ಇರಾನ್ನೊಂದಿಗಿನ ಸಮಸ್ಯೆ ಬಗೆಹರಿದರೂ ಅನಿಲ ಬಿಕ್ಕಟ್ಟು ಕೊನೆಗೊಳ್ಳುವುದಿಲ್ಲ: ರಾಹುಲ್ ಗಾಂಧಿ
ನವದೆಹಲಿ, 12 ಮಾರ್ಚ್ (ಹಿ.ಸ.): ಆ್ಯಂಕರ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿನ ಇಂಧನ ಸಂಕಷ್ಟ ಕುರಿತು ಮಾತನಾಡಿದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ , ಇರಾನ್‌ನೊಂದಿಗಿನ ಸಮಸ್ಯೆ ಪರಿಹಾರವಾದರೂ ಅನಿಲ ಬಿಕ್ಕಟ್ಟು ತಕ್ಷಣ ಅಂತ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.
Rahul gandhi


ನವದೆಹಲಿ, 12 ಮಾರ್ಚ್ (ಹಿ.ಸ.):

ಆ್ಯಂಕರ್:

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿನ ಇಂಧನ ಸಂಕಷ್ಟ ಕುರಿತು ಮಾತನಾಡಿದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ , ಇರಾನ್‌ನೊಂದಿಗಿನ ಸಮಸ್ಯೆ ಪರಿಹಾರವಾದರೂ ಅನಿಲ ಬಿಕ್ಕಟ್ಟು ತಕ್ಷಣ ಅಂತ್ಯವಾಗುವುದಿಲ್ಲ ಎಂದು ಎಚ್ಚರಿಸಿದರು. ಜಗತ್ತಿನ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆ ವೇಗವಾಗಿ ಬದಲಾಗುತ್ತಿರುವುದರಿಂದ ಭಾರತವೂ ತನ್ನ ಮನೋಭಾವ ಮತ್ತು ನೀತಿಗಳನ್ನು ಬದಲಾಯಿಸಬೇಕು ಎಂದು ಅವರು ಹೇಳಿದರು.

ಲೋಕಸಭೆಯ ಕಲಾಪದ ಬಳಿಕ ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಎಲ್‌ಪಿಜಿ ಮತ್ತು ತೈಲ ಸಂಬಂಧಿತ ಸಮಸ್ಯೆಗಳ ಲಕ್ಷಣಗಳು ಈಗಲೇ ಕಾಣಿಸಿಕೊಳ್ಳುತ್ತಿವೆ ಎಂದು ತಿಳಿಸಿದರು. ಈ ವಿಷಯದ ಕುರಿತು ಸದನದಲ್ಲಿ ಮಾತನಾಡಲು ತಾವು ಬಯಸಿದ್ದರೂ, ಹೊಸ ಕಾರ್ಯವಿಧಾನದ ಹಿನ್ನೆಲೆಯಲ್ಲಿ ಅವಕಾಶ ಸಿಕ್ಕಿಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿ ಅಭಿಪ್ರಾಯಪಡಿಸಿದಂತೆ, ಭಾರತದ ಇಂಧನ ಭದ್ರತೆ ಈಗ ಸವಾಲಿನ ಹಂತವನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ ಅನಿಲ, ಪೆಟ್ರೋಲ್ ಸೇರಿದಂತೆ ವಿವಿಧ ಇಂಧನಗಳ ಪೂರೈಕೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಈಗಲೇ ಸೂಕ್ತ ಸಿದ್ಧತೆಗಳನ್ನು ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರಿಗೆ ತೊಂದರೆ ಉಂಟಾಗಬಹುದು ಎಂದು ಅವರು ಎಚ್ಚರಿಸಿದರು.

ಇದು ಕೇವಲ ಇರಾನ್ ನಿಂದ ಇಂಧನವನ್ನು ಪಡೆಯಬೇಕೆ ಅಥವಾ ಬೇಡವೆ ಎಂಬ ಪ್ರಶ್ನೆಯಷ್ಟೇ ಅಲ್ಲ; ಜಗತ್ತು ಅಸ್ಥಿರತೆಯ ಹೊಸ ಹಂತಕ್ಕೆ ಪ್ರವೇಶಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹಳೆಯ ಚಿಂತನೆಗಳು ಫಲಕಾರಿಯಾಗುವುದಿಲ್ಲ ಮತ್ತು ಹೊಸ ದೃಷ್ಠಿಕೋನ ಅಗತ್ಯ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ದೇಶದ ಇಂಧನ ಭದ್ರತೆಯನ್ನು ಖಚಿತಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸರ್ಕಾರ ಈಗಲೇ ಸಿದ್ಧತೆಗಳನ್ನು ಆರಂಭಿಸಿದರೆ ಮಾತ್ರ ಭವಿಷ್ಯದ ಸಂಕಷ್ಟವನ್ನು ತಪ್ಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande