


ಬಳ್ಳಾರಿ, 10 ಮಾರ್ಚ್ (ಹಿ.ಸ.)
ಆ್ಯಂಕರ್: ಕೇಂದ್ರ ಬಿಜೆಪಿ ಸರ್ಕಾರ ರೈತ, ಕಾರ್ಮಿಕ, ಜನವಿರೋದಿ ವಿದ್ಯುಚ್ಛಕ್ತಿ {ತಿದ್ದುಪಡಿ) ಮಸೂದೆ - 2025 ಅನ್ನು ಸಂಸತ್ತಿನ ಅಧಿವೇಶನದಲ್ಲಿ ಮಂಡಿಸುವುದರ ವಿರುದ್ಧ ಬಳ್ಳಾರಿಯಲ್ಲಿ ಆಲ್ ಇಂಡಿಯಾ ಪವರ್ ಫೆಡರೇಷನ್ನ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಜಂಟಿಯಾಗಿ ಮಂಗಳವಾರ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ದಹನ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಲ್ ಇಂಡಿಯಾ ಪವರ್ ಫೆಡರೇಷನ್ನ ಜಿಲ್ಲಾ ಘಟಕದ ಮುಖಂಡರಾದ ಡಾ. ಎನ್. ಪ್ರಮೋದ್ ಅವರು, ಕೇಂದ್ರ ಬಿಜೆಪಿ ಸರ್ಕಾರ ರೈತ, ಕಾರ್ಮಿಕ, ಜನವಿರೋದಿ ವಿದ್ಯುಚ್ಛಕ್ತಿ {ತಿದ್ದುಪಡಿ) ಮಸೂದೆ - 2025ನ ನಿಬಂಧನೆಗಳು ದೇಶಾದ್ಯಂತ ನೌಕರರು, ಕಾರ್ಮಿಕರು, ವಿದ್ಯುತ್ ಗ್ರಾಹಕರು, ರೈತರು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ವಿರುದ್ಧವಾಗಿವೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವತ್ತ ಹೆಜ್ಜೆ ಎಂದರು.
ಆಲ್ ಇಂಡಿಯಾ ಪವರ್ ಫೆಡರೇಷನ್ನ ಜಿಲ್ಲಾ ಘಟಕದ ಮುಖಂಡರಾದ ಆರ್. ಸೋಮಶೇಖರಗೌಡ ಅವರು, ವಿದ್ಯುತ್ ಕ್ಷೇತ್ರವು ಖಾಸಗೀಕರಣಗೊಂಡಲ್ಲಿ ಉದ್ಯೋಗ ಕಡಿತ, ನಿರುದ್ಯೋಗ, ಬೆಲೆ ಹೆಚ್ಚಳ, ಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರಲಿದ. ಕಾರಣ ಕೇಂದ್ರ ಬಿಜೆಪಿ ಸರ್ಕಾರ ರೈತ, ಕಾರ್ಮಿಕ, ಜನವಿರೋದಿ ವಿದ್ಯುಚ್ಛಕ್ತಿ {ತಿದ್ದುಪಡಿ) ಮಸೂದೆ - 2025 ಅನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡನೆ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷರಾದ ಗೋವಿಂದ್ ಅವರು, ವಿದ್ಯುತ್ ಕ್ಷೇತ್ರವು ಖಾಸಗೀಕರಣಗೊಂಡಲ್ಲಿ ರೈತರು ಮತ್ತು ಸಣ್ಣ ಉದ್ಯಮಗಳು ವಿದ್ಯುತ್ ಬೆಲೆ ಹೆಚ್ಚಳದಿಂದ ನರಳುವಂತಾಗುತ್ತದೆ. ಕೈಗಾರಿಕೆಗಳು ಮುಚ್ಚುತ್ತವೆ. ನಿರುದ್ಯೋಗ, ಶ್ರೀಮಂತರ ಆಡಳಿತ ಹಂತ ಹಂತವಾಗಿ ಸಮಾಜದಲ್ಲಿ ಹೆಚ್ಚಲಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾಧ್ಯಕ್ಷರಾದ ಎ. ದೇವದಾಸ್, ಉಪಾಧ್ಯಕ್ಷರಾದ ಎ. ಶಾಂತಾ, ಎಐಪಿಎಫ್ನ ಕಿರಣ್ ಕುಮಾರ್, ಮುಖಂಡರಾದ ಹನುಮಪ್ಪ, ಶರ್ಮಾಸ್, ಸುರೇಶ್, ಚೇತನ್, ಮುರಳಿಕೃಷ್ಣ ಇನ್ನಿತರರು ಉಪಸ್ಥಿತರಿದ್ದರು. ವಿದ್ಯುತ್ ಗ್ರಾಹಕರ ಸಂಘದ ರಾಜಾ ಅವರು ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್