ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೆರ್ಯ ತುಂಬಿಸಲು ಪೋಷಕರಿಗೆ ಉಪ ನಿರ್ದೇಶಕರ ಕರೆ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೆರ್ಯ ತುಂಬಿಸಲು ಪೋಷಕರಿಗೆ ಉಪ ನಿರ್ದೇಶಕರ ಕರೆ
ಕೋಲಾರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ತಾಜ್


ಕೋಲಾರ, ೧೬ ಮಾರ್ಚ್ (ಹಿ.ಸ):

ಆಂಕರ್ : ಜೀವನದಲ್ಲೇ ಮೊದಲ ಬಾರಿಗೆ ಪಬ್ಲಿಕ್ ಪರೀಕ್ಷೆ ಎದುರಿಸುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ನಿಂದಿಸದಿರಿ, ಆತ್ಮಸ್ಥೆರ್ಯ ತುಂಬಿ ಎಂದು ಪೋಷಕರಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಮನವಿ ಮಾಡಿದ್ದಾರೆ. ರಾಜ್ಯಾದ್ಯಂತ ಮಾ.೧೮ ರಿಂದ ಆರಂಭಗೊಳ್ಳುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ದರಾಗಿದ್ದಾರೆ, ಅವರಲ್ಲಿ ಸಕಾರಾತ್ಮಕ ಭಾವನೆ ಬೆಳೆಸಿ, ಮನಸ್ಸಿಗೆ ನೋವಾಗುವ ರೀತಿ ನಿಂದಿಸದಿರಿ ಎಂದು ಸಲಹೆ ನೀಡಿದ್ದಾರೆ.

ಪರೀಕ್ಷೆಗೆ ಸಿದ್ದರಾಗಿರುವ ಮಕ್ಕಳಿಗೆ ಶಾಲಾ ಶಿಕ್ಷಣ ಇಲಾಖೆ ಪರವಾಗಿ ಶುಭ ಕೋರಿರುವ ಅವರು, ಗುಣಾತ್ಮಕ ಫಲಿತಾಂಶದ ದೃಷ್ಟಿಯಿಂದ ಮತ್ತು ಮಕ್ಕಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಲು ಹಲವಾರು ಸೂಚನೆ,ಸಲಹೆಗಳನ್ನು ನೀಡಿದ್ದಾರೆ. ಉತ್ತೀರ್ಣನಾಗುತ್ತೇನೆಂಬ ಆತ್ಮವಿಶ್ವಾಶದಿಂದ ಹಾಗೂ ಶಿಕ್ಷಕರ ಮಾರ್ಗದರ್ಶನದಂತೆ ಅಭ್ಯಾಸ ಮಾಡಿ ಪಠ್ಯಪುಸ್ತಕ ಅಧ್ಯಯನಕ್ಕೆ ಒತ್ತು ನೀಡಿ ಎಂದು ಕರೆ ನೀಡಿದ್ದಾರೆ.

ಬರವಣಿಗೆ ಸುಂದರವಾಗಿರಲಿ, ಕಾಗುಣಿತ ತಪ್ಪಾಗದಂತೆ ಎಚ್ಚರವಹಿಸಿ, ಓದುವ ಸಂದರ್ಭದಲ್ಲಿ ಏಕಾಗ್ರತೆ ಇರಲಿ, ಓದುವಾಗ ಮುಖ್ಯ ಅಂಶಗಳನ್ನು ಗುರುತು ಮಾಡಿಕೊಳ್ಳಿ, ಸ್ನೇಹಿತರೊಂದಿಗೆ ಪಠ್ಯಕ್ಕೆ ಸಂಬಂಧಿಸಿದಂತೆ ಪರಸ್ಪರ ಚರ್ಚೆ ಮಾಡಿ ಎಂದು ತಿಳಿಸಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಮ್ಮ ಮುಂದಿನ ಶಿಕ್ಷಣಕ್ಕೆ ಬುನಾದಿಯಾಗಿದೆ, ಪರೀಕ್ಷಾ ಭಯ ಬಿಡಿ, ನಾನು ಫೇಲಾಗುತ್ತೇನೆ,ಪಾಸಾಗಲು ಸಾಧ್ಯವಿಲ್ಲ ಎಂಬ ಋಣಾತ್ಮಕ ಮನೋಭಾವ ಬಿಡಿ,ನೀವು ಯಾರೂ ದಡ್ಡರಲ್ಲ, ಎಲ್ಲರಲ್ಲೂ ಒಂದೇ ಮಾದರಿ ಗ್ರಹಿಕೆ ಇರುವುದಿಲ್ಲ, ಗ್ರಹಿಕೆ ಕಡಿಮೆ ಇರುವವರು ನಿರಂತರ ಓದು, ಗುಂಪು ಚಟುವಟಿಕೆ ಮೂಲಕ ಗ್ರಹಿಕೆ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರು.

ಪರೀಕ್ಷೆಗೆ ತೆರಳುವ ಮಕ್ಕಳನ್ನು ಕ್ಷÄಲ್ಲಕ ಕಾರಣಗಳಿಗೆ ನಿಂದಿಸುವುದು, ಬೈಯುವುದರಿಂದ ಅವರ ಮನಸ್ಸಿಗೆ ಘಾಸಿಯಾಗುತ್ತದೆ. ಆದ್ದರಿಂದ ಮನೆಯಿಂದ ಹೊರಡುವಾಗ ಸಂತೋಷದಿಂದ ಹಾರೈಸಿ ಕಳುಹಿಸಿಕೊಡಿ ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ. ಪೋಷಕರು ಪರೀಕ್ಷೆಯ ಮೊದಲ ದಿನ ನಿಮ್ಮ ಮಕ್ಕಳನ್ನು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಕರೆ ತಂದು ಆಸನ ವ್ಯವಸ್ಥೆ ಬಗ್ಗೆ ಮಾರ್ಗದರ್ಶನ ನೀಡಿ ಅವರಲ್ಲಿ ಗೊಂದಲ, ಗಾಬರಿಗೆ ಅವಕಾಶವಿಲ್ಲದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದ್ದಾರೆ. ಪರೀಕ್ಷಾ ಕೊಠಡಿಯ ಸಂಖ್ಯೆ ಹಾಗೂ ಆಸನ ವ್ಯವಸ್ಥೆಯ ಬಗ್ಗೆ ಗೊಂದಲವುಂಟಾದರೆ ಗಾಬರಿಗೊಳ್ಳಬೇಡಿ, ಕೇಂದ್ರದ ಮುಖ್ಯ ಅಧೀಕ್ಷಕರನ್ನು ಸಂಪರ್ಕಿಸಿ ನಿಮ್ಮ ಗೊಂದಲವನ್ನು ಬಗೆಹರಿಸಿಕೊಳ್ಳಲು ಸಲಹೆ ನೀಡುತ್ತಾರೆ. ಪರೀಕ್ಷಾ ಕೇಂದ್ರಕ್ಕೆ ಗೈಡ್, ಪುಸ್ತಕ, ಚೀಟಿ, ಮೊಬೈಲ್ನಂತಹ ಎಲೆಕ್ಟಾçನಿಕ್ ಉಪಕರಣಗಳನ್ನು, ಎಲೆಕ್ಟಾçನಿಕ್, ಸ್ಮಾರ್ಟ್ ವಾಚ್ ತರುವಂತಿಲ್ಲ, ಯಾಂತ್ರಿಕ ಗಡಿಯಾರ ಬಳಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ. ದ್ವಿತೀಯ ಹಾಗೂ ತೃತೀಯ ಭಾಷೆಗೆ ಬೆಳಗ್ಗೆ ೧೦ ಗಂಟೆಯಿಂದ ೧ ಗಂಟೆವರೆಗೂ ಹಾಗೂ ಪ್ರಥಮ ಭಾಷೆ ಮತ್ತು ಐಚ್ಚಿಕ ವಿಷಯಗಳಿಗೆ ೧೦ ಗಂಟೆಯಿಂದ ೧-೧೫ರವರೆಗೂ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ದಿನ ಮೊದಲ ಬೆಲ್ ಬೆಳಿಗ್ಗೆ ೯-೪೫ ಕ್ಕೆ ಆಗುತ್ತದೆ. ಆಗ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಿ ನಿಗಧಿಪಡಿಸಿದ ಆಸನದಲ್ಲಿ ಕುಳಿತುಕೊಳ್ಳಬೇಕು. ೨ನೇ ಬೆಲ್ ೯-೫೫ ಮೂರನೇ ಬೆಲ್ ೧೦ ಗಂಟೆಗೆ ಇದ್ದು ಪ್ರಶ್ನೆಪತ್ರಿಕೆ ನೀಡಲಾಗುವುದು. ನಂತರ ೧೦-೧೦ ಉತ್ತರ ಪತ್ರಿಕೆಗಳನ್ನು ಮಕ್ಕಳಿಗೆ ವಿತರಿಸಲಾಗುವುದು.

ಪ್ರತಿ ವಿಷಯಕ್ಕೂ ಪ್ರತ್ಯೇಕ ಬಣ್ಣದ ಉತ್ತರ ಪತ್ರಿಕೆ ನೀಡುತ್ತಿದ್ದು, ಕನ್ನಡ, ಇಂಗ್ಲೀಷ್, ಹಿಂದಿ,ಸಮಾಜವಿಜ್ಞಾನಕ್ಕೆ ನೀಲಿ ಬಣ್ಣದ ಮೇಲ್ಪುಟವಿರುವ ಉತ್ತರ ಪತ್ರಿಕೆ ನೀಡಲಾಗುವುದು, ಉಳಿದಂತೆ ವಿಜ್ಞಾನಕ್ಕೆ ಆರೆಂಜ್ ಬಣ್ಣ, ಗಣಿತಕ್ಕೆ ಹಸಿರು ಬಣ್ಣದ ಮೇಲ್ಪುಟವಿರುವ ಉತ್ತರ ಪತ್ರಿಕೆ ನೀಡಲಾಗುವುದು. ವಿಜ್ಞಾನಕ್ಕೆ ಈಬಾರಿ ವಿಶೇಷವಾಗಿ ಭೌತಶಾಸ್ತç, ರಸಾಯನ ಶಾಸ್ತç, ಜೀವಶಾಸ್ತç ಮುಖಪುಟದಲ್ಲಿ ಭಾಗ ಮಾಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಪ್ರವೇಶ ಪತ್ರ ಕಳೆದು ಹೋದರೆ ಗಾಬರಿ ಪಡಬೇಡಿ, ಮುಖ್ಯ ಅಧೀಕ್ಷರನ್ನು ಭೇಟಿಯಾಗಿ ತಿಳಿಸಿದರೆ, ಅವರಲ್ಲಿ ಕೇಂದ್ರ ನಾಮಿನಲ್ ರೋಲ್ನಡಿ ಪರೀಕ್ಷೆ ಬರೆಯಲು ಒಂದು ದಿನ ಅವಕಾಶ ನೀಡುತ್ತಾರೆ. ನಂತರ ಮುಖ್ಯ ಶಿಕ್ಷರನ್ನು ಕಂಡು ಪ್ರವೇಶ ಪತ್ರ ಮತ್ತೊಂದು ಪಡೆಯಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಡಿಡಿಪಿಐ ಅಲ್ಮಾಸ್ ಫರ್ವೀನ್ತಾಜ್, ಶಿಕ್ಷಣಾಧಿಕಾರಿ ಡಾ.ಎಸ್.ಆರ್.ವೀಣಾ, ಡಿವೈಪಿಸಿ ರಾಜೇಶ್ವರಿ, ನಹೀದ್ ಫಾತಿಮಾ, ಪರೀಕ್ಷಾ ನೋಡಲ್ ಅಧಿಕಾರಿ ಶಂಕರೇಗೌಡ,ಬಿಇಒಗಳಾದ ಮಧುಮಾಲತಿ ಪಡುವಣೆ, ಶಶಿಕಲಾ, ನಾರಾಯಣಸ್ವಾಮಿ, ಕೆಂಪಯ್ಯ, ರಾಮಚಂದ್ರ, ಮುನಿಲಕ್ಷö್ಮಯ್ಯ ವಿಷಯ ಪರಿವೀಕ್ಷಕರಾದ ಸಮೀವುಲ್ಲಾ, ಕ್ರಿಸ್ಟಿನಾಬಬಿತಾ, ಮತ್ತಿತರರು ಗುಣಾತ್ಮಕ ಫಲಿತಾಂಶ ತನ್ನಿ ಎಂದು ಮಕ್ಕಳಿಗೆ ಶುಭ ಹಾರೈಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande