
ಕೋಲಾರ, ೨೬ (ಹಿ.ಸ) :
ಆ್ಯಂಕರ್ : ಕೋಲಾರ ತಾಲ್ಲೂಕು ಹುತ್ತೂರು ಹೋಬಳಿ ಬೆಳಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನ ೫ ಸಾವಿರ ಲೀಟರ್ ಸಾಮರ್ಥ್ಯದ ಬಿ.ಎಂ.ಸಿ ಘಟಕವನ್ನು ಕೋಲಾರ ಲೋಕಸಭಾ ಸದಸ್ಯ ಎಂ. ಮಲ್ಲೇಶ್ಬಾಬು, ಕೋಲಾರ ಹಾಲು ಒಕ್ಕೂಟದ ಈಶಾನ್ಯ ಕ್ಷೇತ್ರದ ನಿರ್ದೇಶಕ ಡಿ.ವಿ.ಹರೀಶ್ ಉದ್ಘಾಟನೆ ಮಾಡಿದರು.
ಬಳಿಕ ಸಂಸ ಮಲ್ಲೇಶ್ ಬಾಬು ಮಾತನಾಡಿ ಡೈರಿ ಉದ್ಯಮವು ಕೇವಲ ಉದ್ಯೋಗವಲ್ಲ. ಅದು ರೈತರ ಬದುಕಿನ ಆಧಾರ. ಸಂಘದ ಆವರಣದಲ್ಲಿ ಸ್ಥಾಪಿಸಲಾದ ಅತ್ಯಾಧುನಿಕ ಬಿ.ಎಂ.ಸಿ. ಕೇಂದ್ರದಿ0ದ ಹಾಲನ್ನು ತಕ್ಷಣವೇ ತಂಪುಗೊಳಿಸಿ ಸಂರಕ್ಷಿಸಲು ಅನುಕೂಲವಾಗಲಿದೆ ಹಾಗೂ ಹೈನುಗಾರಿಕೆಗೆ ಹೆಚ್ಚಿನ ಲಾಭ ತಂದುಕೊಡಲಿದೆ ಮತ್ತು ಸ್ಥಳೀಯ ಹಾಲು ಉತ್ಪಾದಕರ ಆರ್ಥಿಕ ಸಬಲೀಕರಣ ಹಾಗೂ ಹಾಲಿನ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಎಂದು ಕರೆ ನೀಡಿದರು.
ಒಕ್ಕೂಟದ ನಿರ್ದೇಶಕ ಡಿ.ವಿ. ಹರೀಶ್ ಮಾತನಾಡಿ, ಸದರಿ ಸಂಘಕ್ಕೆ ೫ಸಾವಿರ ಲೀಟರ್ ಬಿ.ಎಂ.ಸಿ. ಘಟಕದ ವೆಚ್ಚ ರೂ. ೨೦ಲಕ್ಷ ಹಾಗೂ ಸಿವಿಲ್ ಕಾಮಗಾರಿ ಕೆಲಸಕ್ಕೆ ರೂ. ೧ಲಕ್ಷ ನೀಡಿದ್ದು, ಬಿ.ಎಂ.ಸಿ. ಘಟಕ ಮಾಡಿರುವುದರಿಂದ ಶುದ್ಧ ಮತ್ತು ಗುಣಮಟ್ಟಕ್ಕೆ ಅನುಕೂಲವಾಗುತ್ತದೆ.
ಮುಂದುವರೆದು ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಎಲ್ಲಾ ಸಂಘಗಳಲ್ಲಿ ಕಾಮನ್ ಸಾಫ್ಟ್ವೇರ್ ಅನ್ನು ಅಳವಡಿಸಿಕೊಂಡು ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯವಹಾರವನ್ನು ಗಣಿಕೀಕರಣಗೊಳಿಸಲು ಮತ್ತು ಪಾರದರ್ಶಕತೆ ತರಲು ವಿನ್ಯಾಸಗೊಳಿಸಲಾಗಿದ್ದು, ಹಾಲು ಹಾಕಿದ ತಕ್ಷಣ ಮೊಬೈಲ್ಗೆ ಸಂದೇಶ ಬರುತ್ತದೆಯೆಂದು ತಿಳಿಸಿದರು.
ಕಾರ್ಯಕ್ರಮದಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ, ಸಹಕಾರ ಸಂಘಗಳು ಗ್ರಾಮೀಣ ಭಾಗದ ಆರ್ಥಿಕ ಬೆನ್ನೆಲುಬಾಗಿದ್ದು, ಬೆಳಗಾನಹಳ್ಳಿ ಸಂಘವು ಸಹ ಈ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಮಾದರಿಯಾಗಿದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರಿಂದ ಹಾಲು ಸಂಗ್ರಹಿಸಲು ಮತ್ತು ಸಂಘವನ್ನು ಮತ್ತಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.
ಸಂಘದ ಅಧ್ಯಕ್ಷ ಬಿ.ಕೆ. ಸುರೇಶ್ ಮಾತನಾಡಿ, ೫ ಸಾವಿರ ಲೀಟರ್ ಬಿ.ಎಂ.ಸಿ. ಕೇಂದ್ರದಿAದ ಹಾಲಿನ ಪೌಷ್ಟಿಕಾಂಶ ಮತ್ತು ಶುದ್ಧತೆ ಕಾಪಾಡಲು ಸಾಧ್ಯವಾಗುತ್ತದೆ, ಈ ಮೂಲಕ ಸಂಘವನ್ನು ಜಿಲ್ಲೆಯಲ್ಲಿ ಮಾದರಿ ಸಂಘವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಡಗೂರು ರಾಮು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಊರಿನ ಮುಖಂಡರುಗಳು, ಕಾರ್ಯಕಾರಿ ಮಂಡಳಿ ಸದಸ್ಯರುಗಳು ಮತ್ತು ಒಕ್ಕೂಟದ ಅಧಿಕಾರಿಗಳು, ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಬೆಳಗಾನಹಳ್ಳಿಯಲ್ಲಿ ಸಂಸದ ಎಂ.ಮಲ್ಲೇಶ್ ಬಾಬು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನ ಬಿ.ಎಂ.ಸಿ. ಘಟಕ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್