
ಕೊಪ್ಪಳ , 18 ಮಾರ್ಚ್ (ಹಿ.ಸ.):
ಆ್ಯಂಕರ್ : 139ನೇ ದಿನದಲ್ಲಿ ಬಲ್ಡೋಟ ತೊಲಗಿಸಿ, 20 ಕಾರ್ಖಾನೆ ಬಾಧಿತ ಹಳ್ಳಿಯ 50 ಸಾವಿರ ಜನರ ಜೀವ ಉಳಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, ತುಂಗಭದ್ರಾ ಜಲಾಶಯ ವಿಷಗೊಳಿಸಿದ ಕಾರ್ಖಾನೆಗಳನ್ನು ಸೀಜ್ ಮಾಡಿ ಎಂದು ನಡೆದ ಧರಣಿ ಬೆಂಬಲಿಸಿ ನಗರದ ಬಲ್ಡೋಟ ಕಾರ್ಖಾನೆ ಭೂಬಾಧಿತರಾದ ಬದರೀನಾರಾಯಣ ವೆರ್ಣೆಕರ್ ಮಾತನಾಡಿ, ಅಂದು 2007ರಲ್ಲಿ ಭೂಮಿಯ ಧರ ನಿಗದಿ ಮಾಡುವ ಜಿಲ್ಲಾಧಿಕಾರಿ, ಧಾರವಾಡ ವಿಶೇಷ ಭೂಸ್ವಾಧೀನ ಅಧಿಕಾರಿ, ಜಂಟಿ ಕೈಗಾರಿಕಾ ನಿರ್ದೇಶಕರು ಇರುವ ನಡಾವಳಿಯಲ್ಲಿ ಜಾಮೀನುಗಳನ್ನು ಕಾರ್ಖಾನೆಗೆ ನೀಡುವುದು ಸರಿಯಲ್ಲ. ಯಾಕೆಂದರೆ ಕಾರ್ಖಾನೆಗಳು ಪರಿಸರ ಮಾಲಿನ್ಯವನ್ನುಂಟು ಮಾಡುತ್ತವೆ. ಅಲ್ಲದೇ ಕೊಪ್ಪಳದಿಂದ ಕೇವಲ 500 ಮೀ. ಒಳಗೆ ಜಮೀನು ಕೊಡುವುದು ಸರಿಯಲ್ಲ. ಮುಂದೆ ಜೀವನ ನಡೆಸುವುದು ಅಸಾಧ್ಯವಾಗಿ ಅಶುದ್ಧ ವಾತಾವರಣದಲ್ಲಿ ಜೀವನ ಸಾಗಿಸಬೇಕಾಗುತ್ತದೆ.
ಈ ಕುರಿತು ಇಲ್ಲಿನ ಅಧಿಕಾರಿಗಳು ಮೊದಲು ಚಿಂತಿಸಬೇಕು. ಬೇಕಾದರೆ ಕೊಪ್ಪಳದಿಂದ ದೂರದಲ್ಲಿ ಕಾರ್ಖಾನೆ ಸ್ಥಾಪನೆಗೆ ಜಮೀನು ತೆಗೆದುಕೊಳ್ಳಿ ಎಂದು ಹೇಳಿದಾಗಲೂ ಒತ್ತಾಯಪೂರ್ವಕವಾಗಿ ನಮ್ಮ ಭೂಮಿ ಸ್ವಾಧೀನ ಮಾಡಿದರು. ನನ್ನ ಜಮೀನು ರೈಲ್ವೆ ಹಳಿ ಪಕ್ಕದಲ್ಲಿ ಇದ್ದು ಅಧಿಸೂಚನೆ ಮಾಡಿದ ನಕ್ಷೆಯಲ್ಲಿ ಇರಲಿಲ್ಲ. ಆದರೂ ಅವರ ಭೂದಾಹಕ್ಠೆ ಬಲಿಯಾಗಿ ಇದುವರೆಗೆ ನನ್ನ ನಾಲ್ಕು ಎಕರೆಗೆ ಹಣ ತೆಗೆದುಕೊಳ್ಳದೆ ಹೋರಾಡುತ್ತಿದ್ದೇನೆ. ಎಲ್ಲಾ ರೈತರು ನನ್ನ ಹಾಗೆ ಕೇವಲ ಭೂಮಿ ವಾಪಸ್ ಕೊಡಬೇಕೆಂದು ಹೋರಾಟ ಮಾಡಲು ಈ ವೇದಿಕೆಗೆ ಶಕ್ತಿ ತುಂಬೋಣ ಎಂದರು.
ರವಿವಾರ ರಾತ್ರಿ 10 ಗಂಟೆಗೆ ಕೊಪ್ಪಳ ನಗರಸಭೆ ಮುಂದಿನ ಧರಣಿ ಸ್ಥಳದಿಂದ ಬೆಂಗಳೂರು ಚಲೋ ನಡೆಸಲು ಮುಂದಾಗಿದ್ದು ಯುದ್ಧದ ಕಾರಣಕ್ಕೆ ಬೆಂಗಳೂರು ಹೋಟೇಲ್ ಗಳು ಬಂದ್ ಆಗಿದ್ದು ರೊಟ್ಟಿ ಬುತ್ತಿ ಕಟ್ಟಿಕೊಂಡು ಸತ್ಯಾಗ್ರಹ ನಡೆಸೋಣ ಎಂದರು.
ಧರಣಿಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಎಲ್.ಎಫ್. ಪಾಟೀಲ್, ಪ್ರಕಾಶಕ ಡಿ.ಎಂ. ಬಡಿಗೇರ, ರಮೇಶ ಸುರ್ವೆ, ನಿವೃತ್ತ ನ್ಯಾಯಾಂಗ ಅಧಿಕಾರಿ ಜಿ.ಬಿ. ಪಾಟೀಲ್, ರವಿ ಕಾಂತನವರ, ಚಾರಣ ಬಳಗದ ಸಿ.ಬಿ. ಪಾಟೀಲ್, ಗಂಗಾಧರ ಖಾನಾಪೂರ, ರಾಜಶೇಖರ ಏಳುಬಾವಿ, ಶರಣು ಶೆಟ್ಟರ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಕಿಶನ್ ಸುರ್ವೆ, ಎಸ್. ಮಹಾದೇವಪ್ಪ ಮಾವಿನಮಡು, ವೈ. ಸತ್ಯನಾರಾಯಣ, ಶಿವಪ್ಪ ಜಲ್ಲಿ, ವಿಜಯ ಮಹಾಂತೇಶ ಹಟ್ಟಿ, ಮಖ್ಬುಲ್ ರಾಯಚೂರು, ನಾಗರಾಜ ಕುಷ್ಟಗಿ, ಹನುಮಂತಪ್ಪ ಚಿಂಚಲಿ, ಹನುಮೇಶಪ್ಪ ಜಂತ್ಲಿ, ಪಂಪಣ್ಣ ಚಿಂತಪಲ್ಲಿ, ಬಸವರಾಜಪ್ಪ ಶೆಟ್ಟರ್ ಮುಂತಾದವರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್