ಸಬರಮತಿ ಪ್ರೌಢಶಾಲೆಯಲ್ಲಿ ಟ್ಯೂಷನ್ ಕ್ಲಾಸ್ ಉದ್ಘಾಟನೆ
ಸಬರಮತಿ ಪ್ರೌಢಶಾಲೆಯಲ್ಲಿ ಟ್ಯೂಷನ್ ಕ್ಲಾಸ್ ಉದ್ಘಾಟನೆ
ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಸಬರಮತಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಯೋಜನೆ ವತಿಯಿಂದ ಟ್ಯೂಷನ್ ಕ್ಲಾಸ್ ಅನ್ನು ಧರ್ಮಸ್ಥಳ ಯೋಜನಾಧಿಕಾರಿ ರಘು ಉದ್ಘಾಟಿಸಿದರು.


ಕೋಲಾರ, 06 ನವೆಂಬರ್ (ಹಿ.ಸ.)

ಕೋಲಾರ, ತಾಲೂಕಿನ ವೇಮಗಲ್ ಯೋಜನೆ ಕಚೇರಿ ವ್ಯಾಪ್ತಿಯ ಸುಗಟೂರು ಗ್ರಾಮದ ಸಬರಮತಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಯೋಜನೆ ವತಿಯಿಂದ ಟ್ಯೂಷನ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ತರಗತಿ ಉದ್ಘಾಟಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಘು ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಇದು ಒಳ್ಳೆಯ ಸಮಯ ಇಂತಹ ಸಮಯವನ್ನು ಉಪಯೋಗಿಸಿಕೊಳ್ಳಿ. ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಈಗಾಗಲೇ ಶಾಲೆಗಳಿಗೆ ಜ್ಞಾನದೀಪ ಯೋಜನೆಯಡಿ ಶಿಕ್ಷಕರನ್ನು ನೀಡಿದೆ, ಇದೀಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶಿಕ್ಷಕರು ವಿಶೇಷ ತರಗತಿ ನಡೆಸುವುದರ ಜತೆಗೆ ಟ್ಯೂಷನ್ ಕ್ಲಾಸ್ಗೂ ಅವಕಾಶ ಕಲ್ಪಿಸಿರುವ ಮಾತೃಶ್ರೀ ಹೇಮಾವತಿ ಹೆಗಡೆ ಹಾಗೂ ವೀರೇಂದ್ರ ಹೆಗಡೆಯವರು ಹಾಗೂ ಮಂಜುನಾಥಸ್ವಾಮಿಯ ಆಶೀರ್ವಾದ ಈ ಮಕ್ಕಳಿಗೆ ಸಿಕ್ಕಂತಾಗಿದ್ದು, ಇದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಅಂಕಗಳಿಸಿ. ಧರ್ಮಸ್ಥಳ ಧರ್ಮಾಧಿಕಾರಿಗಳು ಹಾಗೂ ಮಾತೃಶ್ರೀ ಹೇಮಾವತಿ ಹೆಗಡೆಯವರ ಆಶಯದಂತೆ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಶಾಲೆಯ ಆಡಳಿತಾಧಿಕಾರಿ ಬಿ.ವೆಂಕಟೇಶ್ ಮಾತನಾಡಿ, ಧರ್ಮಸ್ಥಳ ಯೋಜನೆಯಿಂದ ದೇವಾಲಯಗಳ ಅಭಿವೃದ್ದಿಗೆ ನೆರವು, ಸಂಕಷ್ಟದಲ್ಲಿರುವ ಅನಾಥರಿಗೆ, ವಿಕಲಚೇತನರಿಗೆ ಮಾಸಿಕ ವೇತನ ನೀಡಿಕೆ, ಶಾಲೆಗಳಿಗೆ ಶಿಕ್ಷಕರ ನೇಮಕಕ್ಕೆ ಗೌರವಧನ ನೀಡಿಕೆ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೆರವು, ಶಾಲೆಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ನೆರವು, ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಹೀಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಮೆಚ್ಚುವಂತದ್ದು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿ, ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರ,ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದ ಅವರು, ಧರ್ಮಸ್ಥಳ ಯೋಜನೆಯಿಂದ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ ಎಂದರು.

ಶಾಲೆಯ ಮುಖ್ಯ ಶಿಕ್ಷಕ ರೆಡ್ಡಪ್ಪ ಚಿಟ್ನಹಳ್ಳಿ ಒಕ್ಕೂಟದ ಅಧ್ಯಕ್ಷ ಸಿ.ಬಿ.ಆನಂದ್ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸೌಮ್ಯ ಹಾಗೂ ಸ್ಥಳೀಯ ಸೇವಾ ಪ್ರತಿನಿಧಿ ವೆಂಕಟರತ್ನ ಹಾಗೂ ಶಿಕ್ಷಕ ವೃಂದ ಹಾಗೂ ೧೦ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande