
ಕೋಲಾರ, ೨೭ ಫೆಬ್ರವರಿ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಹೊರ ವಲಯದ ಟಮಕ ಬಡಾವಣೆಯಲ್ಲಿ ಸುಮಾರು ೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭೋವಿ ಸಮುದಾಯದ ಭವನ ಉದ್ಘಾಟನೆಯಾಗುವರೆಗೂ ಸಮುದಾಯದ ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಅವರನ್ನು ಅಧ್ಯಕ್ಷರಾಗಿ ಮುಂದುವರಿಯಸಲು ಭೋವಿ ಯುವ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಸ್.ವಿ.ಲೋಕೇಶ್ ಭೋವಿ ಯುವ ವೇದಿಕೆ ಪದಾಧಿಕಾರಿಗಳ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಭೋವಿ ಯುವ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಸರ್ಕಾರಗಳಿಂದ ಸಮುದಾಯ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಬರುವ ಕೆಲಸ ಸುಲಭವಾಗಿ ಆಗುವುದಿಲ್ಲ, ಆದರೆ ಸಮುದಾಯದ ಹಿರಿಯರಾದ ಮಂಗಮ್ಮ ಮುನಿಸ್ವಾಮಿ ಅವರು, ಸರ್ಕಾರದಲ್ಲಿ ಸುಮಾರು ೫ ಕೋಟಿ ರೂಗಳನ್ನು ಸಮುದಾಯ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸಿದ್ದ ಕೀರ್ತಿ ಅವರಿಗೆ ಸಲ್ಲಬೇಕು ಎಂದರು.
ಈ ನಿಟ್ಟಿನಲ್ಲಿ ಭೋವಿ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳ್ಳುವವರೆಗೂ ಅವರೇ ಅಧ್ಯಕ್ಷರಾಗಿ ಇರಬೇಕು ಎಂದು ಒತ್ತಾಯ ಮಾಡಿದರು.
ಆದರೆ ಮತ್ತೊಬ್ಬರು ಭೋವಿ ಸಮುದಾಯದ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಮುಂದುವರೆಯುವುದು ಬೇಡ ಎಂದಿರುವ ಅವರು ನಮ್ಮ ಸಂಘಕ್ಕೆ ಬೇಡ ಎಂದು ಬೇಸರ ವ್ಯಕ್ತಪಡಿಸಿದರು.
ಭೋವಿ ಯುವ ವೇದಿಕೆ ಅಧ್ಯಕ್ಷರಾಗಿ ಎಲ್ಜಿ ಮುನಿರಾಜು ಅವರನ್ನು ಸಮುದಾಯದ ಸಂಘಟನೆಗಾಗಿ ನೇಮಕ ಮಾಡಲಾಗಿತ್ತು. ಆದರೆ ಅವರಿಗೆ ೫೦ ವರ್ಷ ಪೂರೈಸಿರುವ ನಿಟ್ಟಿನಲ್ಲಿ ಯುವ ವೇದಿಕೆ ಅಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡಲು ಸಭೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಉಳಿದ ತಾಲೂಕುಗಳಿಗೆ ಭೇಟಿ ನೀಡಿ, ಭೋವಿ ಸಮುದಾಯದ ಯುವ ವೇದಿಕೆಗಳಿಗೆ ಪದಾಧಿಕಾರಿಗಳನ್ನು ಹಂತ ಹಂತವಾಗಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಭೋವಿ ಯುವ ವೇದಿಕೆ ಜಿಲ್ಲಾ ಪಾದಾಧಿಕಾರಿಗಳು, ಹಾಗೂ ಕೋಲಾರ ತಾಲೂಕು ಪಾದಾಧಿಕಾರಿಗಳು, ಕೋಲಾರ ನಗರ ಘಟಕ ಪದಾಧಿಕಾರಿಗಳನ್ನು ಆದೇಶ ಪತ್ರಗಳನ್ನು ವಿತರಿಸಿದರು.
ಕೋಲಾರ ಜಿಲ್ಲಾ ಬೋವಿ ಯುವ ವೇದಿಕೆ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ತಾರಕ್ ಮಂಜು, ಉಪಾಧ್ಯಕ್ಷರಾಗಿ ಕೆ.ವಿ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ ಕುಮಾರ್, ಸಹ ಕಾರ್ಯದರ್ಶಿಯಾಗಿ ಯಶವಂತ್, ಖಜಾಂಚಿಯಾಗಿ ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾಗಿ, ಶಾಂತ್ ರಾಜ್, ಚಿನ್ನಪ್ಪ, ವೆಂಕಟರಾಮಪ್ಪ, ರಾಮಚಂದ್ರ, ಜಿಲ್ಲಾ ಸಂಚಾಲಕರಾಗಿ ಶಂಕರ್ನಾಗ, ಮತ್ತು ತಾಲ್ಲೂಕು ಸಂಚಾಲಕರನ್ನಾಗಿ ವೆಂಕಟೇಶ್, ಅಶೋಕ್, ವೆಂಕಟರಾಮ್, ಮುರಳಿ, ಲೋಕೇಶ್ ಅವರನ್ನು ಅಯ್ಕೆ ಮಾಡಲಾಯಿತು.
ಬೋವಿ ಯುವ ವೇದಿಕೆ ನೂತನ ತಾಲ್ಲೂಕು ಆಧ್ಯಕ್ಷರಾಗಿ ವೆಂಕಟರಾಮ್ ಲಕ್ಷ್ಮಿಸಾಗರ, ಉಪಾಧ್ಯಕ್ಷರಾಗಿ ಪ್ರಶಾಂತ್, ರವಿ ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್, ಸಹ ಪ್ರಧಾನ ಕಾರ್ಯದರ್ಶಿಯಾಗಿ ಮುನಿಸ್ವಾಮಿ, ಖಜಾಂಚಿಯಾಗಿ ಶಿವಕುಮಾರ್, ಸಂಘಟನೆ ಕಾರ್ಯದರ್ಶಿಯಾಗಿ ಸುಬ್ರಮಣಿ ಅಯ್ಕೆಯಾದರು.
ಕೋಲಾರ ನಗರ ಘಟಕದ ನೂತನ ಅಧ್ಯಕ್ಷರಾಗಿ ರಾಕೇಶ್, ಉಪಾಧ್ಯಕ್ಷರಾಗಿ ಭರತ್, ಸುನೀಲ್, ಪ್ರಸಾದ್, ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಪವನ್, ಸಹ ಕಾರ್ಯದರ್ಶಿಯಾಗಿ ವಂಶಿ, ಮಂಜುನಾಥ್, ಖಜಾಂಚಿಯಾಗಿ ದಯಾನಂದ, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್, ಸುನೀಲ್ ರಾಜು, ಗಣೇಶ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭೋವಿ ಸಮುದಾಯದ ಹಿರಿಯ ಮುಖಂಡರಾದ ಜಿ.ಪಂ ಮಾಜಿ ನಿವೃತ್ತ ಲೆಕ್ಕಾಧಿಕಾರಿ ವೆಂಕಟರವಣ, ಮುಖಂಡರು, ಭೋವಿ ಯುವ ವೇದಿಕೆ ಮುಖಂಡರು ಹಾಗೂ ಯುವ ಮುಖಂಡ ಇದ್ದರು.
ಚಿತ್ರ ; ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಭೋವಿ ಯುವ ವೇದಿಕೆ ನೂತನ ಪದಾಧಿಕಾರಿಗಳ ಸಭೆಯಲ್ಲಿ ಭೋವಿ ಸಮುದಾಯದ ಅಧ್ಯಕ್ಷೆಯಾಗಿ ಮಂಗಮ್ಮ ಮುನಿಸ್ವಾಮಿ ಮುಂದುವರೆಯಲು
ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್