
ಕೋಲಾರ, ೧೩ ಮಾರ್ಚ್ (ಹಿ.ಸ)
ಆ್ಯಂಕರ್ :
ಕೋಲಾರ ತಾಲೂಕಿನ ಸುಗಟೂರಿನ ಅಂತಾರಾಷ್ಟ್ರೀಯ ಜಾನಪದ ಕಲಾವಿದ ಗೋ.ನಾ ಸ್ವಾಮಿ ನೇತೃತ್ವದಲ್ಲಿ ಬ್ಯಾಂಕಾಕ್ ನ ಶಾರದಾ ಯೂನಿವರ್ಸಿಟಿಯಲ್ಲಿ ಯುಗಾದಿ ವಸಂತೋತ್ಸವ ಜಾನಪದ ಸಂಗೀತ ಕಾರ್ಯಕ್ರಮವನ್ನು ಥಾಯ್ ಕನ್ನಡ ಬಳಗ, ಜಾನಪದ ಸಂರಕ್ಷಣಾ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಥಾಯ್ ಕನ್ನಡ ಬಳಗದ ಅಧ್ಯಕ್ಷ ಮುತ್ತುರಾಜ್ ಆರ್ಯ ಸಮಾಜದ ಪೂರ್ಣಿಮಾ ದೇಶಪಾಂಡೆ, ಜಾನಪದ ಸಂರಕ್ಷಣಾ ಪರಿಷತ್ ಅಧ್ಯಕ್ಷ ಗೋ.ನಾ ಸ್ವಾಮಿ, ಕಾರ್ಯದರ್ಶಿ ಮತ್ತಿಕುಂಟೆ ಕೃಷ್ಣ, ಜಾನಪದ ಜಾತ್ರೆ ಪ್ರಧಾನ ನಿರ್ದೇಶಕ ಸರ್ವೋತ್ತಮ್, ಸಾಂಸ್ಕೃತಿಕ ಸಂಘಟಕ ಜಯಸಿಂಹ, ಜಾನಪದ ಜಾತ್ರೆಯ ನಿರ್ದೇಶಕ ಸಿದ್ದರಾಮು ಹಾಗೂ ಖ್ಯಾತ ನಿರೂಪಕಿ ಪದ್ಮಶ್ರೀ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಕರ್ನಾಟಕದಿಂದ ಆಗಮಿಸಿದ ಸುಮಾರು ೨೦ ಜಾನಪದ ಕಲಾವಿದರು ಕಾರ್ಯಕ್ರಮವನ್ನು ನಡೆಸಿಕೊಟ್ಟರು ಬ್ಯಾಂಕಾಕ್ ನಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡದ ಅಭಿಮಾನವನ್ನು ಮೆರೆದರು. ಕಲಾವಿದರಿಗೆ ಗೌರವ ಸಮರ್ಪಣೆ ನೀಡಲಾಯಿತು ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್