
ಕೋಲಾರ, 06 ನವೆಂಬರ್ (ಹಿ.ಸ.)
ಕೋಲಾರ, ಯುವ ಜನರಿಗೆ ಈ ಯುವಜನೋತ್ಸವ ಪಾಲ್ಗೊಳ್ಳುವುದು ಒಂದು ಸುವರ್ಣ ಅವಕಾಶವಾಗಿದೆ. ಜನಪದರು ಕೃಷಿಯಲ್ಲಿ ತೊಡಗಿಸಿಕೊಂಡಾಗ ಹಾಡುತ್ತಿದ್ದರು. ಜನಪದ ಕಲೆಗಳು ಶ್ರಮಿಕರ ಸಂಕೇತವಾಗಿದೆ. ಒಬ್ಬರು ಹಾಡುತ್ತಿದ್ದ ಜನಪದ ಗೀತೆಗಳು ಮತ್ತೊಬ್ಬರು ಹಾಡುತ್ತಿದ್ದರು. ಇದರಿಂದಾಗಿ ಜನಪದ ಕಲೆಗಳು ಮೌಖಿಕ ಪರಂಪರೆಯವಾಗಿ ಬೆಳೆದವು. ಕೆಲಸಗಳಲ್ಲಿ ಜನರು ತಮನ್ನು ತೊಡಗಿಸಿಕೊಂಡಾದ ಅವರ ಬಾಯಿಯಿಂದ ಬಂದ ಹಾಡುಗಳು ಇಂದು ಜನಪದ ರೂಪ ಪಡೆದುಕೊಂಡಿದೆ. ಪಠ್ಯದ ಹೊರತಾಗಿ ಸಹ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ಜನರು ಪ್ರದರ್ಶನ ಕಲೆಗಳಿಗೆ ಹೆಚ್ಚು ಪ್ರಾಶಸ್ತö್ಯ ನೀಡಬೇಕೆಂದು ಎಂದು ಸರ್ಕಾರ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮುನಿಸ್ವಾಮಿ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮ0ದಿರದಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಅಪರ ಜಿಲ್ಲಾಧಿಕಾರಿಗಳಾದ ಎಸ್.ಎಂ. ಮಂಗಳ ಮಾತನಾಡಿ ಯುವ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸಲು ‘ಜಿಲ್ಲಾ ಮಟ್ಟದ ಯುವಜನೋತ್ಸವ’ ಒಂದು ವೇದಿಕೆಯಾಗಿದೆ. ಎಲ್ಲರೂ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್ ಅವರು ಮಾತನಾಡಿ ಈ ಯುವಜನೋತ್ಸವದಲ್ಲಿ ೧೯ ರಿಂದ ೨೯ರ ವಯೋಮಾನದ ಯುವ ಪ್ರತಿಭೆಗಳು ಭಾಗವಹಿಸಲು ಅವಕಾಶವಿದ್ದು, ಇವರಿಗೆ ಇಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡು ಕಲಾಸಕ್ತರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದೆ. ಇಲ್ಲಿ ಬಹುಮಾನ ಪಡೆದ ಯುವಜನರಿಗೆ ಮುಂದೆ ಇನ್ನೂ ಹೆಚ್ಚಿನ ಅವಕಾಶಗಳು ಬರಲಿದೆ ಎಂದು ಪ್ರೋತ್ಸಾಹದ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀನಿವಾಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷಿö್ಮ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಡಾ. ಕೆ.ಎನ್ ಕವನ, ತಹಶೀಲ್ದಾರ್ ನಾಗವೇಣಿ, ಕೈಗಾರಿಕೆ ಸಂಸ್ಥೆಯ ಗೋಪಾಲ್,
ಯುವಜನೋತ್ಸವದಲ್ಲಿ ನೃತ್ಯ, ಜನಪದ ಗೀತೆ, ಚಿತ್ರಕಲೆ, ಕವಿತೆ ಬರೆಯುವರು ವಿಜ್ಞಾನ ಮೇಳ, ಬೀದಿ ನಾಟಕ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಚಿತ್ರ : ಕೋಲಾರದಲ್ಲಿ ನಡೆದ ಯುವಜನೋತ್ಸವವನ್ನು ಅಪರ ಜಿಲ್ಲಾಧಿಕಾರಿ ಮಂಗಳ ಉದ್ಘಾಟಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್