ಮುಂದಿನ ತಲಮಾರು ಉಳಿಯಲು ಮಣ್ಣಿನ ಆರೋಗ್ಯ ಕಾಪಾಡಲು ಕರೆ
ಮುಂದಿನ ತಲಮಾರು ಉಳಿಯಲು ಮಣ್ಣಿನ ಆರೋಗ್ಯ ಕಾಪಾಡಲು ಕರೆ
ಮುಳಬಾಗಿಲಿನ ಭಾರತೀಯ ಕಿಸಾನ್ ಸಂಘ ಕಾರ್ಯಾಲಯದಲ್ಲಿ ಭೂಮಿ ಸುಪೋಷಣ ಒಂದು ತಿಂಗಳು ಕಾಲದ ಅಭಿಯಾನದ ಪೂರ್ವಭಾವಿ ಸಭೆ ನಡೆಯಿತು.


ಕೋಲಾರ, ೧೬ ಮಾರ್ಚ್ (ಹಿ.ಸ):

ಆಂಕರ್ : ಭೂಮಿ, ನೀರು ಕಲುಷಿತ ಹೋಗುತ್ತಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಿ ಮನುಷ್ಯನ ಆರೋಗ್ಯದ ಕ್ರಮೇಣವಾಗಿ ದುರ್ಬಲವಾಗುತ್ತಿದೆ ಇದಕ್ಕೆ ಪ್ರಮುಖ ಕಾರಣ ಭೂಮಿಯ ಮಣ್ಣಿನ ಪದರಗಳು ವಿಷಯುಕ್ತವಾಗುತ್ತಿರುವುದು ಎಂದು ಸಂಘದ ಗ್ರಾಮವಿಕಾಸ ಗತಿ ವಿಧಿ ಪ್ರಾಂತ ಸಹ ಸಂಯೋಜಕ ಕದ್ರಿಪುರ ವಿ. ನಾರಾಯಣಪ್ಪ ಆತಂಕ ವ್ಯಕ್ತಪಡಿಸಿದರು.

ಮುಳಬಾಗಿಲಿನ ಭಾರತೀಯ ಕಿಸಾನ್ ಸಂಘ ಕಾರ್ಯಾಲಯದಲ್ಲಿ ಭೂಮಿ ಸುಪೋಷಣ ಒಂದು ತಿಂಗಳು ಕಾಲದ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ನಮ್ಮ ಮುಂದಿನ ತಲೆಮಾರುಗಳು ಜೊತೆಗೆ ಜೀವಜಂತುಗಳು ಉಳಿಯಲು ಮಣ್ಣಿನ ಆರೋಗ್ಯ ಕಾಪಾಡಲು ಈಗಿನಿಂದಲೇ ನಗರ ಮತ್ತು ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕಾಗಿದೆ ಎಂದರು.

ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಮಣ್ಣಿನ ಆರೋಗ್ಯ ಕಾಪಾಡಲು ಈಗಿನಿಂದಲೇ ತಯಾರಿ ಮಾಡಿಕೊಂಡರೆ ಮಾತ್ರ ಮುಂದಿನ ೧೫೦ ರಿಂದ ೨೦೦ ವರ್ಷಗಳಲ್ಲಿ ಮನುಷ್ಯ ಉಳಿಯಲು ಸಾಧ್ಯವಾಗುತ್ತದೆ ಈಗಾಗಲೇ ಚಿಕ್ಕ ಮಕ್ಕಳಲ್ಲಿ ಸಕ್ಕರೆ ಕಾಯಿಲೆ, ಹೃದಯ ಸಮಸ್ಯೆ, ಕ್ಯಾನ್ಸರ್ ನಂತ ಗಂಭೀರ ಪ್ರಕರಣಗಳು ವರದಿಯಾಗುತ್ತಿವೆ ಮಾನವ ಸಂಪನ್ಮೂಲ ಜೊತೆಗೆ ಸೃಷ್ಟಿಯಲ್ಲಿ ನಮ್ಮೊಂದಿಗೆ ಇರಬೇಕಾದ ಜೀವ ಜಂತುಗಳು ಬದುಕಲು ಮಣ್ಣಿನ ಆರೋಗ್ಯ ಕಾಪಾಡಲು ಗ್ರಾಮ ಗ್ರಾಮಗಳಲ್ಲಿ ನಗರದ ಗಲ್ಲಿ ಗಲ್ಲಿಗಳಲ್ಲಿ ಈ ಬಗ್ಗೆ ಅರಿವು ಮೂಡಬೇಕಾಗಿದೆ ಎಂದರು.

ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಯುಗಾದಿಯಿಂದ ಒಂದು ತಿಂಗಳ ಕಾಲ ಭೂಮಿ ಸುಪೋಷಣ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಭಾರತೀಯ ಕಿಸಾನ್ ಸಂಘದ ಸಹಯೋಗದಲ್ಲಿ ತಾಲೂಕಿನ ೫ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ನಂತರದ ಕಾರ್ಯಕ್ರಮ ನಂತರ ೩೦ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ನಗರದ ಪ್ರತಿ ವಾರ್ಡ್ ನಲ್ಲೂ ಈ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜನರು ಸ್ವ ಪ್ರೇರಣೆಯಿಂದ ಪಾಲ್ಗೊಳ್ಳುವ ಮೂಲಕ ನಮ್ಮ ನಿಮ್ಮೆಲ್ಲರ ಮುಂದಿನ ತಲೆಮಾರುಗಳು ಆರೋಗ್ಯವಂತವಾಗಿ ಇರುವಂತೆ ನೋಡಿಕೊಳ್ಳಬೇಕಾಗಿದೆ ಒಂದು ಕಾರ್ಯಕ್ರಮ ಒಂದು ಎರಡು ದಿನಗಳಲ್ಲಿ ಮಾಡುವ ಕಾರ್ಯಕ್ರಮವಲ್ಲ ನಿರಂತರವಾಗಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎಂ. ಅಪ್ಪಾಜಿಗೌಡ ಮಾತನಾಡಿ ಗೋ ಆಧಾರಿತ ಕೃಷಿ ಚಟುವಟಿಕೆ ನಡೆಯುತ್ತಿದ್ದಾಗ ಭೂಮಿಯ ಮೇಲಿರುವ ಮಣ್ಣು ಸಮೃದ್ಧವಾಗಿದ್ದು ಇದರಿಂದ ಕೆರೆ ಕುಂಟೆಗಳು ನದಿ ನಾಲೆಗಳ ನೀರು ಉತ್ತಮವಾಗಿತ್ತು ಇದರಿಂದ ಪರಿಸರವು ಪರಿಶುದ್ಧವಾಗಿತ್ತು, ಆದರೆ ಮಣ್ಣಿಗೆ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರುಗಳು ಕೀಟನಾಶಕಗಳು ಬಳಕೆ ಮಾಡಿದ್ದರಿಂದ ಬೆಳೆದ ಬೆಳೆಗಳು , ಪರಿಸರವು ಕಲುಷಿತವಾಗಿ ಕ್ರಮೇಣವಾಗಿ ವಿಷ ಹೆಚ್ಚಾಗಿ ಒಂದು ಕಡೆ ಮಣ್ಣಿನ ಆರೋಗ್ಯ ಕೆಟ್ಟರೆ ಇನ್ನೊಂದು ಕಡೆ ಮನುಷ್ಯನ ಆರೋಗ್ಯವು ಕೆಡುತ್ತಿದೆ ಆದುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಾವಯವ ಗೊಬ್ಬರ ಬಳಕೆ ಮಾಡುವುದರ ಜೊತೆಗೆ ನೈಸರ್ಗಿಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.

ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಉಗನಿ ಆರ್. ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಟಿ. ಗಂಗಾಪುರ ಮುನಿರಾಮಯ್ಯ, ಜಿಲ್ಲಾ ಖಜಂಚಿ ವಕೀಲ ವಿ. ಜಯಪ್ಪ, ಹಿರಿಯ ರಂಗಭೂಮಿ ಕಲಾವಿದ ಚೇತನ್ ಪ್ರಸಾದ್, ಬಟ್ಲ ಬಾವನಹಳ್ಳಿ ಚಲಪತಿ, ಮಾರಾಂಡಹಳ್ಳಿ ಜಿ. ನಾರಾಯಣಸ್ವಾಮಿ, ಬೇವಹಳ್ಳಿ ಬಿ. ಎನ್. ಗಣೇಶನ್, ವಿ. ನಾಗರಾಜ್, ಕೃಷ್ಣಪ್ಪ ಸೇರಿದಂತೆ ಕಿಸಾನ್ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande