
ವಿಜಯಪುರ, 10 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ನಗರದ ನೀಲಕಂಠೇಶ್ವರ ಶ್ರೀಶೈಲ ಪಾದಯಾತ್ರಾ ಕಮೀಟಿಯಿಂದ ಸುಮಾರು 400ಕ್ಕೂ ಹೆಚ್ಚು ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕಾಗಿ ವಿಜಯಪುರದಿಂದ ಹಮ್ಮಿಕೊಂಡಿರುವ ಪಾದಯಾತ್ರಿಗಳಿಗೆ ಮಣಿಕಂಠ ಫೌಂಡೇಷನ್ ಸದಸ್ಯರು ಅನ್ನ ದಾಸೋಹ ಹಾಗೂ ನೀರಿನ ಬಾಟಲಿ ವಿತರಿಸುವ ಮೂಲಕ ಭಕ್ತರ ಸೇವೆ ಮಾಡಿದರು.
ಈ ವೇಳೆ ಪೌಂಡೆಷನ್ ಸದಸ್ಯ ಮಡುಸ್ವಾಮಿ ಅವರು ಪಾದಯಾತ್ರಿಗಳೊಂದಿಗೆ ಶ್ರೀಶೈಲ ಮಲ್ಲಿಕಾರ್ಜುನನ ನಂದಿಕೋಲಕ್ಕೆ ವಿಶೇಷ ಅಭಿಷೇಕ ಹಾಗೂ ಪೂಜೆ ಸಲ್ಲಿಸಿದರು. ಬಳಿಕ ಸುಮಾರು 400ಕ್ಕೂ ಹೆಚ್ಚು ಭಕ್ತರಿಗೆ ಊಟದ ವ್ಯವಸ್ಥೆ ಮಾಡಿಸಿ ಅನ್ನಸಂತರ್ಪಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾದಯಾತ್ರಾ ಕಮೀಟಿಯ ಪದಾಧಿಕಾರಿ ಮಹೇಶ್ ಬಿದನೂರ, ಮಣಿಕಂಠ ಫೌಂಡೇಶನ್ ನೀಡಿದ ಈ ಸೇವೆ ಪಾದಯಾತ್ರಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದ್ದು, ಇಂತಹ ಸೇವಾ ಕಾರ್ಯಗಳು ಮುಂದುವರಿಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮಣಿಕಂಠ ಫೌಂಡೇಶನ್ ಸದಸ್ಯರಾದ ಮಡಿವಾಳಯ್ಯ ಹಿರೇಮಠ ಮಡುಸ್ವಾಮಿ, ರಾಜು ಗುನ್ನಾಪೂರ, ಅಮೋಘಸಿದ್ದ ಕರಾಂಡೆ, ಸತೀಶ ರಾಠೋಡ, ಸಚಿನ್ ಚವ್ಹಾಣ, ಸಂದೀಪ ಪವಾರ, ಸೋಮಶೇಖರ, ಪ್ರಶಾಂತ, ಅಭಿಷೇಕ, ನವೀನ, ಲಾಳೇಮಶಾಕ್, ರಾವುತರಾಯ, ಕೃಷ್ಣಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande