
ನವದೆಹಲಿ, 10 ಮಾರ್ಚ್ (ಹಿ.ಸ.):
ಆ್ಯಂಕರ್:
ಲೋಕಸಭೆಯಲ್ಲಿ ಸ್ಪೀಕರ್ ವಿರುದ್ಧದ ಪದಚ್ಯುತಗೊಳಿಸುವ ನಿರ್ಣಯದ ಚರ್ಚೆ ವೇಳೆ ಕಾಂಗ್ರೆಸ್ ಹಾಗೂ ಆಡಳಿತ ಪಕ್ಷದ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪ್ರತಿಪಕ್ಷದ ನಾಯಕನಾಗಿ ರಾಹುಲ ಗಾಂಧಿ ಬದಲಿಗೆ, ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತಮ ಪ್ರತಿಪಕ್ಷದ ನಾಯಕಿಯಾಗಿರಬಹುದಿತ್ತು ಎಂದು ಹೇಳಿದ್ದಾರೆ.
ರಿಜಿಜು ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ಸದನದಲ್ಲಿ ನಗುತ್ತಲೇ ಎದ್ದು ನಿಂತು ಸ್ಪಷ್ಟನೆ ನೀಡಿದರು. ರಿಜಿಜು ತಮ್ಮ ಭಾಷಣದಲ್ಲಿ ಜವಾಹರಲಾಲ್ ನೆಹರು ಅವರ ಮಾತುಗಳನ್ನು ಉಲ್ಲೇಖಿಸಿರುವುದನ್ನು ನೋಡಿ ತಾವು ನಕ್ಕಿರುವುದಾಗಿ ಹೇಳಿದರು.
“ಹಗಲಿರುಳು ನೆಹರು ಅವರನ್ನು ಟೀಕಿಸುವವರು, ತಮ್ಮ ಅನುಕೂಲಕ್ಕೆ ಬಂದಾಗ ಅವರ ಮಾತುಗಳನ್ನು ಉಲ್ಲೇಖಿಸುತ್ತಾರೆ. ಪ್ರಜಾಪ್ರಭುತ್ವವನ್ನು ಬಲಪಡಿಸುವ ಬಗ್ಗೆ ನೆಹರು ಹೇಳಿದ ಮಾತುಗಳನ್ನು ಅವರು ಉಲ್ಲೇಖಿಸಿದ್ದರಿಂದ ನನಗೆ ಖುಷಿ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು ‘ನಿರ್ಭೀತ ನಾಯಕ’ ಎಂದು ಬಣ್ಣಿಸಿದ ಪ್ರಿಯಾಂಕಾ ಗಾಂಧಿ, ಕಳೆದ 12 ವರ್ಷಗಳಲ್ಲಿ ಸರ್ಕಾರದ ಮುಂದೆ ತಲೆಬಾಗದ ಏಕೈಕ ನಾಯಕ ರಾಹುಲ್ ಗಾಂಧಿಯೇ ಎಂದು ಹೇಳಿದರು. ಸದನದಲ್ಲಿ ಅವರು ಹಿಂಜರಿಕೆಯಿಲ್ಲದೆ ಸತ್ಯವನ್ನು ಹೇಳುತ್ತಾರೆ ಮತ್ತು ಆ ಸತ್ಯ ಸರ್ಕಾರಕ್ಕೆ ಅಸೌಕರ್ಯ ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa