ಹಾನಗಲ್ ಕುಮಾರೇಶ್ವರರ ಸಂಕಲ್ಪ ಈಡೇರಿದೆ : ಕರಿವೃಷಭ ಶ್ರೀಗಳು
ಹೊಸಪೇಟೆ, , 27 ಫೆಬ್ರವರಿ (ಹಿ.ಸ.) : ಆ್ಯಂಕರ್ : ಹಾನಗಲ್ಲ ಶ್ರೀಕುಮಾರೇಶ್ವರರ ಸರ್ವಧರ್ಮದವರನ್ನು ಒಗ್ಗೂಡಿಸಿವ ಸಂಕಲ್ಪವನ್ನು ಡಾ. ಸಂಗನಬಸವ ಮಹಾಸ್ವಾಮಿಗಳು ಮತ್ತು ಕೊಟ್ಡೂರೇಶ್ವರ ಮಠ ಈಡೇರಿಸಿದೆ ಎಂದು ನೊಣವಿನಕೆರೆಯ ಶ್ರೀಕಾಡಸಿದ್ದೇಶ್ಚರ ಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗಿ ಮಹಾಸ್ವಾಮಿಗಳು ತಿಳ
ಹಾನಗಲ್ ಕುಮಾರೇಶ್ವರರ ಸಂಕಲ್ಪ ಈಡೇರಿದೆ : ಕರಿವೃಷಭ ಶ್ರೀಗಳು


ಹೊಸಪೇಟೆ, , 27 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಹಾನಗಲ್ಲ ಶ್ರೀಕುಮಾರೇಶ್ವರರ ಸರ್ವಧರ್ಮದವರನ್ನು ಒಗ್ಗೂಡಿಸಿವ ಸಂಕಲ್ಪವನ್ನು ಡಾ. ಸಂಗನಬಸವ ಮಹಾಸ್ವಾಮಿಗಳು ಮತ್ತು ಕೊಟ್ಡೂರೇಶ್ವರ ಮಠ ಈಡೇರಿಸಿದೆ ಎಂದು ನೊಣವಿನಕೆರೆಯ ಶ್ರೀಕಾಡಸಿದ್ದೇಶ್ಚರ ಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗಿ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಹೊಸಪೇಟೆ ನಗರಸಭೆಯ ಸಹಯೋಗದಲ್ಲಿ ನಿರ್ಮಾಣ ಆಗಿರುವ 'ಹೇಮಕೂಟ ಮಹಾದ್ವಾರ'ವನ್ನು ಶುಕ್ರವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಜೀವಾತ್ಮದ ಜೊತೆ ಪರಮಾತ್ಮ ಸೇರಿದಾಗಲೇ ಮನುಷ್ಯ ಜೀವನ ಸಾರ್ಥಕವಾಗುತ್ತದೆ. ಕೊಟ್ಡೂರುಸ್ವಾಮಿ ಮಠದ ಸರ್ವಧರ್ಮ ರಥೋತ್ಸವವು ಪ್ರತಿಯೊಬ್ವರಲ್ಲೂ ಮನುಷ್ಯತ್ವದ ಸಾರ್ಥಕತೆಯನ್ನು ಮೂಡಿಸುತ್ತಿದೆ. ಈ ರಥೋತ್ಸವದ ವೈಭವವು ಸುವರ್ಣ ಅಕ್ಷರಗಳಲ್ಲಿ ಬರೆಯಲಿದೆ ಎಂದರು.

ಜಗದ್ಗುರು ಕೊಟ್ಡೂರು ಬಸವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿ, ಜವಾಬ್ದಾರಿಗಳನ್ನು ಪಾಲನೆ ಮಾಡುವದೇ ಸರ್ವಧರ್ಮ ಸಮನ್ವಯ ರಥೋತ್ಸವದ ಸಾರಾಂಶ. ಜ್ಞಾನ ಮತ್ತು ಕ್ರಿಯೆಯನ್ನು ಸರಿಯಾಗಿ ಬಳಕೆ ಮಾಡಿಕೊಂಡು ಪ್ರತಿಯೊಬ್ಬರೂ ಅಭಿವೃದ್ಧಿ ಸಾಧಿಸಬೇಕು ಎಂದರು.

ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಮಹಾಸ್ವಾಮಿಗಳು, ಸರ್ವಧರ್ಮ ರಥೋತ್ಸವವನ್ನು ಆಚರಿಸುವ ಮೂಲಕ ಜೀವಮದರ್ಶನಕ್ಕೆ ಹೊಸತನ ಮೂಡಿಸುವ ಪ್ರಯತ್ನ ನಡೆದಿರುವುದು ಶ್ಲಾಘನೀಯ ಎಂದರು.

ವಿಶೇಷ ಆಹ್ವಾನಿತರಾದ ಕ್ರಿಶ್ಚಿಯನ್ ಧರ್ಮದ ಬಳ್ಳಾರಿ ಧರ್ಮಾಧ್ಯಕ್ಷರಾದ ಡಾ. ಹೆನ್ರಿ ಡಿ'ಸೋಜ ಅವರು, ಸರ್ವಧರ್ಮ ರಥೋತ್ಸವವು ಆದರ್ಶದ ಪ್ರತೀಕ. ಕೊಟ್ಟರು ಬಸವಲಿಂಗ ಮಹಾಸ್ವಾಮಿಗಳು ಧಾರ್ಮಿಕ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಮತ್ತು ಪ್ರಸಾದ ನಿಲಯಗಳನ್ನು ನಡೆಸುವ ಮೂಲಕ ಈ ಭಾಗದ ಧಾರ್ಮಿಕ ನಾಯಕತ್ವವನ್ನು ವಹಿಸಿದ್ದಾರೆ ಎಂದರು.

ಗೌರವ ಅತಿಥಿಗಳಾದ ಸಂಸದ ರಾಜಶೇಖರ ಹಿಟ್ನಾಳ್ ಅವರು, ದಯೆಯೇ ಸರ್ವಧರ್ಮದ ಮೂಲ. ಈ ನಿಟ್ಟಿನಲ್ಲಿ ಸರ್ವಧರ್ಮ ರಥೋತ್ಸವವು ಶ್ರೀಮಠ ನಡೆಸಿದೆ ಎಂದರು.

ಗೌರವ ಅತಿಥಿಗಳಾದ ಬಿ.ಎಸ್. ಆನಂದಸಿಂಗ್ ಅವರು, ನನ್ನ ಸಾಮಾಜಿಕ ಜೀವನ ಆರಂಭ ಆಗಿದ್ದೇ ಕೊಟ್ಟೂರು ಸ್ವಾಮಿ ಮಠದಿಂದ. ಡಾ. ಸಂಗನಬಸವ ಮಹಾಸ್ವಾಮಿಗಳು ನಿಸ್ವಾರ್ಥಿಗಳು. ಮಾನವಧರ್ಮದ ಪರಿಪಾಲಕರು ಎಂದರು.

ಎಚ್.ಆರ್. ಗುರುದತ್ ಅವರು, ಬಸವ ತತ್ವವನ್ನು ಕೊಟ್ಟೂರು ಸ್ವಾಮಿ ಮಠದಿಂದಲೇ ಕಲಿಯಬೇಕು ಎಂದರು.

ಮುಖಂಡರಾದ ಗೊಗ್ಗ ಚನ್ನಬಸವರಾಜ ಅವರು, ದೇಶದಲ್ಲಿಯೇ ವಿಭಿನ್ನವಾಗಿ ಸರ್ವಧರ್ಮ ರಥೋತ್ಸವ ನಡೆದಿರುವುದು ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ವಿವಿಧ ಮಠಾಧಿಪತಿಗಳು - ಗಣ್ಯರು ಉಪಸ್ಥಿತರಿದ್ದರು. ಸಿ.ಎಸ್. ಶರಣಯ್ಯ ಅವರು ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande