ಸೆಂಟರ್ ಆಫ್ ಎಕ್ಷಲೆನ್ಸಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ
ಧಾರವಾಡ, 11 ಮಾರ್ಚ್ (ಹಿ.ಸ.): ಆ್ಯಂಕರ್: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಧಾರವಾಡ (ಕರ್ನಾಟಕ ವಾರ್ತೆ) ಮಾ.11: 2026-27 ನೇ ಶೈಕ್ಷಣಿಕ ಸಾಲಿನಲ್ಲಿ ಪಿ.ಯು.ಸಿ ಶಿಕ್ಷಣದೊಂದಿಗೆ ಎರಡು ವರ್ಷಗಳ NEET, K-CET:IIT-JEE, ICAR:CLAT:CA-FOUNDATION:CUET ಪಡಿಸಲು ಆಫ್‍ಲೈನ್ ಮಾದರಿಯಲ್ಲಿ ತರಬೇತಿ ನೀಡ
ಸೆಂಟರ್ ಆಫ್ ಎಕ್ಷಲೆನ್ಸಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ


ಧಾರವಾಡ, 11 ಮಾರ್ಚ್ (ಹಿ.ಸ.):

ಆ್ಯಂಕರ್:

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಧಾರವಾಡ (ಕರ್ನಾಟಕ ವಾರ್ತೆ) ಮಾ.11: 2026-27 ನೇ ಶೈಕ್ಷಣಿಕ ಸಾಲಿನಲ್ಲಿ ಪಿ.ಯು.ಸಿ ಶಿಕ್ಷಣದೊಂದಿಗೆ ಎರಡು ವರ್ಷಗಳ NEET, K-CET:IIT-JEE, ICAR:CLAT:CA-FOUNDATION:CUET ಪಡಿಸಲು ಆಫ್‍ಲೈನ್ ಮಾದರಿಯಲ್ಲಿ ತರಬೇತಿ ನೀಡಲು ಸಂಪೂರ್ಣ ಉಚಿತ ಶಿಕ್ಷಣಕ್ಕಾಗಿ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಯನ್ನು ಸಂಪೂರ್ಣ ಊಟ, ವಸತಿ ಮತ್ತು ಇತರೇ ಅನುಕೂಲತೆಗಳೊಂದಿಗೆ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಕಲಿಕಾ ಕೇಂದ್ರಗಳಲ್ಲಿ ನೀಡಲಾಗುವುದು. ತರಬೇತಿಗೆ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾದ ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೇ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ವೆಬ್‍ಸೈಟ್ https://dom.karnataka.gov.in ಮೂಲಕ ಮಾರ್ಚ 31, 2026 ರೊಳಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ : 8277799990 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande