ರಾಷ್ಟ್ರೀಯ ದುಂಡು ಮೇಜಿನ ಸಮ್ಮೇಳನ ; ಮತದಾರರೇ ಕೇಂದ್ರಬಿಂದು : ಸಿಇಸಿ ಜ್ಞಾನೇಶ್ ಕುಮಾರ್
ನವದೆಹಲಿ, 24 ಫೆಬ್ರವರಿ (ಹಿ.ಸ.) : ಆ್ಯಂಕರ್ : 27 ವರ್ಷಗಳ ಬಳಿಕ ಭಾರತೀಯ ಚುನಾವಣಾ ಆಯೋಗ ಹಾಗೂ ರಾಜ್ಯ ಚುನಾವಣಾ ಆಯುಕ್ತರನ್ನು ಒಂದೇ ವೇದಿಕೆಯಲ್ಲಿ ಸೇರಿಸಿದ ರಾಷ್ಟ್ರೀಯ ದುಂಡು ಮೇಜಿನ ಸಮ್ಮೇಳನವನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮಂಗಳವಾರ ಉದ್ಘಾಟಿಸಿದರು. ದೆಹಲಿಯ ಭಾರತ ಮಂಟಪದಲ್
Cec


ನವದೆಹಲಿ, 24 ಫೆಬ್ರವರಿ (ಹಿ.ಸ.) :

ಆ್ಯಂಕರ್ : 27 ವರ್ಷಗಳ ಬಳಿಕ ಭಾರತೀಯ ಚುನಾವಣಾ ಆಯೋಗ ಹಾಗೂ ರಾಜ್ಯ ಚುನಾವಣಾ ಆಯುಕ್ತರನ್ನು ಒಂದೇ ವೇದಿಕೆಯಲ್ಲಿ ಸೇರಿಸಿದ ರಾಷ್ಟ್ರೀಯ ದುಂಡು ಮೇಜಿನ ಸಮ್ಮೇಳನವನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮಂಗಳವಾರ ಉದ್ಘಾಟಿಸಿದರು.

ದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾಂವಿಧಾನಿಕ ಸಮನ್ವಯದ ದೃಷ್ಟಿಯಿಂದ ಇಸಿಐ ಮತ್ತು ರಾಜ್ಯ ಚುನಾವಣಾ ಆಯೋಗಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು. “ಪ್ರತಿಯೊಂದು ನಿರ್ಧಾರದಲ್ಲೂ ಮತದಾರರೇ ನಮ್ಮ ಪ್ರಯತ್ನಗಳ ಕೇಂದ್ರಬಿಂದುವಾಗಿರಬೇಕು” ಎಂದು ಅವರು ಒತ್ತಿ ಹೇಳಿದರು.

ಚುನಾವಣಾ ಆಯುಕ್ತರಾದ ಎಸ್.ಎಸ್.ಸಂದು ಮತ್ತು ವಿವೇಕ ಜೋಶಿ ಸಹ ಭಾಗವಹಿಸಿ, ವಿವಿಧ ವಿಷಯಗಳ ಕುರಿತು ಚರ್ಚೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಆಯೋಗವು “ಪ್ರಜಾಪ್ರಭುತ್ವಗಳ ಸಂಗಮ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿತು.

ಸಮ್ಮೇಳನದಲ್ಲಿ ಇವಿಎಂಗಳು, ಇಸಿನೆಟ್ ವ್ಯವಸ್ಥೆ ಮತ್ತು ಮತದಾರರ ಪಟ್ಟಿ ಹಂಚಿಕೆ ಕುರಿತಂತೆ ಪ್ರಸ್ತುತಿಗಳು ನಡೆಯಲಿವೆ. ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಮತದಾರರ ಪಟ್ಟಿ ನಿರ್ವಹಣೆಯನ್ನು ಸುವ್ಯವಸ್ಥಿತಗೊಳಿಸುವುದು ಮತ್ತು ಸಾಂಸ್ಥಿಕ ಸಮನ್ವಯ ಹೆಚ್ಚಿಸುವ ಬಗ್ಗೆ ಚರ್ಚಿಸಲಿದ್ದಾರೆ.

ಚರ್ಚೆಗಳ ಪ್ರಮುಖ ಅಂಶವಾಗಿ “ಏಕ ಮತದಾರರ ಪಟ್ಟಿ” ಪರಿಕಲ್ಪನೆ ಗಮನ ಸೆಳೆದಿದೆ. ವಿಭಿನ್ನ ಸಾಂವಿಧಾನಿಕ ವ್ಯಾಪ್ತಿಗಳಲ್ಲಿ ಮತದಾರರ ದತ್ತಾಂಶದ ಏಕರೂಪತೆ ಮತ್ತು ಸಮನ್ವಯ ಸಾಧಿಸುವುದು ಇದರ ಗುರಿಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande