ನ್ಯಾಯಾಧೀಶರಾಗಿ ಆಯ್ಕೆಯಾದ ಅಶ್ವಿನಿ ಅವರಿಗೆ ಸನ್ಮಾನ
ನ್ಯಾಯಾಧೀಶರಾಗಿ ಆಯ್ಕೆಯಾದ ಅಶ್ವಿನಿ ಅವರಿಗೆ ಸನ್ಮಾನ
ಚಿತ್ರ ; ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಗ್ರಾಮದ ಹೊಸ ಬಡಾವಣೆಯ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಬಳಗದ ವತಿಯಿಂದ ನೂತನ ನ್ಯಾಯಾಧೀಶರಾಗಿ ಆಯ್ಕೆಯಾದ ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು.


ಕೋಲಾರ, ೨೭ ಫೆಬ್ರವರಿ (ಹಿ.ಸ.) :

ಆ್ಯಂಕರ್ : ನಿರಂತರ ಪರಿಶ್ರಮ ಮತ್ತು ಛಲವಿದ್ದರೆ ಎಂತಹ ಗುರಿಯನ್ನಾದರೂ ತಲುಪಬಹುದು ಎಂದು ಇತ್ತೀಚೆಗೆ ನೂತನವಾಗಿ ಆಯ್ಕೆಯಾದ ನ್ಯಾಯಾಧೀಶರಾದ ಅಶ್ವಿನಿ ಅವರು ನುಡಿದರು.

ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಗ್ರಾಮದ ಹೊಸ ಬಡಾವಣೆಯ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಒಳಗದ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಯಶಸ್ಸಿನ ಹಾದಿಯ ಬಗ್ಗೆ ಭಾವುಕರಾಗಿ ಕೆಲವು ಮಾತುಗಳನ್ನು ಹಂಚಿಕೊಂಡರು.

೮ನೇ ಪ್ರಯತ್ನದಲ್ಲಿ ಯಶಸ್ಸು: ನಾನು ಮೊದಲ ಪ್ರಯತ್ನದಲ್ಲೇ ಸೋಲೊಪ್ಪಿಕೊಳ್ಳಲಿಲ್ಲ. ಸತತವಾಗಿ ಪ್ರಯತ್ನಿಸಿ, ನನ್ನ ಎಂಟನೇ ಪರೀಕ್ಷೆಯಲ್ಲಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದೇನೆ ಎಂದು ಅಶ್ವಿನಿ ತಿಳಿಸಿದರು. ನ್ಯಾಯಾಧೀಶರ ಪರೀಕ್ಷೆಯಲ್ಲಿ ಅನೇಕ ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸ ಮಾಡಲಾಗಿದೆ ಎಂದರು.

ಕುಟುಂಬದ ಬೆಂಬಲ: ತಮ್ಮ ಈ ಸಾಧನೆಯ ಹಿಂದೆ ಪತಿ ಹಾಗೂ ಪೋಷಕರ ಪ್ರೋತ್ಸಾಹ ಮರೆಯಲಾಗದ್ದು. ಅವರ ನಿರಂತರ ಬೆಂಬಲದಿಂದಲೇ ಇಂದು ನಾನು ಈ ಸ್ಥಾನಕ್ಕೆ ಬರಲು ಸಾಧ್ಯವಾಯಿತು ಎಂದು ಅವರು ಕೃತಜ್ಞತೆ ಸಲ್ಲಿಸಿದರು.

ಛಲದ ಹಾದಿ: ಸೋಲುಗಳಿಗೆ ಎದೆಗುಂದದೆ ಗುರಿಯತ್ತ ಸಾಗಿದರೆ ಯಶಸ್ಸು ಖಚಿತ ಎಂಬ ಸಂದೇಶವನ್ನು ಅವರು ಯುವ ಪೀಳಿಗೆಗೆ ನೀಡಿ ಸಂವಿಧಾನದ ಅಡಿಯಲ್ಲಿ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸ ಮಾಡುವುದಾಗಿ ತಿಳಿಸಿದರು.

ರೇಣುಕಾ ಯಲ್ಲಮ್ಮ ಒಳಗದ ಜಿಲ್ಲಾಧ್ಯಕ್ಷ ಬಂಡುರು ನಾರಾಯಣ ಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗುವುದೇ ಕಷ್ಟ ಅಂತಹಾ ಕಾಲದಲ್ಲಿ ರೇಣುಕಾ ಯಲ್ಲಮ್ಮ ಒಳಗದ ಒಂದು ಹೆಣ್ಣು ಮಗು ತನ್ನ ಕುಟುಂಬದ ಕಷ್ಟಗಳನ್ನು ಎದುರಿಸಿ ಶಕ್ತಿ ಮೀರಿ ನಿರಂತರವಾಗಿ ಪರೀಕ್ಷೆಗಳನ್ನು ಎದುರಿಸುವ ಮೂಲಕ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ, ಉತ್ತಮ ನೀತಿಯಲ್ಲಿ ನ್ಯಾಯ ಸಮ್ಮತವಾಗಿ ಸೇವೆ ಸಲ್ಲಿಸುವುದೇ ನಮ್ಮ ಬಳಗಕ್ಕೆ ಕೊಡುವ ದೊಡ್ಡ ಕೊಡುಗೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ರಾಮಚಂದ್ರಪ್ಪ, ರಾಜ್ಯ ಪ್ರಶಸ್ತಿ ಪುರಸ್ಕೃತ ವೆಂಕಟರಮಣ, ಟಿಎಪಿಸಿಎಂಎಸ್ ಅಧ್ಯಕ್ಷ ಪ್ರವೀಣ್ ಕುಮಾರ್, ರೇಣುಕಾ ಯಲ್ಲಮ್ಮ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ನಿವೃತ್ತ ತಹಶೀಲ್ದಾರ ವೆಂಕಟರಾಮ್, ಬಲ್ಲರಾಪ್ಪ, ವೆಂಕಟೇಶಯ್ಯ, ಮುಳಬಾಗಿಲು ತಾಲೂಕು ಅಧ್ಯಕ್ಷ ಕೃಷ್ಣ ಮೂರ್ತಿ, ಸುಬ್ಬರಾಯಪ್ಪ, ಮೂರ್ತಿ, ಗ್ರಾಪಂ ಮಾಜಿ ಉಪಾಧ್ಯಕ್ಷ ನಂದೀಶ್, ಮಾಜಿ ಸದಸ್ಯ ಜೆಸಿಬಿ ಮುನಿಯಪ್ಪ, ಮುಖಂಡರಾದ ಕೆಂಚಪ್ಪ, ಅನಿಲ್, ಚಂದ್ರಪ್ಪ, ನತ್ತ ನಾಗರಾಜ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ಚಿತ್ರ ; ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಗ್ರಾಮದ ಹೊಸ ಬಡಾವಣೆಯ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಬಳಗದ ವತಿಯಿಂದ ನೂತನ ನ್ಯಾಯಾಧೀಶರಾಗಿ ಆಯ್ಕೆಯಾದ ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande