ನಗರ ಆಶ್ರಯ ಸಮಿತಿಯ ಸದಸ್ಯರಾಗಿ ರಾಘವೇಂದ್ರ ಎಸ್.ಜಿ ನೇಮಕ
ನಗರ ಆಶ್ರಯ ಸಮಿತಿಯ ಸದಸ್ಯರಾಗಿ ರಾಘವೇಂದ್ರ ಎಸ್.ಜಿ ನೇಮಕ
ರಘವೇಂದ್ರ


ಕೋಲಾರ, ಮಾ.೧೦ (ಹಿ.ಸ)

ಆಂಕರ್ : ಕೋಲಾರ ನಗರ ಆಶ್ರಯ ಸಮಿತಿಗೆ ಅಧಿಕಾರೇತ್ತರ ಸದಸ್ಯರನ್ನಾಗಿ ರಾಘವೇಂದ್ರ ಎಸ್.ಜಿ (ಗಲ್ಪೇಟೆ ರಘು) ಅವರನ್ನು ನಾಮನಿರ್ದೇಶನ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಷಾಹೀನ್ ಪರ್ವೀನ್ ಆದೇಶ ಹೊರಡಿಸಿದ್ದಾರೆ.

ಎಸ್.ಜಿ ರಾಘವೇಂದ್ರ (ಗಲ್ಪೇಟೆ ರಘು) ಅವರ ಕಾಂಗ್ರೆಸ್ ಪಕ್ಷದಲ್ಲಿನ ನಿಷ್ಟೆಯನ್ನು ಗಮನಿಸಿ ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ ಎಂ.ಎಲ್ ಅನಿಲ್ ಕುಮಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರು ನಾಮನಿರ್ದೇಶನಕ್ಕ ಸರ್ಕಾರಕ್ಕೆ ಹೆಸರನ್ನು ಪ್ರಸ್ತಾಪ ಮಾಡಿದ್ದರು.

ಅದರಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ರಾಘವೇಂದ್ರ ಎಸ್.ಜಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ನೇಮಕ ಆಗಲು ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಮುಲ್ ನಿರ್ದೇಶಕ ಚಂಚಿಮಲೆ ರಮೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಗರ ಅಧ್ಯಕ್ಷ ಅಪ್ಸರ್ಪಾಷ ರವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande