
ಹೈದರಾಬಾದ್, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ನಿಷೇಧಿತ ಭಾರತ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ) ಸಂಘಟನೆಯ ನಾಲ್ವರು ಹಿರಿಯ ನಾಯಕರು ಮಂಗಳವಾರ ತೆಲಂಗಾಣದಲ್ಲಿ ಶರಣಾಗಿ, ಪೊಲೀಸ್ ಮಹಾನಿರ್ದೇಶಕ ಶಿವಧರ್ ರೆಡ್ಡಿ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಮರಳಿದರು.
ಪಾಲಿಟ್ಬ್ಯುರೋ ಸದಸ್ಯ ತಿಪ್ಪಿರಿ ತಿರುಪತಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸಮಿತಿ ಮಟ್ಟದ ಪ್ರಮುಖರು ಶಸ್ತ್ರತ್ಯಾಗ ಮಾಡಿದರು. ಕಳೆದ ಎರಡು ವರ್ಷಗಳಲ್ಲಿ ಒಟ್ಟು 591 ಮಾವೋವಾದಿಗಳು ಶರಣಾಗಿದ್ದು, ಇನ್ನೂ 11 ಮಂದಿ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಕರೆಗೆ ಸ್ಪಂದಿಸಿ ಹಿಂಸಾಚಾರ ತ್ಯಜಿಸಿರುವವರಿಗೆ ಸರ್ಕಾರ ಪುನರ್ವಸತಿ ಪ್ಯಾಕೇಜ್ ನೀಡಲಿದೆ ಎಂದು ಡಿಜಿಪಿ ಹೇಳಿದರು. ದಾಂತೇವಾಡ ದಾಳಿಯ ಸೂತ್ರಧಾರನೆಂದು ಶಂಕಿತ ತಿರುಪತಿ ರಾಷ್ಟ್ರೀಯ ತನಿಖಾ ಸಂಸ್ಥೆ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa