
ಕೋಲಾರ, ೨೬ ಫೆಬ್ರವರಿ (ಹಿ.ಸ.) :
ಆ್ಯಂಕರ್ : ಫೆಬ್ರವರಿ ೨೫ ರಾತ್ರಿ ಸುಮಾರು ೧೧ ಘಂಟೆಯ ಸಮಯ. ನೀರವ ಮೌನ ಆವರಿಸಿತ್ತು. ಕೋಲಾರದ ಕೆ.ಎಸ್.ಆರ್.ಟಿ.ಸಿ ಡಿಪೋ ಹಿಂದೆ ಇರುವ ಆರ್.ಜಿ ಲೇಔಟ್ ಬಡಾವಣೆಯ ನಿವಾಸಿಗಳು ಘಾಡ ನಿದ್ರೆಗೆ ಜಾರಿದ್ದರು. ಶ್ರೀನಿವಾಸಪುರ ರಸ್ತೆಯಲ್ಲಿ ವಾಹನಗಳು ಕತ್ತಲೆ ಸೀಳಿಕೊಂಡು ಕರ್ಕಶವಾದ ಶಬ್ದ ಮಾಡುತ್ತ ಹೊರಟಿದ್ದವು. ಬೆಟ್ಟದ ಮೇಲೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದೊಡೆ ಎಂತಯ್ಯ ಎಂಬುವಂತೆ ಬಡಾವಣೆಯ ನಾಗರೀಕರು ರಸ್ತೆಯ ವಾಹನಗಳ ಕರ್ಕಶವಾದ ಶಬ್ದಕ್ಕೆ ಹೊಂದಿಕೊಂಡಿದ್ದಾರೆ. ಆದರೆ ಕತ್ತಲ್ಲನ್ನು ಸೀಳಿಕೊಂಡು ಒಂದೇ ಸಮನೇ ಆಗಸದಲ್ಲಿ ಬೆಳಕು ಶಬ್ದದ ಚವiಕ್ತಾರದ ರೀತಿಯಲ್ಲಿ ಏದು ನಿಮಿಷಗಳ ಕಾಲ ಕರ್ಕಶವಾದ ಶಬ್ದ ಒಂದೇ ಸಮನೇ ಬುಧವಾರ ರಾತ್ರಿ ೧೧ ಗಂಟೆಯಲ್ಲಿ ಮಲಗಿದ್ದವರನ್ನು ಗಾಬರಿಗೊಳಿಸಿತು
ನಿದ್ರೆಗೆ ಜಾರಿದವರು ಎಚ್ಚರಗೊಂಡು ಹೊರ ಬಂದು ನೋಡಿದಾಗ ವಾಲ್ಮಿಕಿ ಭವನದ ಮುಂದೆ ಪಟಾಕಿಗಳನ್ನು ಸಿಡಿಸಿ ಆಕಾಶದಲ್ಲಿ ಎತ್ತರಕ್ಕೆ ದಟ್ಟವಾದ ಬೆಳಕು ಮತ್ತು ಕರ್ಕಶವಾದ ಶಬ್ದ ಇಡೀ ಬಡಾವಣೆಗೆ ಕೇಳಿಸಿತು. ಆಗಾಗ ವಾಲ್ಮಿಕ ಭವನದ ಮುಂದೆ ಮೆಟ್ಟಲ ಮೇಲೆ ಕುಳಿತು ಕಂಠಪೂರ್ತಿ ಕುಡಿದು ಕಿರುಚಾಡುವುದು ಸಾಮಾನ್ಯವಾಗಿದೆ. ನಿದ್ರೆಗೆ ಜಾರಿದಾಗ ಎಚ್ಚರಗೊಂಡವರು ನಮಗೇಕೆ ಕುಡುಕರ ಉಸಾಬರಿ ಎಂದು ಮತ್ತೆ ನಿದ್ರೆಗೆ ಜಾರುತ್ತಾರೆ. ಪುಂಡ ಪೋಕರಿಗಳನ್ನು ಎದುರು ಹಾಕಿಕೊಂಡು ಬದುಕುವುದು ಹೇಗೆ ಎಂದು ಕಂಡರು ಕಂಡುಕಾಣದAತೆ ಹೋಗುತ್ತಾರೆ ಇಲ್ಲಿನ ನಿವಾಸಿಗಳು.
ಬುಧವಾರ ರಾತ್ರಿ ಕಂಠ ಪೂರ್ತಿ ಕುಡಿದು ಆ ಮೇಲೆ ಪಟಾಕಿ ಸಿಡಿಸಿ ಸಂತೋಷಕೂಟ ನಡೆಸಲಾಗಿದೆ. ಆಗಾಗ ಇಂತಹ ಸಂತೋಷ ಕೂಟಗಳು ಅಲ್ಲಿ ನಡೆಯುತ್ತವೆ. ರಸ್ತೆ ಮದ್ಯೆ ಕಂಠಪೂರ್ತಿ ಕುಡಿದು ಕೇಕ್ ಕತ್ತರಿಸಿ ಇಡೀ ಬಡಾವಣೆಗೆ ಕೇಳಿಸುವಂತೆ ಅರಚಾಡಿದರು ನಿದ್ರೆಯಿಂದ ಎಚ್ಚರಗೊಂಡವರು ಯಾರು ರಸ್ತೆಯಲ್ಲಿ ಹುಟ್ಟು ಹಬ್ಬ ಆಚರಿಸಿದವರನ್ನು ಪ್ರಶ್ನೆ ಮಾಡಲಿಲ್ಲ. ಇದರಿಂದಾಗಿ ಪುಂಡಪೋಕರಿಗಳಿಗೆ ಬಂಡ ಧೈರ್ಯ ಬಂದಿದೆ.ರಾತ್ರಿಯಾಕೆ ಹಗಲೇ ರಸ್ತೆ ಹಾಗು ಬಡಾವಣೆಯ ಪಾರ್ಕ್ನಲ್ಲಿ ಕಂಠಪೂರ್ತಿ ಕುಡಿದರು ನೋಡುನೋಡದಂತೆ ಜನ ಹೋಗುತ್ತಾರೆ.
ಡಿಸೆಂಬರ್ ರಾತ್ರಿ ಹತ್ತು ಗಂಟೆಯನAತರ ಯಾರು ಮಿಸಕಾಡಲು ಬಿಡುವುದಿಲ್ಲ ಎಂದು ಪೋಲೀಸರು ಘೋಷಣೆ ಮಾಡಿದ್ದರು. ಹೊಸ ವರ್ಷವನ್ನು ನಿಗದಿತ ಸಮದಲ್ಲಿ ನಿಗದಿತ ಸ್ಥಳದಲ್ಲಿ ಮಾಡಬೇಕೆಂದು ಪೋಲಿಸರು ಕಟ್ಟಪ್ಪಣೆ ಮಾಡಿದ್ದರು. ಆದರೆ ಪೋಲಿಸರಿಗೆ ಸವಾಲು ಎನ್ನುವಂತೆ ವಾಲ್ಮಿಕಿ ಭವನದ ಮೆಟ್ಟಲ ಮೇಲೆ ಹೊಸ ವರ್ಷದ ಪಾನಗೋಷ್ಠಿ ನಿರಾತಂಕವಾಗಿ ನಡೆಯಿತು. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ ನಿದ್ರಗೆ ಜಾರಿದ್ದವರನ್ನು ಎಚ್ಚರಗೊಳಿಸಲಾಯಿತು. ಮಧ್ಯರಾತ್ರಿ ೧ ಗಂಟೆಯ ತನಕ ವಾಲ್ಮೀಕಿ ಭವನದ ಮೆಟ್ಟಿಲು ಮೇಲೆ ಕುಳಿತು ಕೇಕೆ ಹಾಕಿ ಕೂಗಾಡುತ್ತಿದ್ದದು ಇಡೀ ಬಡಾವಣೆಗೆ ಕೇಳಿಸುತ್ತಿತ್ತು.
ಆರ್.ಜಿ.ಲೇ.ಔಟ್ ಬಡಾವಣೆ ಪುಂಡಪೋಕರಿಗಳ ಮತ್ತು ಕಿಡಿಗೇಡಿಗಳ ಅಡ್ಡೆಯಾಗಿದೆ. ಗುತ್ತಿಗೆದಾರರ ಭವನ ಮುಂದೆ ಒಂದನೇ ಕ್ರಾಸ್ನಲ್ಲಿ ಇರುವ ಮರದ ನೆರಳು, ವಾಲ್ಮಿಕಿ ಭವನದ ಮೆಟ್ಟಲು, ಮೆಟ್ಟಲು ಕೆಳಗೆ ,ವಾಲ್ಮಿ ಭವನದ ¨ಳಿ ಇರುವ ನಿರ್ಮಾಣದ ಹಂತದಲ್ಲಿರುವ ಕಲ್ಯಾಣ ಮಂಟಪ ಅದರಿಂದ ಸಮೀಪವೇ ಇರುವ ಸಮಾಜ ಕಲ್ಯಾಣ ಇಲಾಖೆಯ ಕಛೇರಿಯ ಕತ್ತಲು ಆವರಿಸಿದ ಆವರಣ ಪುಂಡ ಪೋಕರಿಗಳಿಗೆ ನೆಚ್ಚಿನ ತಾಣಗಳಾಗಿವೆ. ಈ ತಾಣಗಳಿಗೆ ಸ್ಥಳೀಯರು ಆಗಾಗ ರಾತ್ರಿ ಮದ್ಯ ಸೇವಿಸಿ ಸಿಗರೇಟು ಸೇದಿ ವಿರಮಿಸುತ್ತಾರೆ. ಗುಟ್ಕಾ ಚಟ ಇರುವವರು ಜಗಿದು ಮೆಟ್ಟಲ ಮೇಲೆ ಉಗಿಯಾತ್ತಾರೆ.ವಾಲ್ಮಿಕಿ ಭವನದ ಕೆಳಗೆ ಮಟ್ಟಲು ಕಂದು ಬಣ್ಣಕ್ಕೆ ತಿರುಗಿದೆ. ನಿತ್ಯ ಬರುವರಿಗೆ ಆರ್.ಜಿ. ಲೇಔಟ್ ಮನೆ ರೀತಿ ಆಗಿದೆ. ನಿತ್ಯ ಬರುವರು ಅಲ್ಲದೆ ರಾತ್ರಿ ಎಂ.ಎಸ್ ಐ.ಎಲ್ ರಿಟೇಲ್ನಲ್ಲಿ ಮದ್ಯ ಖರೀದಿಸಿ ಚಿಪ್ಸ್ ಕಬಾಬ್ ಹಾಗು ವಾಟರ್ ಬಾಟಲ್ ಸಮೇತ ಆರ್.ಜಿ ಲೇಔಟ್ನ ಒಂದನೇ ಕ್ರಾಸ್ನಲ್ಲಿ ಕುಳಿತು ಆರಾಮವಾಗಿ ಮದ್ಯ ಸೇವಸಿ ಧೂಪಪಾನ ಮಾಡಿ ತೆರಳುತ್ತಾರೆ. ಒಂದನೇ ಕ್ರಾಸ್ ಅಲ್ಲದೆ ಎರಡನೇ ಕ್ರಾಸ್ ಸಹ ಕುಡುಕರ ಅಡ್ಡೆಯಾಗಿದೆ. ಮರಗಳು ಬೆಳೆದಿದ್ದು ಮರದ ನೆರಳಲ್ಲಿ ಕುಳಿತು ಮದ್ಯ ಸೇವಿಸುತ್ತಾರೆ. ಆಗಾಗ ಕೆಲವು ಯುವಕರು ಮರಗಳ ನೆರಳಲ್ಲಿ ಕುಳಿತು ನಷೆ ಏರಿದ ಸ್ಥಿತಿಯಲ್ಲಿ ಇರುತ್ತಾರೆ. ಮಧ್ಯ ರಾತ್ರಿಯತನಕ ಒಂಟಿಯಾಗಿ ಇರುವುದನ್ನು ನೋಡಿದರೆ ಡ್ರಗ್ ಅಡಿಟ್ ಇರಬಹುದು ಎಂಬ ಅನುಮಾನ ಮೂಡುತ್ತದೆ. ವಾಲ್ಮಿ ಭವನದ ಸಮೀಪ ಇರುವ ನಿರ್ಮಾಣದ ಹಂತದಲ್ಲಿರುವ ಕಲ್ಯಾಣ ಮಂಟಪ ಹಾಗು ಸಮಾಜ ಕಲ್ಯಾಣ ಇಲಾಖೆಯ ಕಛೇರಿಯ ಕತ್ತಲ ಲೋಕ ಕೆಲವರಿಗೆ ರಾತ್ರಿ ಅನೈತಿಕ ಚಟುವಟಿಗಳನ್ನು ನಡೆಸಲು ತಾಣವಾಗಿದೆ. ಯಾರು ಕೇಳುವವರು ಇಲ್ಲವಾದ ಕಾರಣ ಪುಂಡ ಪೋಕರಿಗಳಿಗೆ ಧೈರ್ಯ ಹೆಚ್ಚಿಸಿದೆ.
ಬುದವಾರ ರಾತ್ರಿ ವಾಲ್ಮಿಕಿ ಭವನದ ಬಳಿ ನಡೆದ ಪುಂಡಾಟಿಕೆಯ ಬಗ್ಗೆ ಪೋಲಿಸರಿಗ ದೂರವಾಣಿ ಕರೆ ಮಾಡಿ ತಿಳಿಸಲಾಯಿತು. ಬಂದರೋ ಹೋದರು ತಿಳಿಯದು. ಹೊಯ್ಸಳ ಪೊಲೀಸ್ ಪಡೆಯವರು ಆಗಾಗ ಬಂದು ಲೊಕೇಷನ್ ಷೇರ್ ಮಾಡಿ ಸ್ವಲ್ಪ ಹೊತ್ತು ವಿರಮಿಸಿ ತೆರಳುತ್ತಾರೆ. ಗಲ್ಪೇಟೆ ಪೊಲೀಸರು ಆಗಾಗ ಅಮಾವಾಸ್ಯೆ ಕತ್ತಲಲ್ಲಿ ಶ್ರೀನಿವಾಸಪುರ ಟೋಲ್ ಗೇಟ್ನಲ್ಲಿ ಹಳ್ಳಿಗಳಿಗೆ ತೆರಳುವರರನ್ನು ನಿಲ್ಲಿಸಿ ಕುಡಿದಿದ್ದರಾ ಉಸಿರು ಊದಿ ಎಂದು ರಾತ್ರಿ ಮನೆಗಳಿಗೆ ತೆರಳುವವರ ಉಸಿರು ತೆಗೆಯುತ್ತಾರೆ. ಟೋಲ್ ಗೇಟ್ನಿಂದ ಕೆರೆ ಕಟ್ಟೆ ಇಳಿದು ಬಂದು ಕತ್ತಲಲ್ಲಿ ಆರ್.ಜಿ.ಲೇಔಟ್ನ ರಸ್ತೆಗಳಲ್ಲಿ ಕುಡಿಯವರನ್ನು ಎಂದೂ ಪ್ರಶ್ನೆ ಮಾಡುವುದಿಲ್ಲ. ಯಾರಾದರು ಧೈರ್ಯ ಮಾಡಿ ರಸ್ತೆಯಲ್ಲಿ ಕುಡಿಯುತ್ತಿದ್ದಾರೆ ಎಂದು ಗಲ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದರೆ ಸ್ಥಳಕ್ಕೆ ಆಗಮಿಸುವ ಪೋಲೀಸರು ಯಾಕಪ್ಪ ಇಲ್ಲಿ ಕುಡಿತೀರಿ ಹೋಗಿ ಎಂದು ಬುದ್ದಿವಾದ ಹೇಳಿ ಕಳುಹಿಸುತ್ತಾರೆ. ಒಂದು ಕೇಸ್ ಹಾಕಿ ಮತ್ತೆ ಈಕಡೆ ಸುಳಿಯುದಿಲ್ಲ ಎಂದರೆ ಅಯ್ಯೋ ಮೊದಲೇ ಕುಡಿದಿರುತ್ತಾರೆ. ನಾವು ಎಳೆದಕೊಂಡು ಹೋದರೆ ಹೆಚ್ಚುಕಡಿಮೆ ಆಗುತ್ತದೆ ಎಂದು ನುಣುಚಿಕೊಳ್ಳುತ್ತಾರೆ. ಹೊಯ್ಸಳ ಪೊಲೀಸರಿಗಂತು ಕುಡುಕರನ್ನು ನೋಡಿದರೆ ಬುಧ್ಧನ ಕಾರುಣ್ಯ ಉಕ್ಕುತ್ತದೆ. ಏಯ್ ಎಂದು ಗದರುವುದಿಲ್ಲ. ಅವರು ಒಂದು ರೀತಿ ಅಹಿಂಸಾವಾದಿಗಳು.
ಕಳೆದ ಎರಡು ವರ್ಷಗಳ ಹಿಂದೆ ಮೂವರು ಪುಂಡರು ಕಾರು ಕಲಿಯಲು ನಡುರಾತ್ರಿ ಆರ್.ಜಿ.ಲೇಔಟ್ನ ಬಡವಾಣೆಗೆ ಬಂದಿದ್ದರು. ಕಾರಿನಲ್ಲೇನೋ ಬಂದರು ಆದರೆ ಗೇರ್ ಹಾಕು ಕಾರು ನಿಲ್ಲಿಸಲು ಆಗದೆ ರಾತ್ರಿ ಎಲ್ಲಾ ರಸ್ತೆ ಬದಿಯ ಮನೆಗಳ ಗೇಟ್ಗಳಿಗೆ ಗುದ್ದಿದರು. ಆ ನಂತರ ಕಾರ್ ನಿಂತು ಹೋಯಿತು. ಇಡೀ ರಾತ್ರಿ ರಾದ್ದಾಂತ ನಡೆದರೂ ಯಾರೂ ಅವರನ್ನು ಕೇಳಲಿಲ್ಲ.
ನಾಲ್ಕು ವರ್ಷಗಳ ಹಿಂದೆ ಶ್ರೀನಿವಾಸಪುರ ರಸ್ತೆಯಲ್ಲಿ ಕೋಡಿಕಣ್ಣೂರು ಕೆರೆ ಅಂಚಿನಲ್ಲಿ ರಸ್ತೆ ಬದಿಯಲ್ಲಿ ಮದ್ಯಪಾನ ಸೇವಿಸುತ್ತಿದ್ದರು. ಅಂದಿನ ಎಸ್.ಪಿ. ದೇವರಾಜ್ ಅವರಿಗೆ ದೂರವಾಣಿ ಕರೆ ಮಾಡಿದ ಕೂಡಲೇ ಮಪ್ತಿಯಲ್ಲಿ ಬಂದರು. ಅವರು ದಾಳಿ ಮಾಡುತ್ತಲೆ ಹಳ್ಳಕ್ಕೆ ಜಿಗಿದು ತಪ್ಪಿಸಿಕೊಂಡು ಹೋದರು. ಯಥಾ ಪ್ರಕಾರ ಮರು ದಿನ ಅದೇ ಸ್ಥಳದಲ್ಲಿ ಮದ್ಯಪಾನ ಸೇವನೆ ಮುಮದುವರೆಯಿತು.
ನಮ್ಮ ಗೃಹ ಸಚಿವರಾದ ಡಾ.ಪರಮೇಶ್ವರ್ ಮನೆ ಮೆನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪೊಲೀಸ್ ಠಾಣೆಗೆ ಹೋಗುವ ಬದಲು ಪೊಲೀಸರೇ ನಮ್ಮ ಮನೆಗಳಿಗೆ ಬರುತ್ತಾರೆ. ಕಷ್ಠ ಸುಖಗಳನ್ನು ಪೊಲೀಸರ ಬಳಿ ಹಂಚಿಕೊಳ್ಳಬಹುದು. ಮೂರು ತಿಂಗಳ ಹಿಂದೆ ಗಲ್ಪೇಟೆಯ ಮಹಿಳಾ ಪೊಲೀಸ್ ಪೇದೆಯೊಬ್ಬರು ಆರ್.ಜಿ. ಲೇಔಟ್ ಮನೆಗಳಿಗೆ ಬಂದು ಹೆಸರುಗಳನ್ನು ಬರೆದುಕೊಂಡು ಹೋದರು. ನಿಮ್ಮ ಸಮಸ್ಯೆಗಳು ಹೇಳಿ ನಾವು ಪರಿಹಾರ ಕಲ್ಪಿಸುತ್ತೇವೆ ಎಂದು ಹೇಳಿದರು. ಆರ್.ಜಿ. ಬಡಾವಣೆಯ ನಿವಾಸಿಗಳು ಎದುರಿಸುತ್ತಿರುವ ಪುಂಡ ಪೋಕರಿಗಳ ಕಾಟದ ಬಗ್ಗೆ ಹೇಳಲಾಯಿತು. ಸರಿ ಸರ್ ನಾನು ಪೊಲೀಸ್ ಠಾಣೆಯಲ್ಲಿ ವರದಿ ಮಾಡುತ್ತೇನೆ ಎಂದು ಹೋದವರು ತಿರುಗಿ ನೋಡಲಿಲ್ಲ.
ಹೊಯ್ಸಳ ಪೊಲೀಸರಿಗೆ ಕರೆ ಮಾಡಿದರೆ ನಿಧಾನವಾಗಿ ಬರುತ್ತಾರೆ. ಅವರು ಬರುವ ವೇಳೆಗೆ ಪುಂಡ ಪೋಕರಿಗಳು ಪರಾರಿಯಾಗುತ್ತಾರೆ. ಆರ್.ಜಿ. ಬಡಾವಣೆಯಲ್ಲಿ ರಾತ್ರಿ ವೇಳೆ ಪುಂಡಾಟ ನಡೆಸುವ ವ್ಯಕ್ತಿಗಳು ಯಾರು ಎಂಬುದು ಪೊಲೀಸರಿಗೆ ತಿಳಿದಿದೆ. ಬೆಳಿಗ್ಗೆ ಅಥವಾ ಮಧ್ಯಾಹ್ನ ಅವರು ಪೊಲೀಸರ ಹೆಗಲಮೇಲೆ ಕೈ ಹಾಕುವ ರೀತಿಯ ಸ್ನೇಹಿತರಾಗಿದ್ದಾರೆ. ಸ್ಥಳೀಯರನ್ನು ಯಾಕೆ ನಾವು ಎದುರು ಹಾಕಿಕೊಳ್ಳಬೇಕು ಎಂದು ಪೊಲೀಸರು ಕಂಡು ಕಾಣದಂತೆ ಇರುತ್ತಾರೆ.
ವಾಲ್ಮೀಕಿ ಭವನದ ಮುಂದೆ ಇರುವ ಹೈಮಾಸ್ ಲೈಟ್ ಕಂಬದ ಬಳಿ ಈ ಹಿಂದೆ ಸಿ.ಸಿ. ಟಿ.ವಿ. ಕ್ಯಾಮರಾ ಹಾಕಲಾಗಿತ್ತು. ಇತ್ತೀಚೆಗೆ ಸಿ.ಸಿ.ಟಿ.ವಿ ಕ್ಯಾಮರಾ ನಾಪತ್ತೆಯಾಗಿದೆ.
ಚಿತ್ರ : ಕೋಲಾರ ನಗರದ ಗಲ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಆರ್.ಜಿ.ಲೇಔಟ್ ಬಡಾವಣೆಯಲ್ಲಿರುವ ವಾಲ್ಮೀಕಿ ಭನವದ ಮುಂದೆ ಬಿದ್ದಿರುವ ಖಾಲಿ ಮದ್ಯದ ಬಾಟೆಲ್ಗಳು. ರಾತ್ರಿ ಮದ್ಯಸೇವನೆಯ ಸಮಯದಲ್ಲಿ ಸಿಗರೇಟ್ ಸೇದಿ ಎಸೆಯಲಾಗಿರುವ ಸಿಗಟರೇಟ್ ಮತ್ತು ಗುಟ್ಕಾ ಪಾಕೆಟ್ಗಳು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್