
ಕೋಲಾರ, 06 ನವೆಂಬರ್ (ಹಿ.ಸ.)
ಕೋಲಾರ, ಸರ್ಕಾರವೇ ಮಂಜೂರು ಮಾಡಿರುವ ಹಾಗೂ ರೈತರು ೭೦ ವರ್ಷಗಳಿಂದ ಅನುಭವದಲ್ಲಿರುವ ಜಮೀನುಗಳಿಂದ ಬಡರೈತರು,ದಲಿತರನ್ನು ರಾತ್ರೋರಾತ್ರಿ ಒಕ್ಕೆಲೆಬ್ಬಿಸಿರುವ ಕುರಿತು ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರ ಆಕ್ರೋಷಕ್ಕೆ ಸ್ಪಂದಿಸಿದ ರಾಜ್ಯ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಕಂದಾಯ,ಅರಣ್ಯ ಇಲಾಖೆಗಳ ಜಂಟಿ ಸರ್ವೆಗೆ ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಗೆ ಸೂಚಿಸಿದರು.
ವಿಧಾನಸೌಧದ ೩ನೇ ಮಹಡಿಯ ೩೩೭ನೇ ಕೊಠಡಿಯಲ್ಲಿ ತಮ್ಮದೇ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಶಾಸಕರು, ಕಂದಾಯ,ಅರಣ್ಯ ಇಲಾಖೆ ಕಾರ್ಯದರ್ಶಿಗಳು, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಒಂದು ತಿಂಗಳ ಒಳಗಾಗಿ ಶ್ರೀನಿವಾಸಪುರ ಕೋಲಾರ ಜಿಲ್ಲೆಯ ರೈತರ ಜಮೀನುಗಳ ಬಗ್ಗೆ ರೈತರ ಹಕ್ಕುಗಳ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಅರಣ್ಯ ಇಲಾಖೆಯ ಹಕ್ಕುಗಳ ಬಗ್ಗೆ ದಾಖಲೆಗಳ ಬಗ್ಗೆ ಪರಿಶೀಲಿಸಿ ಜಂಟಿ ಸರ್ವೆ ಮಾಡಿ ಸಮಗ್ರ ವರದಿ ಕೊಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ರಮೇಶ್ ಕುಮರ್ ಮಾತನಾಡಿ, ರೈತರು ದಲಿತರು ಹಿಂದುಳಿದ ವರ್ಗದ ಜನಕ್ಕೆ ಸೇರಿದ ಈ ಜಮೀನುಗಳಲ್ಲಿ ಸುಮಾರು ೭೦ ವರ್ಷಗಳಿಂದ ಅನುಭವದಲ್ಲಿದ್ದು, ರೈತರು ತನ್ನ ಹೊಲಗದ್ದೆಗಳಲ್ಲಿ ಬೆಳೆಬಾಳುವ ಮರಗಳನ್ನು ಬೆಳೆಸಿ, ಮನೆಮಠ ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಇಂತಹ ಜಮೀನುಗಳ ಮೇಲೆ ರಾತ್ರೋರಾತ್ರಿ ಬಂದು ಅರಣ್ಯ ಇಲಾಖೆಯವರು ಜಮೀನುಗಳನ್ನು ನಾಶಪಡಿಸಿದ್ದಾರೆ. ರೈತರಿಗೆ ಸರ್ಕಾರವೇ ಮಂಜೂರಾತಿ ನೀಡಿದ ಶಾಸನಬದ್ಧವಾಗಿ ಕಾನೂನು ಬದ್ಧವಾಗಿ ಕೊಟ್ಟ ಸಾಗುವಳಿ ಚೀಟಿ, ದಾಖಲೆಗಳನ್ನು ಪರಿಶೀಲಿಸದೆ, ಅರಣ್ಯ ಇಲಾಖೆಯವರು ಏಕಾಏಕಿ ದೌರ್ಜನ್ಯ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಬಂದೂಕುಗಳನ್ನಿಡಿದು ಬೆದರಿಕೆ ಹಾಕಿ. ರಾತ್ರಿ ಸುಮಾರು ೩:೦೦ ಸಮಯದಲ್ಲಿ ರೈತರನ್ನು ಒಕ್ಕಲಬ್ಬೆಸಿರುತ್ತಾರೆ.. ಅರಣ್ಯ ಇಲಾಖೆಗೆ ಯಾವುದೇ ಮರಗಳನ್ನು ಕಡಿಯಲು `ಟ್ರೀ ಕಟಿಂಗ್ ಕಾಯ್ದೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದರು. ರೈತರು ಮತ್ತು ಬಡ ದಲಿತರೇನು ದೇಶದ್ರೋಹಿಗಳೇ ಎಂದು ಕಿಡಿಕಾರಿದ ರಮೇಶ್ ಕುಮಾರ್, ಜಮೀನುಗಳ ಮೇಲೆ ಏಕಾಏಕಿ ಬಂದು ಇವರು ಒತ್ತುವರಿ ತೆರವು ಮಾಡಿಸಿದ್ದಾರೆ ಇದು ಸರಿಯಾದ ಕ್ರಮವಲ್ಲ ಇಂತಹ ಕೆಲಸಗಳಿಂದ ಸರ್ಕಾರಕ್ಕೂ ಗೌರವ ಬರುವುದಿಲ್ಲ ಎಂದು ಗಮನ ಸೆಳೆದರು.
ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಇತ್ತೀಚೆಗೆ ಶ್ರೀನಿವಾಪುರ ತಾಲ್ಲೂಕಿನ ಮಲ್ಲಂಪಲ್ಲಿ ಮತ್ತು ಉಪ್ಪರಪಲ್ಲಿ ಗ್ರಾಮದಲ್ಲಿ ಮೊನ್ನೆ ನಡೆದ ಘಟನೆಯ ವಿಚಾರವಾಗಿಯೂ ಪ್ರಸ್ತಾಪಿಸಿ, ಅರಣ್ಯ ಇಲಾಖೆಯವರು- ರೈತರ ಸಂಘರ್ಷ , ಒತ್ತುವರಿ ತೆರವು ಘಟನೆ, ಜಿಲ್ಲೆಯ ರೈತರ ಮತ್ತು ದಲಿತರ ಹಿಂದುಳಿದ ವರ್ಗಗಳ ಜನಾಂಗದ ಜಮೀನುಗಳ ಬಗ್ಗೆ ಪ್ರಸ್ತಾಪಿಸಿದರು.ರೈತರು ಸುಮಾರು ೭೦ ವರ್ಷಗಳಿಂದ ಅನುಭವದಲ್ಲಿದ್ದು ಸರ್ಕಾರ ಕೊಟ್ಟಿರುವಂತಹ.. ಭೂ ಮಂಜೂರಾತಿ ಕಡತಗಳನ್ನು ಪರಿಶೀಲನೆ ಮಾಡಿ ಸರ್ಕಾರ ಮತ್ತು ಶಾಸಕರು ಶಾಸನಬದ್ಧವಾಗಿ, ಕಾನೂನು ಬದ್ಧವಾಗಿ ಕೊಟ್ಟಿರುವ ಸಾಗುವಳಿ ಚೀಟಿ ಇತರೆ ಕಂದಾಯ ದಾಖಲೆಗಳನ್ನು ಪರಿಶೀಲಿಸಲಾಗುವುದು, ಕಂದಾಯ ಇಲಾಖೆಗೆ ಸಂಬAಧಪಟ್ಟ ಸರ್ಕಾರಿ ಆದೇಶಗಳನ್ನು ಮತ್ತು ಅರಣ್ಯ ಇಲಾಖೆಯ ನೋಟಿಫಿಕೇಶನ್ ಪರಿಶೀಲಿಸಿಕೊಂಡು ರೈತರ ಮತ್ತು ಅರಣ್ಯ ಇಲಾಖೆಯ ಹಕ್ಕುಗಳನ್ನು, ರಕ್ಷಿಸಲು ಅರಣ್ಯ ಮತ್ತು ಕಂದಾಯ ಇಲಾಖೆ ಜೆಂಟಿಯಾಗಿ ಸಮಗ್ರ ಸರ್ವೇ ಮಾಡಿ.. ದಾಖಲೆಗಳನ್ನು ಪರಿಶೀಲಿಸಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆಎಂದು ತಿಳಿಸಿದರು.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಅರಣ್ಯ ಇಲಾಖೆಯವರು, ಡಿಎಫ್ಒ, ಎಸಿಎಫ್ ಹಾಗೂ ಸಿಬ್ಬಂದಿ ಸೇರಿಕೊಂಡು.. ಬಡ ರೈತರ ದಲಿತರ ಮೇಲೆ ಇವರು ದೌರ್ಜನ್ಯ ಮಾಡಿದ್ದಾರೆ ಇವರ ಮೇಲೆ ಅಟ್ರಾಸಿಟಿ ಕಾಯ್ದೆ ಅಡಿ ದೂರನ್ನು ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಈ ಕುರಿತು ಪ್ರಸ್ತಾಪಿಸಿ, ಶಾಸನ ಬದ್ಧವಾಗಿ ಕೊಟ್ಟಿರುವ ದಾಖಲೆಗಳನ್ನು ಪರಿಶೀಲಿಸದೆ ರೈತರ ಜಮೀನುಗಳ ಮೇಲೆ ಅರಣ್ಯ ಇಲಾಖೆಯವರು ಉದ್ದೇಶಪೂರ್ವಕವಾಗಿ ದೌರ್ಜನ್ಯ ವಸಿಗಿದ್ದಾರೆ. ಮತ್ತು ಸರ್ಕಾರದ ಆಶಯಗಳ ವಿರುದ್ಧ ಅರಣ್ಯ ಇಲಾಖೆಯವರು ಕೆಲಸ ಮಾಡುತ್ತಿದ್ದಾರೆ. ಎಂದು ಆರೋಪಿಸಿದರು.
ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಮಾತನಾಡಿ, ಕಂದಾಯ ದಾಖಲೆಗಳನ್ನು ಮತ್ತು ಅರಣ್ಯ ಇಲಾಖೆಯ ನೋಟಿಫಿಕೇಶನ್ಗಳನ್ನು ಪರಿಶೀಲಿಸದೆ ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯವೆಸಗಿದ್ದಾರೆ.... ರೈತರ ಜಮೀನುಗಳನ್ನು .. ಒತ್ತುವರಿ ತೆರವು ಗೊಳಿಸಿದ್ದಾರೆ, ಜಿಲ್ಲಾ ಪಂಚಾಯತಿ ಕೆಡಿಪಿ ಸಭೆಯಲ್ಲಿ ಸಚಿವರು ಹಾಗೂ ನಾವು ನಾವು ಕೊಟ್ಟ ಸಲಹೆ ಸೂಚನೆಗಳನ್ನು ಡಿಎಫ್ಓ ಪಾಲನೆ ಮಾಡಲಿಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಕನ್ನಿಕಾ ಸಿಕ್ರಿವಾಲ, ಡಿಎಫ್ಒ ಸರೀನಾ ಸಿಕ್ಕಲಿಗರ್, ಎಸಿಎಫ್, ಆರ್ಎಫ್ಒ ಸೇರಿದಂತೆ ಅರಣ್ಯ ಇಲಾಖೆ, ಕಂದಾಯ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಸಂತ್ರಸ್ಥ ರೈತರ ಪರವಾಗಿ ರೈತ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್