ನಾಳೆ ಹುಬ್ಬಳ್ಳಿಯಲ್ಲಿ ಪೊಲೀಸ್ ಮ್ಯಾರಥಾನ್
ಹುಬ್ಬಳ್ಳಿ, 28 ಫೆಬ್ರವರಿ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿ ಧಾರವಾಡ ಪೋಲಿಸ್ ಆಯುಕ್ತಾಲಯ ಹಾಗೂ ಧಾರವಾಡ ಜಿಲ್ಲಾ ಪೋಲಿಸ್ ಸಹಯೋಗದಲ್ಲಿ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ಶೀರ್ಷಿಕೆಯಡಿ “ಪೊಲೀಸ್ ಮ್ಯಾರಥಾನ್–2026” ಆಯೋಜಿಸಲಾಗಿದೆ. “ಫಿಟ್ನೆಸ್ ಫಾರ್ ಆಲ್”, “ಡ್ರಗ್ ಮುಕ್ತ ಕರ್ನಾಟಕ” ಮತ್ತು “ಸೈಬರ್
Marathon


ಹುಬ್ಬಳ್ಳಿ, 28 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿ ಧಾರವಾಡ ಪೋಲಿಸ್ ಆಯುಕ್ತಾಲಯ ಹಾಗೂ ಧಾರವಾಡ ಜಿಲ್ಲಾ ಪೋಲಿಸ್ ಸಹಯೋಗದಲ್ಲಿ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ಶೀರ್ಷಿಕೆಯಡಿ “ಪೊಲೀಸ್ ಮ್ಯಾರಥಾನ್–2026” ಆಯೋಜಿಸಲಾಗಿದೆ.

“ಫಿಟ್ನೆಸ್ ಫಾರ್ ಆಲ್”, “ಡ್ರಗ್ ಮುಕ್ತ ಕರ್ನಾಟಕ” ಮತ್ತು “ಸೈಬರ್ ಕ್ರೈಂ ಜಾಗೃತಿ” ಎಂಬ ಧ್ಯೇಯವಾಕ್ಯಗಳೊಂದಿಗೆ ಈ ಮ್ಯಾರಥಾನ್ನ್ನು ಮಾರ್ಚ್ 1ರಂದು ಬೆಳಿಗ್ಗೆ 7 ಗಂಟೆಗೆ ಹುಬ್ಬಳ್ಳಿಯಲ್ಲಿ ಆರಂಭಿಸಲಾಗುತ್ತದೆ.

ಸಾರ್ವಜನಿಕರಲ್ಲಿ ದೈಹಿಕ ಆರೋಗ್ಯದ ಮಹತ್ವ, ಮದ್ಯಪಾನ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಹಾಗೂ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. 5 ಕಿಮೀ ಮತ್ತು 10 ಕಿಮೀ ವಿಭಾಗಗಳಲ್ಲಿ ಮ್ಯಾರಥಾನ್ ನಡೆಯಲಿದ್ದು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande