ಎಸ್ಎಸ್ಎಲ್ಸಿ ಪರೀಕ್ಷೆ:ನಾಳೆ ನೇರಫೋನ್ ಇನ್ ಕಾರ್ಯಕ್ರಮ
ಚಿತ್ರದುರ್ಗ, 11 ಮಾರ್ಚ್ (ಹಿ.ಸ.): ಆ್ಯಂಕರ್: ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕೆಯ ಅಗತ್ಯ ಸಿದ್ಧತಾ ಕ್ರಮಗಳ ಕುರಿತು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಆಕಾಶವಾಣಿ ಚಿತ್ರದುರ್ಗ ಎಫ್.ಎಂ. ಕೇಂದ್ರದ ವತಿಯಿಂದ ಇದೇ ಮಾರ್ಚ್ 12ರಂದು ನೇರಫೋನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ
ಎಸ್ಎಸ್ಎಲ್ಸಿ ಪರೀಕ್ಷೆ:ನಾಳೆ ನೇರಫೋನ್ ಇನ್ ಕಾರ್ಯಕ್ರಮ


ಚಿತ್ರದುರ್ಗ, 11 ಮಾರ್ಚ್ (ಹಿ.ಸ.):

ಆ್ಯಂಕರ್:

ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕೆಯ ಅಗತ್ಯ ಸಿದ್ಧತಾ ಕ್ರಮಗಳ ಕುರಿತು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಆಕಾಶವಾಣಿ ಚಿತ್ರದುರ್ಗ ಎಫ್.ಎಂ. ಕೇಂದ್ರದ ವತಿಯಿಂದ ಇದೇ ಮಾರ್ಚ್ 12ರಂದು ನೇರಫೋನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಾರ್ಚ್ 12ರಂದು ಬೆಳಿಗ್ಗೆ 10 ಗಂಟೆ 5 ನಿಮಿಷದಿಂದ 11 ಗಂಟೆ 5 ನಿಮಿಷದವರೆಗೆ ಹಮ್ಮಿಕೊಂಡಿರುವ ನೇರಫೋನ್ ಇನ್ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಶಿಕ್ಷಣಾಧಿಕಾರಿ ಮೊಹಮ್ಮದ್ ಇನಾಯತ್ ಉಲ್ಲಾ, ವಿಷಯ ಪರಿವೀಕ್ಷಕ ಕೆ.ಜಿ.ಪ್ರಶಾಂತ್ ಪಾಲ್ಗೊಳ್ಳಲಿದ್ದು, ವಿದ್ಯಾರ್ಥಿಗಳು, ಪೋಷಕರು ಸಾರ್ವಜನಿಕರು ದೂರವಾಣಿ ಸಂಖ್ಯೆ 9448640273, 9141970272, 08194-295649 ಗೆ ಕರೆ ಮಾಡಬಹುದು.

ನೇರ ಸಂವಾದ: ಆಕಾಶವಾಣಿ ಚಿತ್ರದುರ್ಗ ಎಫ್.ಎಂ ಕೇಂದ್ರದಿಂದ ಮಾರ್ಚ್ 12ರಂದು ರಾತ್ರಿ 9.15ಕ್ಕೆ “ಸಾಹಿತ್ಯ ಸಪ್ತ ಸ್ವರ ನೇರ ಸಂವಾದ” ಕಾರ್ಯಕ್ರಮದಲ್ಲಿ ಚಿತ್ರದುರ್ಗ ಬುಡಕಟ್ಟು ಸಮುದಾಯಗಳ ಸಾಂಸ್ಕøತಿಕ ಅನನ್ಯತೆ” ಕುರಿತು ಹಿರಿಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ಜಿ.ಡಿ.ಚಿತ್ತಣ್ಣ ಸೀಗೆಹಟ್ಟಿ ಅವರೊಂದಿಗೆ ಸಂದರ್ಶನ ನಡೆಯಲಿದೆ. ಡಾ.ನವೀನ್ ಮಸ್ಕಲ್ ಸಂದರ್ಶನ ನಡೆಸುವರು. ಈ ಕಾರ್ಯಕ್ರಮವನ್ನು ಪ್ರಸಾರದ ಸಮಯದಲ್ಲಿ ಜಗತ್ತಿನಾದ್ಯಂತ ಕೇಳಲು News on Air download ಮಾಡಿ ಕೇಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande