ದೇಶದ ಆಡಳಿತವನ್ನು ನಿರ್ವಹಿಸಲು ಮಹಿಳೆ ಸಮರ್ಥಗಳು ; ನ್ಯಾಯಮೂರ್ತಿ ಶಕುಂತಲಾ
ದೇಶದ ಆಡಳಿತವನ್ನು ನಿರ್ವಹಿಸಲು ಮಹಿಳೆ ಸಮರ್ಥಗಳು ; ನ್ಯಾಯಮೂರ್ತಿ ಶಕುಂತಲಾ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ಜಡ್ಜ್ ಹಾಗೂ ಸಿಜೆಎಂ ಎಸ್.ಶಂಕು0ತಲಾ, ವಿವಿಯ ಕುಲಪತಿ ಪ್ರೊ.ಬಿ.ಕೆ.ರವಿ,ಲೇಖಕಿಯರ ಸಂಘದ ಅಧ್ಯಕ್ಷೆ ಸುನಂದಮ್ಮ ಭಾಗವಹಿಸಿದ್ದರು.


ಕೋಲಾರ, ೧೧ ಮಾರ್ಚ್ (ಹಿ.ಸ):

ಆಂಕರ್ : ಮಾನವರಲ್ಲಿ ಮಾನವೀಯತೆ ಬೆಳೆಸಿ. ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಸಮಾನವಾಗಿ ಬದುಕಬೇಕು ಮತ್ತು ಮಹಿಳೆ ಅಡುಗೆ ಮನೆ ಮಾತ್ರವಲ್ಲ ದೇಶದ ಆಡಳಿತವನ್ನೂ ನಿರ್ವಹಿಸಲು ಸಮರ್ಥಳು ಎಂದು ಸಾರುವ ದಿನವೇ ವಿಶ್ವ ಮಹಿಳಾ ದಿನ ಎಂದು ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ಜಡ್ಜ್ ಹಾಗೂ ಸಿಜೆಎಂ ಎಸ್.ಶಂಕು0ತಲಾ ಹೇಳಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸ0ದ್ರದಲ್ಲಿನ ಸುವರ್ಣಗಂಗೆ ಕ್ಯಾಂಪಸ್ನಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

`ಮಹಿಳೆಯರ ಏಳಿಗೆಯೇ ಭಾರತದ ಏಳಿಗೆ' ಎಂಬ ಧ್ಯೇಯ ವಾಕ್ಯ ಪಾಲಿಸಿದರೆ ಸಮಾಜದಲ್ಲಿ ಅಸಮಾನತೆಯ ಅಂಧಕಾರ ನಶಿಸಿ ಸಮಾನತೆಯ ಬೆಳಕು ಪಸರಿಸುತ್ತಿದೆ ಎಂದು ತಿಳಿಸಿದ ಅವರು, ಇಂದು ಮಹಿಳೆ ಎಲ್ಲಾ ರಂಗಗಳಲ್ಲೂ ತನ್ನ ಶಕ್ತಿ,ಸಾಮರ್ಥ್ಯ ಪ್ರದರ್ಶಿಸಿದ್ದಾಳೆ ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಅವರು ಹೇಳಿದಂತೆ ಒಂದು ಸಮುದಾಯದ ಪ್ರಗತಿಯನ್ನು ಅಲ್ಲಿನ ಮಹಿಳೆಯರು ಸಾಧಿಸಿರುವ ಸಾಧನೆಯ ಆಧಾರದ ಮೇಲೆ ಅಳೆಯಬೇಕು ಎಂಬುದನ್ನು ಮರೆಯಬಾರದು, ಮಹಿಳೆ ಕೇವಲ ಅಬಲೆ ಅಲ್ಲ; ಅವಳು ಶತ್ ಮತ್ತು ಶಕ್ತಿ ಅಂದರೆ ಸ್ತಿ ಪ್ರತಿರೂಪ `ಮಹಾ - ಇಳೆ' ಆಗಿದ್ದಾಳೆ. ಇಂದು ಸಮಾಜದಲ್ಲಿ ಶಾಂತಿ, ಪ್ರೀತಿ ಮತ್ತು ಮಮತೆಯಿಂದ ಬದುಕಲು ಅವಕಾಶ ನೀಡಿರುವುದು ನಮ್ಮ ಸಂವಿಧಾನವೇ ಆಗಿದೆ. ಸಂವಿಧಾನವಿಲ್ಲದ ರಾಷ್ಟಗಳಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ಗಮನಿಸಬಹುದು. ನಮ್ಮ ಸಂವಿಧಾನ ಮಹಿಳಾ ಪರವಾಗಿರುವುದನ್ನು ಅದರ ಪೀಠಿಕೆಯೇ ಸ್ಪಷ್ಟವಾಗಿ ತಿಳಿಸುತ್ತದೆ. ಸಂವಿಧಾನ ಸಮಾನತೆಯನ್ನು ನೀಡಿದರೂ, ಅದನ್ನು ಜಾರಿಗೊಳಿಸುವಲ್ಲಿ ಸಮಾಜವು ಇನ್ನೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂದು ಹೇಳಿದರು.

ಸಂವಿಧಾನದ ರಕ್ಷಣೆಯ ನಡುವೆಯೂ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಕಾಣುತ್ತಿದ್ದೇವೆ, ಇದು ಕೊನೆಗೊಳ್ಳಬೇಕು ಎಂದು ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ ಆದರೆ ಅನೇಕ ಗ್ರಾಮೀಣ ಮಹಿಳೆಯರಿಗೆ ಆ ಕಾನೂನುಗಳ ಅರಿವು ಇಲ್ಲವಾಗಿದೆ ಎಂದ ಅವರು, ಸುಶೀಕ್ಷಿತರು ಕಾನೂನಿನ ಶಕ್ತಿಯ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲೇಖಕಿಯರ ಸಂಘದ ಅಧ್ಯಕ್ಷೆ ಸುನಂದಮ್ಮ ಮಾತನಾಡಿ, `ಎಲ್ಲಿ ಹೆಣ್ಣುಮಕ್ಕಳನ್ನು ಪೂಜಿಸುವ ಜಾಗದಲ್ಲಿ ದೇವತೆಗಳು ನೆಲಸಿರುತ್ತಾರೆ' ಎಂಬ ಮಾತಿದೆ. ಆದರೆ ಪೂಜಿಸುವುದಕ್ಕಿಂತ ಪರಸ್ಪರ ಗೌರವಿಸುವುದು ಇಂದಿನ ಅಗತ್ಯವಾಗಿದೆ. ಹೆಣ್ಣು ಹುಟ್ಟಿದಾಗ ತಂದೆಗೆ, ಬೆಳೆದ ಮೇಲೆ ಗಂಡನಿಗೆ, ವಯಸ್ಸಾದ ಮೇಲೆ ಮಕ್ಕಳಿಗೆ ಅಧೀನವಾಗಿರುವ ಪರಿಸ್ಥಿತಿಯಲ್ಲಿ ಪೂಜೆ ಎಂಬ ಮಾತಿಗೆ ಅರ್ಥವಿಲ್ಲ. ಅಧೀನತೆ ಎಂದಿಗೂ ಗೌರವವನ್ನು ತಂದುಕೊಡುವುದಿಲ್ಲ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಅಧಿಕಾರ ಕೇಂದ್ರದಲ್ಲಿರುವವರು ಶೋಷಣೆ ಮಾಡುವ ಸಾಧ್ಯತೆ ಹೆಚ್ಚು. ಆದ್ದರಿಂದ ನಮ್ಮ ಮನಸ್ಥಿತಿಯನ್ನು ಆ ಅಧಿಕಾರ ಕೇಂದ್ರಗಳಿ0ದ ಮುಕ್ತಗೊಳಿಸಿಕೊಳ್ಳಬೇಕು. ಸಂವಿಧಾನದ ೧೫ನೇ ವಿಧಿಯನ್ನು ನೆನಪಿಸಿಕೊಳ್ಳುತ್ತಾ ಸಂವಿಧಾನ ನೀಡಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಎಲ್ಲರೂ ಸಮಾನವಾಗಿ ಸಂತೋಷದಿ0ದ ಬದುಕಬಹುದು ಎಂದ ಅವರು, ಮಹಿಳೆಯರು ತಮಗಿರುವ ಹಕ್ಕುಗಳ ಕುರಿತು ಅರಿತು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಮಾತನಾಡಿ, ಬಹುಭಾಷೆ, ಬಹುಸಂಸ್ಕöತಿ ಮತ್ತು ಬಹುಧರ್ಮಗಳ ದೇಶವಾದ ಭಾರತದಲ್ಲಿ ವೈರುಧ್ಯಗಳು ಹೆಚ್ಚಿವೆ ಎಂದು ಹೇಳಿದರು. ಯಾವುದೇ ಜಾತಿ, ಧರ್ಮ ಅಥವಾ ಹಿನ್ನೆಲೆಯ ಮಹಿಳೆಯರೂ ಈ ರಾಷ್ಟçದಲ್ಲಿ ಹಲವಾರು ರೀತಿಯಲ್ಲಿ ಶೋಷಣೆ ಮತ್ತು ಅವಕಾಶ ವಂಚನೆಗೆ ಒಳಗಾಗುತ್ತಿದ್ದಾರೆ. ಪುರುಷಪ್ರಧಾನ ಸಮಾಜದ ಮನೋಭಾವದಲ್ಲಿ ಪರಿವರ್ತನೆ ಉಂಟಾದಾಗ ಮಾತ್ರ ಸಮಾಜವು ಅಭಿವೃದ್ಧಿಯ ದಾರಿಗೆ ಸಾಗುತ್ತದೆ ಮತ್ತು ಆಗ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ.ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಮಹಿಳಾ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮಹಿಳಾ ಅಧ್ಯಯನ ಕೇಂದ್ರ ಆರಂಭಿಸುವ ಯೋಚನೆಯಿದ್ದು, ಮಹಿಳೆ ಮತ್ತು ಮಾಧ್ಯಮ ಸಂಬ0ಧಿತ ಅಧ್ಯಯನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಕುರಿತು ವಿಶ್ವವಿದ್ಯಾಲಯ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವರಾದ ಸಿ.ಎನ್. ಶ್ರೀಧರ್, ನಿರ್ದೇಶಕರಾದ ಪ್ರೊ. ಕುಮುದಾ, ಪಿಎಂ ಉಷಾ ನೋಡಲ್ ಅಧಿಕಾರಿ ಡಾ.ರಮೇಶ್, ವಿವಿಧ ವಿಭಾಗಗಳ ಪುರುಷ ಅಧ್ಯಾಪಕರು ಕಾರ್ಯಕ್ರಮವನ್ನು ಆಯೋಜಿಸಿ ನಡೆಸಿಕೊಟ್ಟಿದ್ದು ಕಾರ್ಯಕ್ರಮದ ವಿಶೇಷವಾಗಿದ್ದು, ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕರು,ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande