
ಕೊಪ್ಪಳ, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ನಗರಸಭೆ ಮುಂದಿನ ಟೆಂಟ್ನಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿPಯÉ ಜಂಟಿ ಕ್ರಿಯಾ ವೇದಿಕೆ ಹಮ್ಮಿಕೊಂಡಿರುವ 120ನೇ ದಿನದ ಬಲ್ಡೋಟ ತೊಲಗಿಸಿ ಧರಣಿಯಲ್ಲಿ ಭಾಗ್ಯನಗರದ ಯುವ ಮುಖಂಡರಾದ ಗ್ಯಾನೇಶ ಹ್ಯಾಟಿ ಮಾತನಾಡಿದರು.
ಸರ್ಕಾರ ಇಷ್ಟು ದೊಡ್ಡ ಸಂಖ್ಯೆಯ ಜನರ ಆರೋಗ್ಯದ ಭವಿಷ್ಯವನ್ನು ಹಗುರವಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲ್ ಇನ್ನೂ ನಾನು ಕೊಪ್ಪಳಕ್ಕೆ ಬಂದು ಇಲ್ಲಿನ ಜನರ ಮನವೊಲಿಸುತ್ತೀನಿ, ಗವಿಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ಮಾಡುತ್ತೀನಿ ಅಂತಾರೆ. ಆದರೆ ಅಂತಹ ವ್ಯರ್ಥ ಪ್ರಯತ್ನ ಮಾಡುವುದನ್ನು ಸಚಿವರು ಕೈಬಿಡಬೇಕು. ತಾವು ಬೇಕಾದರೆ ತಮ್ಮ ಕ್ಷೇತ್ರದಲ್ಲಿ ಕಾರ್ಖಾನೆ ಸ್ಥಾಪನೆ ಮಾಡಿಕೊಳ್ಳಲಿ. ಈ ಕಣ್ಣೊರೆಸುವ ತಂತ್ರ ಅವರಿಗೆ ಫಲ ಕೊಡುವುದಿಲ್ಲ ಎಂದರು.
ಧರಣಿ ವೇದಿಕೆಯಲ್ಲಿ ಇದೇ ಮಾರ್ಚ್ 6 ರಿಂದ ಅಧಿವೇಶನ ಆರಂಭವಾಗಲಿದ್ದು ಈ ಸಂದರ್ಭದಲ್ಲಿ ಸರ್ಕಾರದ ಕಣ್ಣು ತೆರೆಸಿ ಈ ಬಾರಿ ಬಲ್ಡೋಟ ವಿಸ್ತರಣೆ ವಿರೋಧಿಸಿ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡೋಣ ಎಂಬ ಸಲಹೆ ವ್ಯಕ್ತವಾಯಿತು. ಇದನ್ನು ಬೆಂಬಲಿಸಿ ಮಾತನಾಡಿದ ಮುಖಂಡರಾದ ಸರೋಜಾ ಬಾಕಳೆ ಅವರು, ಫೆ. 24 ಬಂದ್ ಹೋರಾಟ ಯಶಸ್ವಿಗೊಳಿಸಿದ ಕೊಪ್ಪಳ, ಭಾಗ್ಯನಗರ ಮತ್ತು ಹಳ್ಳಿಯ ಬಾಧಿತ ಜನರಿಗೆ ಕೃತಜ್ಞತೆ ಸಲ್ಲಿಸಿ, ಬೆಳಗಾವಿ ಮಾಡೀವಿ ಈಗ ಬೆಂಗಳೂರು ಸಹ ಮಾಡೋದು ಸೂಕ್ತ ಎಂದರು.
ಗಾಯಕರಾದ ಸದಾಶಿವ ಪಾಟೀಲ್ ಮಾತನಾಡಿ ಸತ್ಯಾಗ್ರಹಿಗಳಿಗೆ ಬಾಳೆಹಣ್ಣು ಹಂಚಿದರು.
ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಪ್ರೋ. ಡಾ. ಬಸವರಾಜ ಪೂಜಾರ, ಮಹಾದೇವಪ್ಪ ಮಾವಿನಮಡು, ಮೂಕಪ್ಪ ಮೇಸ್ತ್ರಿ, ಯಮನೂರಪ್ಪ ಹಾಲಳ್ಳಿ, ನಾಗರಾಜ ಕುಷ್ಟಗಿ, ಬಸವರಾಜ ಗೊಂದಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು, ವಿಜಯ ಮಹಾಂತೇಶ ಹಟ್ಟಿ, ರತ್ನಮ್ಮ ದೊಡ್ಡಮನಿ, ಗಂಗಮ್ಮ ಕೊಡೇಕಲ್, ಮಂಜುನಾಥ ಕವಲೂರು, ಶ್ರೀಧರ್ ಮಹೇಂದ್ರಕರ, ರಾಮಲಿಂಗಯ್ಯ ಶಾಸ್ತ್ರಿ, ಗವಿಸಿದ್ದಪ್ಪ ಚಿಕೇನಕೊಪ್ಪ, ಶರಣು ಗಡ್ಡಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್