ರಾಹುಲ್ ಗಾಂಧಿ ವಿರುದ್ಧ ಪಿತೂರಿ ಆರೋಪ ಮಾಡಿದ ಬಿಜೆಪಿ
ನವದೆಹಲಿ, 24 ಫೆಬ್ರವರಿ (ಹಿ.ಸ.) : ಆ್ಯಂಕರ್ : ಲೋಕ ಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎಐ ಶೃಂಗಸಭೆಯ ವೇಳೆ ಭಾರತವನ್ನು ಮುಜುಗರಕ್ಕೀಡು ಮಾಡಲು ಪಿತೂರಿ ನಡೆಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದರು. ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ
Bhatiya


ನವದೆಹಲಿ, 24 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಲೋಕ ಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎಐ ಶೃಂಗಸಭೆಯ ವೇಳೆ ಭಾರತವನ್ನು ಮುಜುಗರಕ್ಕೀಡು ಮಾಡಲು ಪಿತೂರಿ ನಡೆಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದರು.

ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಮಂಟಪದಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭ ನಡೆದ ಪ್ರತಿಭಟನೆಗೆ ಸಂಬಂಧಿಸಿ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಬಂಧಿತರಾಗಿದ್ದಾರೆ ಎಂದರು.

ಜಾಗತಿಕ ಗಮನ ಭಾರತದ ಮೇಲೆ ಕೇಂದ್ರೀಕೃತವಾಗಿದ್ದ ಸಮಯದಲ್ಲಿ ಅರೆ ನಗ್ನ ಪ್ರತಿಭಟನೆ ಮೂಲಕ ನಡೆಸಿರುವುದು ದೇಶದ ಮಾನಹಾನಿಗೆ ಯತ್ನ ಎಂದು ಹೇಳಿದರು.

ಸಂವಿಧಾನದ ವಿಧಿ 19(2) ಅನ್ನು ಉಲ್ಲೇಖಿಸಿದ ಭಾಟಿಯಾ, ಸಾರ್ವಜನಿಕ ಸುವ್ಯವಸ್ಥೆ ಮತ್ತು ನೈತಿಕತೆಯ ಹಿತದೃಷ್ಟಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಮಂಜಸ ನಿರ್ಬಂಧಗಳಿವೆ ಎಂದರು. ರಾಹುಲ್ ಗಾಂಧಿಯವರ ಬೆಂಬಲವಿಲ್ಲದೆ ಇಂತಹ ಘಟನೆ ಸಾಧ್ಯವಿಲ್ಲ ಎಂದು ಅವರು ಆರೋಪಿಸಿದರು.

ಎಐ ಶೃಂಗಸಭೆ ಭಾರತದ ಜಾಗತಿಕ ನಾಯಕತ್ವದ ಸಂಕೇತವಾಗಿದ್ದು, ಜಿ-20 ಶೃಂಗಸಭೆಯ ಬಳಿಕ ವಿಶ್ವ ಸಮುದಾಯ ಭಾರತವನ್ನು ಶ್ಲಾಘಿಸಿದೆ. ಆದರೆ ಕಾಂಗ್ರೆಸ್ ಪಕ್ಷ ದೇಶದ ಸಾಧನೆಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಟೀಕಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande