ಬ್ಯಾಸ್ಕೆಟ್ ಬಾಲ್ ಚಿನ್ನದ ನಾಡು ಕಪ್ ಆಲ್ ಇಂಡಿಯಾ ಟೂರ್ನಮೆಂಟ್ ಆರಂಭ
ಬ್ಯಾಸ್ಕೆಟ್ ಬಾಲ್ ಚಿನ್ನದ ನಾಡು ಕಪ್ ಆಲ್ ಇಂಡಿಯಾ ಟೂರ್ನಮೆಂಟ್ ಆರಂಭ
ಕೋಲಾರ ನಗರದಲ್ಲಿ ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ಆಶ್ರಯದಲ್ಲಿ ಅಖಿಲ ಭಾರತ ಅಂತರ ಕಾಲೇಜು ಬ್ಯಾಸ್ಕೆಟ್ ಬಾಲ್ ಟೂನಿರ್ಯಯಲ್ಲಿ ತಮಿಳುನಾಡಿನ ಹಿಂದುಸ್ತಾನ್ ತಂಡ ಹಾಗೂ ಬೆಂಗಳೂರಿನ ಕ್ರೆöÊಸ್ಟ್ ಕಾಲೇಜಿನ ತಂಡಗಳು ಸೆಣಸಾಟ ನಡೆಸಿದವು.


ಕೋಲಾರ, ೧೩ ಮಾರ್ಚ್ (ಹಿ.ಸ):

ಆ್ಯಂಕರ್: ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ಆಶ್ರಯದಲ್ಲಿ ಆಲ್ ಇಂಡಿಯಾ ಇಂಟರ್ ಕಾಲೇಜಿಯೆಟ್ ಯೂನಿವರ್ಸಿಟಿ ಇನ್ವಿಟೇಷನಲ್ ಬ್ಯಾಸ್ಕೆಟ್ ಬಾಲ್ ಟೂರ್ನಿಮೆಂಟ್ ಚಿನ್ನದ ನಾಡು ಕಪ್ ನಾಲ್ಕು ದಿನಗಳ ವರ್ಣರಂಜಿತ ಪ್ಲಡ್ ಲೈಟ್ ಟೂರ್ನಿಮೆಂಟ್ ಇಲ್ಲಿನ ಯುವಜನ ಸೇವಾ ಇಲಾಖೆಯ ಬ್ಯಾಸ್ಕೆಟ್ ಬಾಲ್ ಆವರಣದಲ್ಲಿ ಆರಂಭವಾಯಿತು. ಜೈನ್ ಯೂನಿವರ್ಸಿಟಿ ಕರ್ನಾಟಕ ಮತ್ತು ಕುಮಾರ ಗುರು ತಮಿಳುನಾಡು ಪುರುಷರ ವಿಭಾಗದಲ್ಲಿ ಪಂದ್ಯಗಳು ಶುಭಾರಂಭಗೊಂಡವು. ಡಿ.ಐ.ಜಿಪಿ ಡಿ. ದೇವರಾಜ್ ಶುಭ ಕ್ರೀಡಾಪಟುಗಳಿಗೆ ಹಾರೈಸಿದರು.

ಶ್ರೀನಿವಾಸ ನರ್ಸ್ಸಿಂಗ್ ಹೋಂ ಮಾಲೀಕರಾದ ಡಾ. ಶಂಕರ್, ವಶೋಂದಯ ನರ್ಸ್ಸಿಂಗ್ ಹೋಂ ಮಾಲೀಕರಾದ ಡಾ. ಅರವಿಂದ್. ಶ್ರೀ ಸತ್ಯನಾರಾಯಣ ಜ್ಯೂವೆರ್ಸ್ ಮಾಲೀಕರಾದ ಎಸ್. ವೆಂಕಟೇಶ್ ಹಾಗೂ ಕೌಶಿಕ್, ಎಪಿಎಂಸಿಯ ಎಸ್ಎಸ್ಟಿ. ಮಂಡಿ ಮಾಲೀಕರಾದ ರೆಡ್ಡಿ, ನಗರಸಭೆ ಮಾಜಿ ಸದಸ್ಯ ಸಿ.ಸೋಮಶೇಖರ್ ಹಾಗೂ ಇಂಡಿಯನ್ ವಾಲಿಬಾಲ್ ಹಾಗೂ ಬ್ಯಾಸ್ಕೆಟ್ ಬಾಲ್ ಕ್ರೀಡಾ ಪಟು ಜಗದೀಶ್ ಅವರುಗಳಿಗೆ ಕ್ರೀಡಾ ತಂಡವನ್ನು ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ಅಧ್ಯಕ್ಷ ಮಧು ಪರಿಚಯಿಸಿದರು.

ತಮಿಳು ನಾಡು ,ಕೇರಳ , ಆಂದ್ರ ಪ್ರದೇಶ್ ,ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಒಟ್ಟು ೧೦ ಯೂನಿವರ್ಸಿಟಿ ತಂಡಗಳು ಭಾಗವಹಿಸಿವೆ. ಈ ಪೈಕಿ ೬ ಬಾಲಕರ ತಂಡ ಹಾಗೂ ೪ ಮಹಿಳಾ ತಂಡಗಳು ನೊಂದಾಯಿಸಿ ಕೊಂಡಿದ್ದವು.

ಆರಂಭಿಕವಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕದ ಬೆಂಗಳೂರಿನ ಜೈನ್ ಯೂನಿವರ್ಸಿಟಿ ಬ್ಯಾಸ್ಕೆಟ್ ಬಾಲ್ ತಂಡ ಮತ್ತು ತಮಿಳು ನಾಡು ಕೊಯಮತ್ತೂರು ಕುಮಾರ ಗುರು ಬ್ಯಾಸ್ಕೆಟ್ ಬಾಲ್ ತಂಡದ ನಡುವೆ ಮೊದಲ ಪಂದ್ಯ ನಡೆದಿದ್ದು, ಡಿಜಿಐಪಿ ದೇವರಾಜ್ ಸೇರಿದಂತೆ ಗಣ್ಯರು ಕುಳಿತು ವೀಕ್ಷಿಸಿದರು.

ಈ ಪಂದ್ಯದಲ್ಲಿ ವಿರಾಮದ ವೇಳೆಗೆ ಜೈನ್ ತಂಡಕ್ಕೆ ೩೦ ಪಾಯಿಂಟ್ ಕುಮಾರ ಗುರು ತಂಡಕ್ಕೆ ೧೯ ಪಾಯಿಂಟ್ ಗಳಿಸಿತ್ತು. ಅಂತಿಮವಾಗಿ ಜೈನ್ ತಂಡವು ೭೧ ಪಾಯಿಂಟ್ಗಳು ಹಾಗೂ ಕುಮಾರ ಗುರು ತಂಡವು ೫೧ ಪಾಯಿಂಟ್ ಗಳಿಸಿತು. ಬೆಂಗಳೂರಿನ ಜೈನ್ ಯೂನಿವರ್ಸಿಟಿ ತಂಡವು ೨೦ ಪಾಯಿಂಟ್ಗಳಿAದ ಜಯಗಳಿಸಿತು.

ಎರಡನೇ ಪಂದ್ಯವು ಬೆಂಗಳೂರಿನ ಕ್ರೆöÊಸ್ತ್ ಯೂನಿವರ್ಸಿಟಿ ಕಾಲೇಜ್ ತಂಡ ಮತ್ತು ತಮಿಳು ನಾಡಿನ ಹಿಂದುಸ್ತಾನದ ಟೆಕ್ನಾಲಾಗಿ ಯೂನಿವರ್ಸಿಟಿ ತಂಡದ ನಡುವೆ ಏರ್ಪಟ್ಟಿತ್ತು. ತಮಿಳು ನಾಡಿನ ಹಿಂದುಸ್ತಾನ್ ತಂಡವು ೭೭ ಪಾಯಿಂಟ್ ಪಡೆದರೆ ಕ್ರೆöÊಸ್ತ್ ತಂಡವು ೭೦ ಪಾಯಿಂಟ್ ಗಳಿಸಿತು. ಹಿಂದುಸ್ತಾನ್ ತಂಡವು ೭ ಪಾಯಿಂಟ್ಗಳಿAದ ಜಯಬೇರಿ ಬಾರಿಸಿದೆ.

ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯ ಅಂಪೈರ್ಗಳಾಗಿ ಪ್ರಭಾಕರ್, ಅವಿನಾಶ್ ಹಾಗೂ ಈಶ್ವರ್ ಸಿಂಗ್ ಅವರುಗಳು ನಿರ್ವಹಿಸಿದ್ದರು. ಅಧುನಿಕ ತಂತ್ರಜ್ಞಾನದಿAದ ಕೊಡಿದ ವಿದ್ಯುತ್ ಚಾಲಿತ ಪಾಯಿಂಟ್ ಬೋರ್ಡ್ ಅಳವಡಿಸಲಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande