ಹೋಳಿ ಪ್ರಯುಕ್ತ ಯಶವಂತಪುರ–ಸಂತ್ರಾಗಚಿ ವಿಶೇಷ ರೈಲು ಸೇವೆ
ಬೆಂಗಳೂರು, 28 ಫೆಬ್ರವರಿ (ಹಿ.ಸ.) : ಆ್ಯಂಕರ್ : ಹೋಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೇಲ್ವೆ ಬೆಂಗಳೂರು ವಿಭಾಗವು ಯಶವಂತಪುರ–ಸಂತ್ರಾಗಚಿ ನಡುವಿನ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಪ್ರಕಟಿಸಿದೆ. ಈ ಸೇವೆ ಒಂದು ಟ್ರಿಪ್ಗೆ ಮಾತ್ರ ಸೀಮಿತವಾಗಿರುತ
ಹೋಳಿ ಪ್ರಯುಕ್ತ ಯಶವಂತಪುರ–ಸಂತ್ರಾಗಚಿ ವಿಶೇಷ ರೈಲು ಸೇವೆ


ಬೆಂಗಳೂರು, 28 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಹೋಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೇಲ್ವೆ ಬೆಂಗಳೂರು ವಿಭಾಗವು ಯಶವಂತಪುರ–ಸಂತ್ರಾಗಚಿ ನಡುವಿನ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಪ್ರಕಟಿಸಿದೆ. ಈ ಸೇವೆ ಒಂದು ಟ್ರಿಪ್ಗೆ ಮಾತ್ರ ಸೀಮಿತವಾಗಿರುತ್ತದೆ.

ರೈಲು ಸಂಖ್ಯೆ 06233 ಯಶವಂತಪುರ–ಸಂತ್ರಾಗಚಿ ವಿಶೇಷ ಎಕ್ಸ್ಪ್ರೆಸ್ ಮಾರ್ಚ್ 1ರಂದು (ಭಾನುವಾರ) ಬೆಳಿಗ್ಗೆ 7.30ಕ್ಕೆ ಯಶವಂತಪುರದಿಂದ ಹೊರಟು ಸೋಮವಾರ ರಾತ್ರಿ 8.45ಕ್ಕೆ ಸಂತ್ರಾಗಚಿ ತಲುಪಲಿದೆ.

ರೈಲು ಸಂಖ್ಯೆ 06234 ಸಂತ್ರಾಗಚಿ–ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ಮಾರ್ಚ್ 3ರಂದು (ಮಂಗಳವಾರ) ಮಧ್ಯಾಹ್ನ 2.45ಕ್ಕೆ ಸಂತ್ರಾಗಚಿಯಿಂದ ಹೊರಟು ಗುರುವಾರ ಬೆಳಿಗ್ಗೆ 4 ಗಂಟೆಗೆ ಯಶವಂತಪುರ ತಲುಪಲಿದೆ.

ಎರಡೂ ದಿಕ್ಕುಗಳಲ್ಲಿ ಈ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುತ್ತಿ, ಧೋಣ್, ನಂದ್ಯಾಲ್, ಗಿದ್ದಲೂರು, ಮಾರ್ಕಾಪುರ ರೋಡ್, ನರಸರಾವ್ಪೇಟೆ, ಗುಂಟೂರು, ವಿಜಯವಾಡ, ರಾಜಮಂಡ್ರಿ, ವಿಜಯನಗರಂ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ್, ಕಟಕ್, ಭದ್ರಕ್, ಬಾಲೇಶ್ವರ್ ಮತ್ತು ಖರಗ್ಪುರ್ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ.

ಒಟ್ಟು 20 ಕೋಚ್ಗಳಿರುವ ಈ ವಿಶೇಷ ರೈಲಿನಲ್ಲಿ 1 ಎಸಿ ಟು-ಟಯರ್, 3 ಎಸಿ ತ್ರೀ-ಟಯರ್, 9 ಸ್ಲೀಪರ್ ದರ್ಜೆ, 5 ಸಾಮಾನ್ಯ ದ್ವಿತೀಯ ದರ್ಜೆ ಕೋಚ್ಗಳು ಹಾಗೂ 2 ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ಗಳು (ದಿವ್ಯಾಂಗ ಸ್ನೇಹಿ ವಿಭಾಗದೊಂದಿಗೆ) ಇರಲಿವೆ.

ಹೋಳಿ ಹಬ್ಬದ ಸಂದರ್ಭದಲ್ಲಿನ ಪ್ರಯಾಣಿಕರು ಈ ವಿಶೇಷ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಾಣೇಶ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande