
ಗದಗ, 12 ಮಾರ್ಚ್ (ಹಿ.ಸ.)
ಆ್ಯಂಕರ್:- ಭಾರತೀಯ ಜನತಾ ಪಾರ್ಟಿ ಗದಗ ವಿಧಾನಸಭಾ ಕ್ಷೇತ್ರ ಗದಗ ಗ್ರಾಮೀಣ ಮಂಡಲ ಸಂಘಟನಾ ಸಭೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮೀಣ ಮಂಡಲ ಅಧ್ಯಕ್ಷರಾದ ಬೂದಪ್ಪ ಹಳ್ಳಿ ರವರು ವಹಿಸಿಕೊಂಡು ಮಾತನಾಡಿದ ಅವರು ನಾವೆಲ್ಲ ಬಿಜೆಪಿ ಪಕ್ಷದ ಪದಾಧಿಕಾರಿಗಳಾಗಿದ್ದು ನಾವೆಲ್ಲ ಪುಣ್ಯವಂತರು ಎಂದರು ಹಾಗು ಪಕ್ಷದ ಏಳಿಗೆಗಾಗಿ ಎಲ್ಲರು ಶ್ರಮಿಸೊಣ ಎಂದರು.
ಮುಖ್ಯಅತಿಥಿಗಳಾಗಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ರವರು ಆಗಮಿಸಿ ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಲ್ಲಿ ಗಟ್ಟಿಗೊಳಿಸುವ ಕುರಿತು ಎಳೆ, ಎಳೆಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಹಳ್ಳೂರಮಠ, ಸುಭಾಸ ಸುಂಕದ, ಹಿರಿಯರಾದ ಬಿ.ಎಸ್.ಚಿಂಚಲಿ, ಜಿಲ್ಲಾ ಉಪಾಧ್ಯಕ್ಷರಾದ ನಿಂಗಪ್ಪ ಹುಗ್ಗಿ, ಅಶೋಕ ಕರೂರ, ಪ್ರಮುಖರಾದ ವಾಯ್.ಪಿಅಡ್ನೂರ, ವೆಂಕಟೇಶ ಕೋಣಿ, ರಾಜು ಕುಲಕರ್ಣಿ, ರೇಖಾ ಮದ್ನೂರ, ನಾಗರಾಜ ಮದ್ನೂರ, ಸಿದ್ದಪ್ಪ ಈರಗಾರ, ಹನುಮಂತಪ್ಪ ದಿಂಡೆಣ್ಣವರ, ಡಿ.ಬಿ.ಕರೀಗೌಡ್ರ, ಅಪ್ಪು ನಮಸ್ತೆಮಠ, ಲಕ್ಷ್ಮಣ ರಣತೂರ, ಅರವಿಂದ ಅಣ್ಣಿಗೇರಿ, ನಾರಾಯಣ ಘೊಡ್ಕೆ, ಅಲ್ಲಾಸಾಬ್ ಪಿರಕಾನವರ, ಗೋಪಾಲ ನಾಯಕ್, ಸಿದ್ಲಿಂಗಪ್ಪ ಬೆಂತೂರ, ಮಲ್ಲೆರಪ್ಪ ಬೆಂತೂರ, ಮೋಹನ ಕೋರಿ, ಶ್ರೀಕಾಂತ ಹೊಸಮನಿ, ಪ್ರಕಾಶ ದೊಡ್ಡಮನಿ, ಲಕ್ಷ್ಮಣ ಕಟಗಿ, ಪರಶುರಾಮ ಬಡಿಗೇರ ಹಾಗು ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP