‘ಅನುಕೂಲಸಿಂಧು’ ಕನ್ನಡ ಪ್ರೇಮ ಜಗಜ್ಜಾಹೀರಾಗಿದೆ : ಬಿಜೆಪಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ
ಬೆಂಗಳೂರು, 28 ಫೆಬ್ರವರಿ (ಹಿ.ಸ.) : ಆ್ಯಂಕರ್ : ರಾಜ್ಯದ ಬಿಜೆಪಿ ನಾಯಕರ ‘ಅನುಕೂಲಸಿಂಧು’ ಕನ್ನಡ ಪ್ರೇಮ ಮತ್ತೆ-ಮತ್ತೆ ಜಗಜ್ಜಾಹೀರಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. “‘ಕುಸುಮ ಸಂಜೀವಿನಿ’ ಕಾರ್ಯಕ್ರಮದ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ
DgR


ಬೆಂಗಳೂರು, 28 ಫೆಬ್ರವರಿ (ಹಿ.ಸ.) :

ಆ್ಯಂಕರ್ : ರಾಜ್ಯದ ಬಿಜೆಪಿ ನಾಯಕರ ‘ಅನುಕೂಲಸಿಂಧು’ ಕನ್ನಡ ಪ್ರೇಮ ಮತ್ತೆ-ಮತ್ತೆ ಜಗಜ್ಜಾಹೀರಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

“‘ಕುಸುಮ ಸಂಜೀವಿನಿ’ ಕಾರ್ಯಕ್ರಮದ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಅಥವಾ ಕಾಣದಂತೆ ನಟಿಸುತ್ತಿದ್ದೀರಾ? ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದರೂ ಮತ್ತೆ ಅದೇ ರಾಗ ಮುಂದುವರೆಸುತ್ತಿದ್ದೀರಿ,” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

“ನಿಮ್ಮದೇ ಪಕ್ಷದ ನಾಯಕರು ಜನರಿಗೆ ಮಾಹಿತಿ ನೀಡಲು ಕನ್ನಡ, ಇಂಗ್ಲಿಷ್ ಜೊತೆಗೆ ಉರ್ದು ಭಾಷೆಯನ್ನೂ ಬಳಸಿದಾಗ ಮೌನವಾಗಿದ್ದ ನೀವು, ಇಂದು ಯಾವುದೋ ಮೂಲೆಯ ಒಂದು ಪತ್ರಿಕೆಯ ಜಾಹೀರಾತು ಹಿಡಿದು ಬೊಬ್ಬೆ ಹೊಡೆಯುತ್ತಿರುವುದು ನಿಮ್ಮ ರಾಜಕೀಯ ಹತಾಶೆಯನ್ನು ತೋರಿಸುತ್ತದೆ,” ಎಂದು ಟೀಕಿಸಿದ್ದಾರೆ.

ದೆಹಲಿಯ ನಾಯಕರ ಮೆಚ್ಚುಗೆಗಾಗಿ ಕನ್ನಡಿಗರ ಮೇಲೆ ‘ಹಿಂದಿ’ ಹೇರಲು ಬೆಂಬಲ ನೀಡಿದ ಬಿಜೆಪಿಗೆ, ಇಂದು ಕನ್ನಡದ ಅಸ್ಮಿತೆಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

“ನಮಗೆ ಕನ್ನಡ ಕೇವಲ ಭಾಷೆಯಲ್ಲ; ಅದು ನಮ್ಮ ಆಡಳಿತದ ಜೀವಾಳ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡವೇ ನಿತ್ಯ,” ಎಂದು ಅವರು ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande