ಇರಾನ್-ಇಸ್ರೇಲ್ ಜಾಗತೀಕ ಯುದ್ದದ ಪರಿಣಾಮ ; ರೈತರಿಗೆ ಬೆಲೆ ಏರಿಕೆಯ ಬಿಸಿ
ಇರಾನ್-ಇಸ್ರೇಲ್ ಜಾಗತೀಕ ಯುದ್ದದ ಪರಿಣಾಮ ; ರೈತರಿಗೆ ಬೆಲೆ ಏರಿಕೆಯ ಬಿಸಿ
ಸಿಎಂಆರ್ ಶ್ರೀನಾಥ್


ಕೋಲಾರ,ಮಾ.೧೧:(ಹಿ.ಸ):

ಆ್ಯಂಕರ್:ಪ್ರಪಂಚಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲಿಯಂ ಕಚ್ಚಾ ತೈಲ ಸರಬರಾಜು ಮಾಡುತ್ತಿರುವ ಗಲ್ಪ್ ರಾಷ್ಟ್ರಗಳಲ್ಲಿ ಯುದ್ದ ನಡೆಯುತ್ತಿರುವ ಪರಿಣಾಮ ಕೃಷಿ ಸಲಕರಣೆಗಳ ಬೆಲೆಯೇರಿಕೆಯಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ ಕೃಷಿ ಸಲಕರಣೆಗಳ ಬೆಲೆಯೇರಿಕೆಯನ್ನು ನಿಯಂತ್ರಿಸಬೇಕು ಎಂದು ಪ್ರಗತಿಪರ ರೈತ ಮತ್ತು ಜೆಡಿಎಸ್ ಮುಖಂಡ ಸಿ.ಎಂ.ಆರ್ ಶ್ರೀನಾಥ್ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದಲ್ಲಿ ಶೇ.೬೦ ರಷ್ಟು ಜನತೆ ಕೃಷಿಯನ್ನೇ ಆಧರಿಸಿದ್ದು ಆಧುನಿಕತೆ ಮುಂದುವರೆದAತೆ ರೈತರು ಅಧಿಕ ಮತ್ತು ಗುಣಮಟ್ಟದ ಇಳುವರಿ ತೆಗೆಯಲು ತಮ್ಮ ಕೃಷಿ ಚಟುವಟಿಕೆಗಳಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕೃಷಿಯಲ್ಲಿ ಪ್ಲಾಸ್ಟೀಕ್ ಸಂಬAಧಿತ ಉಪಕರಣಗಳ ಬಳಕೆ ಹೆಚ್ಚಾಗಿದ್ದು ಪ್ಲಾಸ್ಟೀಕ್ ಉತ್ಪನ್ನಗಳ ತಯಾರಿಕೆಗೆ ಮುಖ್ಯವಾಗಿ ಪೆಟ್ರೋಲಿಯಂ ಕಚ್ಚಾ ತೈಲ ಹೆಚ್ಚು ಬಳಸಲಾಗುತ್ತದೆ. ಪೆಟ್ರೋಲಿಯಂ ಕಚ್ಚಾ ತೈಲ ಹೆಚ್ಚು ಉತ್ಪಾದನೆ ಮಾಡುವ ಗಲ್ಪ್ ರಾಷ್ಟ್ರಗಳಲ್ಲಿ ಈಗ ಯುದ್ದ ನಡೆಯುತ್ತಿರುವ ಕಾರಣ ಕಚ್ಚಾ ತೈಲ ಸರಬರಾಜು ಸ್ಥಗಿತಗೊಂಡಿದ್ದು ಅದರ ಪರಿಣಾಮ ಕೃಷಿ ಸಲಕರಣೆಗಳ ಉತ್ಪಾದನೆ ಕಡಿಮೆಯಾಗುತ್ತಿದ್ದು ರೈತರಿಗೆ ನಿಗದಿಯಷ್ಟು ಪೂರೈಸಲಾಗದ ಪರಿಣಾಮ ಸಲಕರಣೆಗಳ ಬೆಲೆ ಏರಿಕೆ ಮಾಡಲಾಗುತ್ತಿದೆ.

ಕೃಷಿಗೆ ಬಳಸಲಾಗುವ ಹನಿ ನೀರಾವರಿ ಬಳಸುವ ಪಿ.ವಿ.ಸಿ ಪೈಪ್ ಗಳು ಒಂದು ಪೈಪ್ ೩೦೦ ರೂಗಳಿಂದ ರೂ.೩೫೦ ಕ್ಕೆ ಏರಿಯಾಗಿದ್ದರೆ ಮಲ್ಚಿಂಗ್ ಪೇಪರ್ ಪ್ರತಿ ಕೆ.ಜಿ ರೂ. ೨೮೦ ರಿಂದ ರೂ. ೩೩೦ ಕ್ಕೆ ಏರಿಕೆಯಾಗಿದೆ, ಬೆಳೆಗಳನ್ನು ಬಿಸಿಲಿನ ತಾಪಮಾನದಿಂದ ತಡೆಯಲು ಬಳಸುವ ಶೇಡ್ ನೆಟ್ ಪ್ರತಿ ಮೀಟರ್ ರೂ.೧೬ ರಿಂದ ರೂ.೨೨ ಕ್ಕೆ ಏರಿಕೆಯಾಗಿದೆ, ಟಮೋಟ ಸೇರಿದಂತೆ ತರಕಾರಿ ಬೆಳೆಗಳಿಗೆ ಬಳಸುವ ಪ್ಲಾಸ್ಟೀಕ್ ದಾರ ಪ್ರತಿ ಕೆ.ಜಿ ೧೬೦ ರಿಂದ ರೂ.೨೩೦ ಕ್ಕೆ ಏರಿಕೆಯಾಗಿದೆ ಮತ್ತು ಹೂವು ಬೆಳೆಗಳ ಗುಣಮಟ್ಟ ಕಾಪಾಡಲು ಅವುಗಳ ಮೇಲೆ ಹೊದಿಸಲು ಬಳಸುವ ಶೇಡ್ ನೆಟ್ ಪ್ರತಿ ಮೀಟರ್ ಗೆ ರೂ.೧೬೦ ರಿಂದ ರೂ.೨೩೦ ಕ್ಕೆ ಏರಿಕೆಯಾಗಿದ್ದು ಟಮೋಟ, ಹೂವು ಸರಬರಾಜು ಮಾಡುವ ೧೫ ಕೆ.ಜಿ ಪ್ರತಿ ಬಾಕ್ಸ್ ರೂ.೧೩೦ ರಿಂದ ರೂ.೨೪೦ ಕ್ಕೆ ಏರಿಕೆಯಾಗಿದೆ ಈ ಎಲ್ಲಾ ಕೃಷಿ ಸಂಬAಧಿತ ಕೃಷಿ ಸಲಕರಣೆಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ರೈತರಿಗೆ ತೀವ್ರ ಹೊರೆಯಾಗುತ್ತಿದ್ದು ಈಗಾಗಲೇ ದುಬಾರಿ ವೆಚ್ಚ ಭರಿಸಿ ಕೃಷಿ ಮಾಡುತ್ತಿರುವ ರೈತರಗೆ ಯುದ್ದ ಕಾರಣದಿಂದ ಕೃಷಿ ಸಲಕರಣೆಗಳ ಬೆಲೆ ಇನ್ನಷ್ಟು ಏರಿಕೆಯಾಗಿರುವ ಕಾರಣ ರೈತರು ದುಬಾರಿ ವೆಚ್ಚ ಭರಿಸಲಾಗದೆ ಕೃಷಿ ಚಟುವಟಿಕೆಗಳಿಂದ ಹಿಂಜರಿಯುವAತಹ ಪರಿಸ್ಥಿತಿ ಎದುರಾಗಿದೆ ಇದರಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪಾದನೆ ಕಡಿಮೆಯಾಗಿ ಮುಂದಿನ ಎರಡು ತಿಂಗಳುಗಳಲ್ಲಿ ಕೃಷಿ ಉತ್ಪಾದನೆ ಕಡಿಮೆಯಾಗಿ ಸಾರ್ವಜನಿಕರಿಗೆ ಕೃಷಿ ಉತ್ಪನ್ನಗಳ ಬೆಲೆ ದುಬಾರಿಯಾಗಿ ಸಾರ್ವಜನಿಕರಿಗೆ ಹೊರೆಯಾಗುತ್ತದೆ ಮತ್ತು ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಇದು ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ...

ಯುದ್ದ ಹೀಗೆ ಇನ್ನೂ ಮುಂದುವರೆಯುವ ಸಂಭವವಿರುವುದರಿAದ ರೈತರ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಆದ್ದರಿಂದ ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಸಲಕರಣೆಗಳು ಮತ್ತು ಅವುಗಳಿಗೆ ಬೇಕಾಗುವ ಪ್ಲಾಸ್ಟೀಕ್ ವಸ್ತುಗಳು ಹಾಗು ಕಚ್ಚಾ ತೈಲ ವಸ್ತುಗಳ ಬೆಲೆಯನ್ನು ನಿಯಂತ್ರಿಸುವAತೆ ಕ್ರಮ ಕೈಗೊಳ್ಳಬೇಕೆಂದು ರೈತ ಮುಖಂಡ ಸಿ.ಎಂ.ಆರ್ ಶ್ರೀನಾಥ್ ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande