
ಹಾವೇರಿ, 28 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಲಾಭದಲ್ಲಿ ಪುಣ್ಯ ಗಳಿಸಲು ಅವಕಾಶ ಇದೆ. ಯುವಕರು ಒಳ್ಳೆಯ ರೀತಿಯಿಂದ ಪ್ರಾಮಾಣಿಕವಾಗಿ, ನೈತಿಕತೆಯಿಂದ ವ್ಯಾಪಾರ ಮಾಡಿದರೆ ಲಾಭದ ಜೊತೆಗೆ ಪುಣ್ಯವೂ ಲಭಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂಬಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತೆರೆದಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ ಸುದರ್ಶನ ಕೋಲ್ಡ್ ಸ್ಟೋರೇಜ್ ಇದರ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು. ಇವತ್ತು ಅತ್ಯಂತ ಸಂತಷದ ದಿನ ಬ್ಯಾಡಗಿಯಲ್ಲಿ ಕೋಲ್ಡ್ ಸ್ಟೋರೆಜ್ ಪ್ರಾರಂಭ ಆಗುತ್ತಿದೆ. ಒಟ್ಟು ನಲವತ್ರು ಕೋಲ್ಡ್ ಸ್ಟೋರೆಜ್ ಈ ವರ್ಷದಲ್ಲಿ ಬ್ಯಾಡಗಿ ಸುತ್ತ ಮುತ್ತ ತಲೆ ಎತ್ತುತ್ತಿವೆ. ಬ್ಯಾಡಗಿಯ ಮಾರುಕಟ್ಟೆಯನ್ನು ನಿರ್ಮಿಸಿರುವ ವ್ಯಾಪಾರಸ್ಥರು ಮತ್ತು ರೈತರ ಸಂಪೂರ್ಣ ಸಹಕಾರದಿಂದ ಬ್ಯಾಡಗಿ ಜಗತ್ ಪ್ರಸಿದ್ದ ವಾಗಿದೆ. ಇದಕ್ಕೆ ಸುಮಾರು ಐವತ್ತು ವರ್ಷದ ಪರಿಶ್ರಮ ಇದೆ ಎಂದರು.
ಬ್ಯಾಡಗಿ ಎಪಿಎಂಸಿ ಅಂದರೆ ಬಹಳ ಶ್ರೀಮಂತ ಎಪಿಎಂಸಿ ಆಗಿದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಆಗುತ್ತಿದೆ ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರದ ಬೇಡಿಕೆ ಇದೆ. ನಾವಿದ್ದಾಗ ಬಜೆಟ್ ನಲ್ಲಿ ಅನುಮೊದನೆ ಮಾಡಿದ್ದೇವು, ಈಗ ಅದನ್ನು ಅಳವಡಿಸಿಕೊಳ್ಳುವ ಭರವಸೆ ಇದೆ. ಬ್ಯಾಡಗಿ ಮೆಣಸಿನಕಾಯಿ ಸಂಶೋಧನೆ ಮಾಡಿ ಔಷಧಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜರ್ಮನಿ ಮತ್ತು ಫ್ರಾನ್ಸ್ ನಲ್ಲಿ ನೈಸರ್ಗಿಕವಾಗಿ ಬೆಳೆದ ಮೆಣಸಿನಕಾಯಿ ಔಷಧಿಗಳಲ್ಲಿ ಬಳಕೆ ಮಾಡುತ್ತಾರೆ. ಅದನ್ನು ಬಂಗಾರ ತೂಕ ಮಾಡಿದಂತೆ ಮಾಡುತ್ತಾರೆ. ಮೆಣಸಿನಕಾಯಿ ಹಲವಾರು ರೀತಿ ಉಪಯೋಗ ಆಗುತ್ತಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa