ಇರಾನ್-ಇಸ್ರೇಲ್ ಯುದ್ದ ನಿಲ್ಲಿಸುವಂತೆ ಕರ್ನಾಟಕ ಪ್ರಾಂತ್ಯ ರೈತ ಸಂಘ ಒತ್ತಾಯ
ಇರಾನ್-ಇಸ್ರೇಲ್ ಯುದ್ದ ನಿಲ್ಲಿಸುವಂತೆ ಕರ್ನಾಟಕ ಪ್ರಾಂತ್ಯ ರೈತ ಸಂಘ ಒತ್ತಾಯ
ಇರಾನ್ ಇಸ್ರೇಲ್ ಯುದ್ದ ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿ0ದ ಕೋಲಾರದ ಗಾಂಧಿ ವನದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.


ಕೋಲಾರ, ೧೦ ಮಾರ್ಚ್ (ಹಿ.ಸ)

ಆಂಕರ್ : ಇರಾನ್ ದೇಶದಲ್ಲಿರುವ ತೈಲ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವ ದುರುದ್ದೇಶದಿಂದ ಆ ದೇಶದ ಮೇಲೆ ಯುದ್ದ ಸಾರಿದ್ದು, ಇದರಿಂದ ಜಗತ್ತಿನ ಜನ ಜೀವನ ಅಸ್ತವ್ಯವಸ್ಥಗೊಂಡಿದ್ದು, ತಕ್ಷಣ ಯುದ್ದವನ್ನು ನಿಲ್ಲಿಸಬೇಕೆಂದು ಕೆಪಿಆರ್ಎಸ್ ರಾಜ್ಯಾಧ್ಯಕ್ಷ ಯು ಬಸವರಾಜ್ ಒತ್ತಾಯಿಸಿದರು.ನಗರದಲ್ಲಿ ನಡೆಯುತ್ತಿರುವ ಕೆಪಿಆರ್ಎಸ್ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿರುವ ಮುಖಂಡರು ಪದಾಧಿಕಾರಿಗಳು ಮಂಗಳವಾರ ಗಾಂಧಿವನದಲ್ಲಿ ಹಮ್ಮಿಕೊಂಡಿದ್ದ ಯುದ್ದ ವಿರೋಧಿ ಮತ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದ ಅವರು ಇಡೀ ಜಗತ್ತಿನ ದೇಶದ ತನ್ನ ಅಣತಿಯಂತೆ ನಡೆಯಬೇಕು. ಇಲ್ಲದಿದ್ದರೆ ನಾನಾ ರೀತಿ ಕಿರುಕುಳಗಳನ್ನು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಗತ್ತಿನಲ್ಲಿರುವ ನೈಸರ್ಗಿಕ ಸಂಪತ್ಬರಿತ ದೇಶಗಳು ತನ್ನ ಅಣತಿಯಂತೆ ನಡೆಯದಿದ್ದರೆ ಅಮೇರಿಕಾ ದೇಶದ ಸಕಾರಣ ಇಲ್ಲದಿದ್ದರೂ ಕಾಲು ಕೆರೆದು ಯುದ್ದ ನಡೆಸುತ್ತಿದೆ. ಕೆಲವು ತಿಂಗಳ ಹಿಂದೆ ವೆನುಜುವೆಲ ದೇಶದ ಅಧ್ಯಕ್ಷರನ್ನು ಬಂಧಿಸಿತು. ಇದೀಗ ತೈಲ ಸಂಪತ್ಬರಿತ ಇರಾನ್ ದೇಶದ ಮೇಲೆ ಯುದ್ದ ಸಾರಿದೆ. ಇದರಿಂದ ೩ನೇ ಪ್ರಪಂಚ ಯುದ್ದದ ಭೀತಿಯು ಆವರಿಸಿದ್ದು, ತಕ್ಷಣ ಯುದ್ದವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸ್ವಾತಂತ್ರ್ಯ, ಸರ್ವಭೌಮ ದೇಶಗಳ ಮೇಲೆ ಅಮೇರಿಕ ದೇಶವು ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳನ್ನು ಭಾರತ ಖಂಡಿಸದೇ ಮೌನವಾಗಿರುವುದು ಸರಿಯಲ್ಲ. ಪ್ರಧಾನಿ ಮೋದಿರವರು ಈ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಪ್ರದರ್ಶನದಲ್ಲಿ ಸಂಘಟನೆಯ ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಡಾ.ವಿಜಿಕೃಷ್ಣ, ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್, ರಾಜ್ಯ ಉಪಾಧ್ಯಕ್ಷರಾದ ಪಿ.ಆರ್.ಸೂರ್ಯನಾರಾಯಣ, ಶಾಂತರಾಮ್ ನಾಯಕ್, ಸೊಪ್ಪಿನ್, ಚೆನ್ನಪ್ಪ ಆನೆಗುಂದಿ, ಹಣಕಾಸು ಕಾರ್ಯದರ್ಶಿ ಎಚ್ ಆರ್ ನವೀನ್ ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಪ್ರಭಾ ಬೆಳವಂಗಳ, ಎನ್.ಎಲ್ ಭರತ್ ರಾಜ್, ಜಗದೀಶ್ ಸೂರ್ಯ, ರಾಜ್ಯ ಮುಖಂಡರಾದ ಗಂಗಮ್ಮ, ರಾಜಮ್ಮ, ಚನ್ನರಾಯಪ್ಪ, ಗಾಳಿ ಬಸವರಾಜ್ ಶಿವಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪಾತಕೋಟೆ ನವೀನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಎನ್ ಎನ್. ಶ್ರೀರಾಮ್, ವಿ ನಾರಾಯಣರೆಡ್ಡಿ, ಜೆಎಂಎಸ್ ವಿ. ಗೀತಾ ಸೇರಿದಂತೆ ಸಮ್ಮೇಳನದ ಪ್ರತಿನಿಧಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande