಳ್ಳಲು ನಮ್ಮ ವಿರೋದಿಲ್ಲ ಅದರೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಹಾಗುತ್ತಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತಿ ಅರಣ್ಯ ಇಲಾಖೆ ಮಂತ್ರಿಗಳ ಗಮನ ಸೆಳೆದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈತರಿಂದ ಅರಣ್ಯ ಇಲಾಖೆ ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ ಅದರೆ ರೈತರು ನ್ಯಾಯಾಲಯದ ಮೊರೆ ಹೋಗಿದ್ದು ನ್ಯಾಯಾಲಯದಿಂದ ರೈತರ ಪರವಾಗಿ ಯಥಾಸ್ಥಿತಿ ಕಾಯ್ದುಗೊಳ್ಳಬೇಕು ಎಂದು ಆದೇಶವಿದೆ ಇದನ್ನು ಇತ್ತೀಚೆಗೆ ಉಸ್ತುವಾರಿ ಸಚಿವ ಭೈರತಿ ಸುರೇಶ್ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ ಎಂದು ವಿವರಿಸಿದರು.
ಈ ಬಗ್ಗೆ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಅವರಿಗೆ ತಿಳಿಸಿದ ಕೂಡಲೇ ಕೆಡಿಪಿ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ನ್ಯಾಯಾಲಯದಿಂದ ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಆದೇಶವಿದೆ ಹೌದು ಆದರೆ ಇಂದು ಆ ಜಮೀನಿನಲ್ಲಿ ಅರಣ್ಯ ಇಲಾಖೆಯೆ ಸ್ವಾದಿನದಲ್ಲಿದ್ದೇವೆ ಎನ್ನುತ್ತಾರೆ ಅದರೆ ರೈತರಿದ್ದ ಜಮೀನನ್ನು ವಶಕ್ಕೆ ಪಡೆದಿದ್ದು ಅದನ್ನು ಮನಗಂಡು ರೈತರ ಸ್ವಾಧಿನಕ್ಕೆ ತೊಂದರೆ ನೀಡಬಾರದು ಎಂದು ನ್ಯಾಯಾಲಯ ಸ್ಪಷ್ಟವಾಗಿ ಮಧ್ಯಂತರ ಆದೇಶವಿದೆ ಎಂದು ಸ್ಪಷ್ಟಪಡಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಅಧೇಶವನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದರೆ ಉಲ್ಲಂಘನೆ ಮಾಡುತ್ತಿಲ್ಲ ಎನ್ನುತ್ತಾರೆ ಕೆಡಿಪಿಸಭೆಯಲ್ಲಿ ತೀರ್ಮಾನದಂತೆ ಮೂರು ಎಕರೆಗಿಂತು ಕಡಿಮೆ ಇರುವ ರೈತರಿಗೆ ತೊಂದರೆ ನೀಡಬಾರದು ಎಂದು ಅರಣ್ಯ ಇಲಾಖೆ ಮಂತ್ರಿಗಳ ಬಳಿಯೂ ಚರ್ಚಿಸಿ ತೀರ್ಮಾನಿಸಲಾಗಿದೆ ಈ ವೆಳೆ ಮಂತ್ರಿಗಳೇ ಈ ಬಗ್ಗೆ ಸ್ಪಷ್ಟವಾದ ತೀರ್ಮಾನ ಕೈಗೊಳ್ಳವವರೆಗೂ ರೈತರಿಗೆ ತೊಂದರೆ ನೀಡಬಾರದು ಎಂದರೂ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ತೀವ್ರವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ವಿವರಿಸಿದರು.
ಅರಣ್ಯ ಇಲಾಖೆಗೆ ಸೇರಿದ ಜಮೀನುಗಳು ಅರಣ್ಯ ಇಲಾಖೆ ತಮ್ಮ. ವಶಕ್ಕೆ ಪಡೆಯಲು ಜಿಲ್ಲೆಯ ಎಲ್ಲಾ ಶಾಸಕರುಗಳ ಅಭಿಮತವಿದೆ. ಅದರೆ ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಕೈಗೆಟಗುವ ಸಂದರ್ಭದಲ್ಲಿ ನಾಶ ಪಡಿಸಿ ದೌರ್ಜನ್ಯದಿಂದ ವಶಕ್ಕೆ ಪಡೆಯಲಾಗುತ್ತಿದೆ ರೈತರು ಬೆಳೆದ ಫಸಲು ಕಟಾವಿಗಾದರೂ ಅವಕಾಶ ನೀಡಬಹುದಲ್ವಾ ಎಂದು ಪ್ರಶ್ನಿಸಿದರು.
ರಾತ್ರಿ ವೇಳೆ ಹಾಗೂ ನಸುಕಿನ ಬೆಳಗಿನ ಜಾವ ನೂರಾರು ಜೆಸಿಬಿ ಪೋಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆಗೆ ರೈತರ ಜಮೀನುಗಳನ್ನು ವಶಕ್ಕೆ ಪಡೆಯಲು ಹೋಗುತ್ತಾರೆ ಇದು ನ್ಯಾಯವೇ ಅವರು ನಮ್ಮ ದೇಶದ ರೈತರಲ್ಲವೇ ಎಂದರು.
ಶ್ರೀನಿವಾಸಪುರ ತಾಲ್ಲೂಕಿನ ಗ್ರಾಮವೊಂದ ಮೂನ್ನೂರಕ್ಕೂ ಹೆಚ್ಚು ಅರಣ್ಯ ಇಲಾಖೆಸಿಬ್ಬಂದಿ ಹಾಗೂ ಪೋಲೀಸರನ್ನು ಕರೆದುಕೊಂಡು ಹೋಗಿ ರೈತರ ಮನೆ ಬಳಿ ಇರುವ ಟ್ಯಾಕ್ಟರ್ ಗಳನ್ನ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಉಳಿಮೆ ಮಾಡುತ್ತಿದ್ದೀರಿ ಎಂದು ಸೀಜ್ ಮಾಡುತ್ತಾರೆ ಇದು ನ್ಯಾಯವೇ ಎಂದರಲ್ಲದೆ ಉಳುಮೆ ಮಾಡುವಾಗ ಸೀಸ್ ಮಾಡುವುದನ್ನು ಬಿಟ್ಟು ಗ್ರಾಮಗಳಿಗೆ ತೆರಳಿ ಸೀಸ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕೋಲಾರದಲ್ಲಿ ರೈತರಿಗೆ ತೀವ್ರವಾಗಿ ಸಮಸ್ಯೆ ಉಂಟಾಗುತ್ತಿದೆ ಅರಣ್ಯ ಇಲಾಖೆ ಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಕೋಲಾರಕ್ಕೆ ಬಂದು ಸಭೆ ಮಾಡಿ ಚರ್ಚಿಸಿ ಒಂದು ತೀರ್ಮಾನ ಕೈಗೊಳ್ಳೋಣ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖೆ ಮಂತ್ರಿ ಈಶ್ವರ್ ಬೀಮಣ್ಣ ಖಂಡ್ರೆ ಅವರು ಕೋಲಾರ ಜಿಲ್ಲೆಯೊಂದರದ್ದೆ ಹೈಕೋರ್ಟಿನಲ್ಲಿ ೧೫೦ ಪ್ರಕರಣಗಳಿವೆ ಉಳಿದ ೫೦ ಪ್ರಕರಣ ಸ್ಥಳಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ ಅದರೆ ನ್ಯಾಯಲಯದ ಅದೇಶವನ್ನು ಪ್ರತಿಯೊಬ್ಬರು ಪಾಲನೇ ಮಾಡಬೇಕಾಗಿದೆ ಹಾಗಾಗಿ ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ನ್ಯಾಯಾಲದ ಅದೇಶವನ್ನು ಪಾಲನೇಮಾಡಬೇಕು ಎಂದು ಸೂಚಿಸುವುದಾಗಿ ಭರವಸೆ ನೀಡಿದರು.
ಜನಪ್ರತಿನಿಧಿಗಳ ಬೇಡಿಕೆಯಂತೆ ಇಲಾಖೆ ಹಿರಿಯ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಮಂತ್ರಿ ಸೇರಿದಂತೆಸ್ಥಳಿಯ ಶಾಸಕರ ಜೊತೆಗೆ ಸಭೆ ಮಾಡಿ ಚರ್ಚಿಸಿ ತೀರ್ಮಾನ ಕೈಗೊಂಡು ಶಂಕೆಗಳನ್ನು ದೂರ ಮಾಡವುದಾಗಿ ಪ್ರತಿಕ್ರಿಯೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್