ಬೆಂಗಳೂರಿನ ಪಿವಿಆರ್ ಐನಾಕ್ಸ್ನಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ: ಜ್ಯೂಸ್ ಕೌಂಟರ್ ಬಂದ್
ಬೆಂಗಳೂರು, 06 ನವೆಂಬರ್ (ಹಿ.ಸ.): ಬೆಂಗಳೂರಿನ ಕೊಣನಕುಂಟೆ ಕ್ರಾಸ್ನ ಫೋರಂ ಮಾಲ್ನಲ್ಲಿರುವ ಪಿವಿಆರ್ ಐನಾಕ್ಸ್‌ನಲ್ಲಿ ಮಲ್ಟಿಪ್ಲೆಕ್ಸ್ನಲ್ಲಿ ಬಳಸಿ ಬಿಸಾಡಬೇಕಾದ ಲೋಟಗಳನ್ನು ಮರುಬಳಕೆ ಮಾಡಲಾಗುತ್ತಿದೆ ಎಂಬ ಆರೋಪದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಕ್ರಮ ಕೈಗೊಂಡಿದೆ. ಮಲ್ಟಿಪ್ಲೆ
bengaluru-pvr-inox-juice-counter-shut-food-safety-violation


ಬೆಂಗಳೂರು, 06 ನವೆಂಬರ್ (ಹಿ.ಸ.):

ಬೆಂಗಳೂರಿನ ಕೊಣನಕುಂಟೆ ಕ್ರಾಸ್ನ ಫೋರಂ ಮಾಲ್ನಲ್ಲಿರುವ ಪಿವಿಆರ್ ಐನಾಕ್ಸ್‌ನಲ್ಲಿ ಮಲ್ಟಿಪ್ಲೆಕ್ಸ್ನಲ್ಲಿ ಬಳಸಿ ಬಿಸಾಡಬೇಕಾದ ಲೋಟಗಳನ್ನು ಮರುಬಳಕೆ ಮಾಡಲಾಗುತ್ತಿದೆ ಎಂಬ ಆರೋಪದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಕ್ರಮ ಕೈಗೊಂಡಿದೆ. ಮಲ್ಟಿಪ್ಲೆಕ್ಸ್ನ ಜ್ಯೂಸ್ ಕೌಂಟರ್ ಅನ್ನು ಅಧಿಕಾರಿಗಳು ಮುಚ್ಚಿಸಿದ್ದು, ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದಾರೆ.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಚಿವ ಯು.ಟಿ. ಖಾದರ್ ಹೇಳಿದ್ದೇನು?

ಪಿವಿಆರ್ ಐನಾಕ್ಸ್‌ನಲ್ಲಿ ಫೋರಂ ಮಾಲ್ನಲ್ಲಿರುವ ಜ್ಯೂಸ್ ಕೌಂಟರ್ನಲ್ಲಿ ಗ್ರಾಹಕರಿಗೆ ಜ್ಯೂಸ್ ನೀಡಲು ಬಳಸುವ ಲೋಟಗಳ ಕುರಿತು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ವೇಳೆ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದಿದೆ. ಹೀಗಾಗಿ ಸಂಬಂಧಪಟ್ಟ ಸಂಸ್ಥೆಗೆ ನೋಟಿಸ್ ನೀಡಲಾಗಿದ್ದು, ಜ್ಯೂಸ್ ಕೌಂಟರ್ ಅನ್ನು ಮುಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ವೈರಲ್ ವಿಡಿಯೋದಿಂದ ಬೆಳಕಿಗೆ ಬಂದ ಪ್ರಕರಣ

ನವೆಂಬರ್ 5ರಂದು ಮಿಥಿಲ್ ಕುಮಾರ್ ಎಂಬ ಇನ್ಸ್ಟಾಗ್ರಾಂ ಬಳಕೆದಾರರು ಹಂಚಿಕೊಂಡ ವಿಡಿಯೋದಲ್ಲಿ ಬಳಸಿದ ಪಾನೀಯದ ಲೋಟಗಳನ್ನು ಒಂದರ ಮೇಲೊಂದರಂತೆ ಜೋಡಿಸಿಟ್ಟಿರುವುದು ಕಂಡುಬಂದಿತ್ತು.

ಸಿಬ್ಬಂದಿ ಬಳಸಿ ಬಿಸಾಡಬೇಕಾದ ಲೋಟಗಳನ್ನೇ ಮತ್ತೆ ಗ್ರಾಹಕರಿಗೆ ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಮಲ್ಟಿಪ್ಲೆಕ್ಸ್ ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಗ್ರಾಹಕರ ಆರೋಗ್ಯವೇ ಮುಖ್ಯ: ಸಚಿವರ ಎಚ್ಚರಿಕೆ

ದೊಡ್ಡ ಬ್ರ್ಯಾಂಡ್ಗಳಾಗಿರಲಿ ಅಥವಾ ಸಣ್ಣ ವ್ಯಾಪಾರಿಗಳಾಗಿರಲಿ, ಆಹಾರ ಸುರಕ್ಷತಾ ನಿಯಮಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯಿಸುತ್ತವೆ.

ಪ್ರತಿಯೊಂದು ಆಹಾರ ವ್ಯಾಪಾರ ಸಂಸ್ಥೆಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವ್ಯವಹಾರ ನಡೆಸಬೇಕು.

ವ್ಯಾಪಾರ ಎಷ್ಟು ಮುಖ್ಯವೋ ಸಾರ್ವಜನಿಕರ ಆರೋಗ್ಯವೂ ಅಷ್ಟೇ ಮುಖ್ಯ ಎಂದು ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ಎಲ್ಲಿಯಾದರೂ ಅಶುಚಿಯಾದ ಆಹಾರ, ಪ್ಯಾಕೇಜಿಂಗ್ ಅಥವಾ ಆಹಾರ ವಿತರಣಾ ಪದ್ಧತಿ ಕಂಡುಬಂದಲ್ಲಿ ಆಹಾರ ಸುರಕ್ಷತಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ದೂರು ದಾಖಲಿಸಬಹುದು.

ಸಲ್ಲಿಕೆಯಾಗುವ ಪ್ರತಿಯೊಂದು ದೂರಿನ ಬಗ್ಗೆಯೂ ಇಲಾಖೆ ಪರಿಶೀಲನೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನೊಂದೆಡೆ, ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿರುವ ಫೋರಂ ಸೌತ್ ಬೆಂಗಳೂರು ಅಧಿಕೃತ ಖಾತೆಯು ಕ್ಷಮೆಯಾಚಿಸಿದ್ದು, PVR ತಂಡ ಘಟನೆಯ ಕುರಿತು ತನಿಖೆ ನಡೆಸುತ್ತಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande