ತೊಟ್ಟಿಲ ತೂಗುವ ಕೈ ಜಗವನ್ನು ಆಳಬಹುದು:ಅನ್ನಪೂರ್ಣ
ಕೊಪ್ಪಳ, 10 ಮಾರ್ಚ್ (ಹಿ.ಸ.) ಆ್ಯಂಕರ್: ತೊಟ್ಟಿಲ ತೂಗುವ ಕೈ ಜಗವನ್ನು ಆಳಬಹುದು ಭಾರತದಲ್ಲಿ ಹೆಣ್ಣು ಮಕ್ಕಳನ್ನು ಬಹಳ ಗೌರವದಿಂದ ಕಾಣುತ್ತಾರೆ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ಕೊಡುಗೆ ನೀಡಿರುವುದನ್ನು ಕಾಣಬಹುದು. ಪ್ರತಿಯೊಬ್ಬರ ಸಾಧನೆಗೆ ಪರಿ
ತೊಟ್ಟಿಲ ತೂಗುವ ಕೈ ಜಗವನ್ನು ಆಳಬಹುದು


ತೊಟ್ಟಿಲ ತೂಗುವ ಕೈ ಜಗವನ್ನು ಆಳಬಹುದು


ಕೊಪ್ಪಳ, 10 ಮಾರ್ಚ್ (ಹಿ.ಸ.)

ಆ್ಯಂಕರ್:

ತೊಟ್ಟಿಲ ತೂಗುವ ಕೈ ಜಗವನ್ನು ಆಳಬಹುದು ಭಾರತದಲ್ಲಿ ಹೆಣ್ಣು ಮಕ್ಕಳನ್ನು ಬಹಳ ಗೌರವದಿಂದ ಕಾಣುತ್ತಾರೆ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ಕೊಡುಗೆ ನೀಡಿರುವುದನ್ನು ಕಾಣಬಹುದು. ಪ್ರತಿಯೊಬ್ಬರ ಸಾಧನೆಗೆ ಪರಿಶ್ರಮ ಮುಖ್ಯವಾದದ್ದು ಪರಿಶ್ರಮ ಪ್ರಯತ್ನದಿಂದ ಎಲ್ಲವೂ ಸಾಧ್ಯವೆಂದು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸದಸ್ಯರು ಹಾಗೂ ವಿಜಯನಗರ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಸದಾಶಿವ ಹೇಳಿದ್ದಾರೆ.

ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯುವ ರೆಡ್ ಕ್ರಾಸ್ ಘಟಕದ ಅಡಿಯಲ್ಲಿ ಆಯೋಜಿಸಿದ ಎಲ್ಲಾ ಮಹಿಳೆಯರಿಗೆ ಮತ್ತು ಬಾಲಕಿಯರಿಗಾಗಿ ಹಕ್ಕುಗಳು, ನ್ಯಾಯಕ್ರಮ ಎಂಬ ಘೋಷವಾಕ್ಯದಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಹೆಣ್ಣು ಅಬಲೆಯಲ್ಲ ಅವಳು ಸಬಲಳು, ಅವಳಿಗೆ ಸಮಾನವಾದ ಸಹಕಾರ ಮತ್ತು ಪ್ರೊತ್ಸಾಹದ ಅಗತ್ಯವಿದೆ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ವಿಜಯಲಕ್ಷ್ಮಿ ಅವರು ಮಾತನಾಡಿ 12ನೇ ಶತಮಾನದಲ್ಲಿ ಅಕ್ಕಮಹಾದೇವಿಯ ವಿಚಾರಗಳು ನಮಗೆ ಸ್ಪೂರ್ತಿಯಾಗಬೇಕು, ಹೆಣ್ಣು ಮಕ್ಕಳಿಗೆ ಅವಕಾಶ ಹಕ್ಕುಗಳು, ನ್ಯಾಯ ಕೊಟ್ಟಾಗ ಅವಳು ಸಮಾಜಕ್ಕೆ ಮರಳಿ ನೀಡುವ ಕೆಲಸ ಮಾಡುತ್ತಾಳೆ. ಕುಟುಂಬದ ಏಳಿಗೆಯಲ್ಲಿ ಮಹಿಳೆಯ ಪಾತ್ರ ಬಹಳವಿದೆ ಇವತ್ತು ಕುಟುಂಬ ರಾಜಕೀಯ ಸಾಮಾಜಿಕ ಕ್ಷೇತ್ರಗಳಲ್ಲಿ ಸಮಾನತೆಯ ಕೊರತೆ ಇದೆ. ಅವಳಿಗೆ ಅವಕಾಶ ನೀಡಿದರೆ ಅವಳು ಸಹ ದೇಶ, ರಾಜ್ಯಕ್ಕೆ ಅವಳದೇ ಆದ ಕೊಡುಗೆ ನೀಡಬಲ್ಲಳು ಎಂದು ಹೇಳಿದರು . ಇತರ ಅತಿಥಿಗಳಾದ ಡಾ. ರುದ್ರಾಕ್ಷಿ ದೇವರಗುಡಿ ,ಡಾ. ಕಸ್ತೂರಿ ಕರಮುಡಿ, ಶ್ರೀಮತಿ ಮಮತಾ ಕುದುರಿಮೋತಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾರ್ಯದರ್ಶಿಯಾದ ಡಾ. ಆರ್ ಮರೇಗೌಡ ಅವರು ಮಾತನಾಡಿ 12ನೇ ಶತಮಾನದಲ್ಲಿ ಬಸವಣ್ಣನವರು ಸ್ತ್ರೀ ಸಮಾನತೆ ತಂದವರು ಅವರ ವಿಚಾರ ನಮಗೆ ಪ್ರೇರಣೆಯಾಗಲಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿವರ್ಷ ಆಚರಿಸುತ್ತಿರುವ ಉದ್ದೇಶ, ಸಮಾಜದ ಪ್ರತಿ ಹೆಣ್ಣು ಮಗಳಿಗೆ ಸಮಾನವಾದ ಅವಕಾಶ ಮಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಹಿಳೆ ಅಭಿವೃದ್ಧಿಯಾದರೆ ಕುಟುಂಬ ಸಮಾಜ ತಾನಾಗಿಯ ಸುಧಾರಣೆ ಯಾಗುತ್ತದೆ. ಇಂತಹ ಕಾರ್ಯಕ್ರಮಗಳು ಮಹಿಳಾ ಏಳಿಗೆಗೆ ಪೂರಕವಾಗಿ ಸ್ಪೂರ್ತಿ ತಂದುಕೊಡುತ್ತೇವೆ. ಮಹಿಳೆಗೆ ಹೆಚ್ಚಿನ ಶಕ್ತಿ ತುಂಬುತ್ತವೆ ಎಂದು ಹೇಳಿದರು .

ಮಹಾವಿದ್ಯಾಲಯದ ಶೈಕ್ಷಣಿಕ ಸಂಯೋಜಕರಾದ ಪೆÇ್ರಫೆಸರ್ ಹೆಚ್ ಬಿ ಆನಂದಹಳ್ಳಿ ಪ್ರಾಚಾರ್ಯರಾದ ಡಾ. ಎಸ್ ಬಿ ಕಂಬಾರ್, ಐಕ್ಯುಎಸಿ ಸಂಯೋಜಕರಾದ ಡಾ. ಕವಿತಾ ಕೆ, ಪ್ರಾಧ್ಯಾಪಕರಾದ ಡಾ. ಆನಂದ ದೇಸಾಯಿ, ಶ್ರೀಧರ್ ಪೂಜಾರ, ಡಾ. ನೀಲಾಂಬಿಕ ಹುದ್ದಾರ, ಡಾ. ಶೈಲಜಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು .

ಪ್ರಶಿಕ್ಷಣಾರ್ಥಿಗಳಾದ ಮಂಜುನಾಥ್ ಸ್ವಾಗತಿಸಿದರು ಪವಿತ್ರ ಪ್ರಾರ್ಥಿಸಿದರು ಗುರುರಾಜ್ ವಂದಿಸಿದರು ಎಂದು ಮಹಾವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande