ಲೋಕಸಭೆಯ ಘನತೆಯನ್ನು ಕಾಪಾಡಿಕೊಳ್ಳುವಂತೆ ರಾಹುಲ್ ಗಾಂಧಿಗೆ ಸ್ಪೀಕರ್ ಸಲಹೆ
ನವದೆಹಲಿ, 12 ಮಾರ್ಚ್ (ಹಿ.ಸ.): ಆ್ಯಂಕರ್: ಲೋಕಸಭೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಯುವ ವೇಳೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸದನದ ಘನತೆಯನ್ನು ಕಾಪಾಡಿಕೊಳ್ಳುವಂತೆ ಹಾಗೂ ಸಂಸದೀಯ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿ
Om birla


ನವದೆಹಲಿ, 12 ಮಾರ್ಚ್ (ಹಿ.ಸ.):

ಆ್ಯಂಕರ್:

ಲೋಕಸಭೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಯುವ ವೇಳೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸದನದ ಘನತೆಯನ್ನು ಕಾಪಾಡಿಕೊಳ್ಳುವಂತೆ ಹಾಗೂ ಸಂಸದೀಯ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.

ಎಲ್‌ಪಿಜಿ ಅನಿಲ ಕೊರತೆ ಮತ್ತು ಇಂಧನ ಭದ್ರತೆ ಕುರಿತು ಮಾತನಾಡಲು ರಾಹುಲ್ ಗಾಂಧಿ ನೋಟಿಸ್ ನೀಡಿದ್ದರು. ಸ್ಪೀಕರ್ ಅದಕ್ಕೆ ಅನುಮತಿ ನೀಡಿದ ಬಳಿಕ ಅವರು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಅದರ ಪರಿಣಾಮಗಳ ಬಗ್ಗೆ ಮಾತನಾಡಲು ಆರಂಭಿಸಿದರು. ಆದರೆ ತಮ್ಮ ಭಾಷಣದಲ್ಲಿ ಅಮೆರಿಕದ ಉದ್ಯಮಿ ಜೆಫ್ರಿ ಎಪ್ಸ್ಟೀನ್ ಮತ್ತು ಹೂಡಿಕೆದಾರ ಜಾರ್ಜ್ ಸೊರೊಸ್ ಅವರ ವಿಷಯವನ್ನು ಪ್ರಸ್ತಾಪಿಸಿದಾಗ ಸ್ಪೀಕರ್ ಮಧ್ಯೆ ಪ್ರವೇಶಿಸಿದರು.

ಈ ಸಂದರ್ಭದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು, ರಾಹುಲ್ ಗಾಂಧಿ ಅನಿಲ ಬಿಕ್ಕಟ್ಟು ಹಾಗೂ ಇಂಧನ ಭದ್ರತೆ ಕುರಿತಾಗಿ ಮಾತ್ರ ಮಾತನಾಡಲು ನೋಟಿಸ್ ನೀಡಿದ್ದರು. ಬೇರೆ ವಿಷಯಗಳನ್ನು ಚರ್ಚಿಸಲು ಮುಂಚಿತವಾಗಿ ನೋಟಿಸ್ ನೀಡಬೇಕು ಎಂದು ತಿಳಿಸಿದರು. ನೋಟಿಸ್ ಇಲ್ಲದೆ ಇತರ ವಿಷಯಗಳನ್ನು ಉಲ್ಲೇಖಿಸುವುದು ಸಂಸದೀಯ ನಿಯಮಗಳಿಗೆ ಅನುಗುಣವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಂಸತ್ತು ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರವೇ ಕಾರ್ಯನಿರ್ವಹಿಸುತ್ತದೆ. ಸದನದ ಘನತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಸದಸ್ಯರ ಜವಾಬ್ದಾರಿಯಾಗಿದೆ ಮತ್ತು ಎಲ್ಲರೂ ನಿಯಮಗಳನ್ನು ಪಾಲಿಸಬೇಕು ಎಂದು ಸ್ಪೀಕರ್ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ರಾಹುಲ್ ಗಾಂಧಿ, ಹಾರ್ಮುಜ ಜಲಸಂಧಿ ಮೂಲಕ ವಿಶ್ವದ ಸುಮಾರು 20 ಶೇಕಡಾ ತೈಲ ಸಾಗಾಟ ನಡೆಯುತ್ತದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಮತ್ತು ಯುದ್ಧ ಪರಿಸ್ಥಿತಿ ಭಾರತದ ಇಂಧನ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಇದರ ಪರಿಣಾಮವಾಗಿ ಎಲ್‌ಪಿಜಿ ಕೊರತೆ, ಹೋಟೆಲ್-ರೆಸ್ಟೋರೆಂಟ್‌ಗಳ ಸಮಸ್ಯೆ ಹಾಗೂ ರಸ್ತೆಬದಿ ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮ ಕಾಣಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಆದರೆ ಎಪ್ಸ್ಟೀನ್ ಮತ್ತು ಸೊರೊಸ್ ಸಂಬಂಧಿಸಿದ ಆರೋಪಗಳನ್ನು ಅವರು ಉಲ್ಲೇಖಿಸಲು ಮುಂದಾದಾಗ, ಅದು ಸದನಕ್ಕೆ ಸಲ್ಲುವ ವಿಷಯವಲ್ಲ ಎಂದು ಸ್ಪೀಕರ್ ತಕ್ಷಣ ತಡೆದು, ಇಂಧನ ಭದ್ರತೆ ವಿಷಯದ ಮೇಲೆ ಮಾತ್ರ ಮಾತನಾಡುವಂತೆ ಸೂಚಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande