
ಬೆಂಗಳೂರು, 06 ನವೆಂಬರ್ (ಹಿ.ಸ.):
ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುವುದನ್ನು ಬಿಟ್ಟು, ಅವರಿಗೆ ಶಿಕ್ಷಣ ಹಾಗೂ ಉದ್ಯೋಗದ ಮೂಲಕ ಸ್ವಾಭಿಮಾನದ ಬದುಕು ಕಲ್ಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಏರ್ಪಸಿಡಿದ ದಲಿತ ಮುಖಂಡ ಚಿ.ನಾ. ರಾಮು ಅವರ 'ನನ್ನ ಜನ ಅನಾಥ' ಪುಸ್ತಕದ ಕನ್ನಡ, ಹಿಂದಿ, ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳ ಎರಡನೇ ಆವೃತ್ತಿಯ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ದಲಿತ ಜಾಗೃತಿಗೆ ಮೂಲ ಕಾರಣಕರ್ತರಾದ ಬಾಬಾಸಹೇಬ್ ಅಂಬೇಡ್ಕರ್ ಅವರಿಗೆ ಬುದ್ಧನೇ ಪ್ರೇರಣೆಯಾಗಿದ್ದನು.
ರಾಜ್ಯಭಾರವನ್ನು ತೊರೆದು ಜ್ಞಾನದ ಬೆಳಕನ್ನು ಜಗತ್ತಿಗೆ ನೀಡಿದ ಬುದ್ಧ, ಕನ್ನಡ ನಾಡಿಗೆ ಬಸವಣ್ಣ ಹಾಗೂ ಇಡೀ ವಿಶ್ವಕ್ಕೆ ಜೀಸಸ್ ಕ್ರೈಸ್ಟ್ ಹೇಗೆ ಪ್ರೇರಣೆಯಾಗಿದ್ದಾರೋ, ಅದೇ ರೀತಿ ಮಹಾನ್ ಸಾಧಕರು ಕಾಲಾತೀತವಾಗಿ ಸಮಾಜದಲ್ಲಿ ತಮ್ಮ ವಿಚಾರಧಾರೆಗಳ ಮೂಲಕ ಎಂದೆಂದಿಗೂ ಜೀವಂತವಾಗಿರುತ್ತಾರೆ ಎಂದು ತಿಳಿಸಿದರು.
*ಸಾಧಕರಿಗೆ ಸಾವಿಲ್ಲ*ಸ್ವಾಮಿ ವಿವೇಕಾನಂದರು ಒಂದು ಮಾತನ್ನು ಹೇಳಿದ್ದಾರೆ. ಇಂತಹ ದೊಡ್ಡ ದೊಡ್ಡ ಸಾಧಕರ ಬಗ್ಗೆ ಅವರು ಹೇಳಿರುವಂತದ್ದು ಸಾಧಕರಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದು ಸಾಧಕ.
ನಮಗೆಲ್ಲ ಸಾವು ಅಂತ್ಯ ಇದೆ. ಬಾಬಾಸಹೇಬ್ ಅಂಬೇಡ್ಕರ್ ಅವರು ಜೀವಂತವಾಗಿ ಇರುವುದಕ್ಕಿಂತ ಇವತ್ತು ಬಹಳ ಪ್ರಸ್ತುತವಾಗಿದ್ದಾರೆ.
ಬಸವಣ್ಣ, ಬುದ್ಧ ಈಗಲೂ ಪ್ರಸ್ತುತರಾಗಿದ್ದಾರೆ.. ಯಾಕಂದ್ರೆ ಅವರದ್ದು ಏಕಾಕೃತವಾಗಿ ತಮ್ಮ ದೇಯನ, ತಮ್ಮ ಪದ್ಧತಿಯನ್ನ, ತಮ್ಮ ವಿಚಾರಧಾರೆಯನ್ನ ಅವರು ಗಟ್ಟಿಯಾಗಿ ಕಟ್ಟಿಕೊಂಡಿರುವುದು.
ಪಾಶ್ಚಾತ್ಯ ದೇಶದಲ್ಲಿ ಒಬ್ಬ ಬಹಳ ದೊಡ್ಡ ಪ್ರಸಿದ್ಧ ಫಿಲಾಸಫರ್ ಸಾಕ್ರಟೀಸ್. ಆತ ಯಾವಾಗ್ಲೂ ಕೂಡ ಪ್ರಶ್ನೆಗಳನ್ನು ಕೇಳುವಂತ ಒಂದು ರೂಢಿಯಿತ್ತು. ಅವಾಗ ಚರ್ಚ್ ಗಳು ಆಳುತ್ತಿತ್ತು. ಅವಾಗ ಮರಣದಂಡನೆ ಕೊಡ್ತಾ ಇದ್ದವು. ಇವನು ಚರ್ಚ್ ಗಳು ಪ್ರಶ್ನೆ ಮಾಡಿದ.
ನಿಮಗೆ ಜನ್ಮ ಕೊಡುವ ಅಧಿಕಾರ ಇಲ್ಲ, ನಿಮಗೆ ಜನ್ಮ ಕೊಡುವಂತಹ ಶಕ್ತಿ ಇಲ್ಲ, ಮರಣದಂಡನೆ ಕೊಡುವಂತಹ ಅಧಿಕಾರ ಯಾಕೆ ಬೇಕು ಎಂದು ಪ್ರಶ್ನಿಸಿದ, ಅದು ದೊಡ್ಡ ಚರ್ಚೆ ಆಯ್ತು.
ಕೊನೆಗೆ ಐದು ವೋಟ್ ಇಂದ ಸಾಕ್ರಟೀಸ್ ವಾದ ಸೋತರು. ಅದಕ್ಕೆ ಅವನಿಗೆ ಮರಣದಂಡನೆ ಇಲ್ಲವೇ ವಿಷ ಕುಡಿಬೇಕು ಎಂದು ಆದೇಶ ಆಯಿತು.
ಆದರೆ ಅವನು ಇಷ್ಟು ಪ್ರಸಿದ್ಧನಾಗಿದ್ದಾಗ ಎಲ್ಲಾ ಎಂಪೈರ್ ಗ್ರೀಸ್ ಏಡನ್ ನಗರ ಅವನ ಪರವಾಗಿ ನಡ್ಕೊಂಡು ಹೋದರು.
ಅವಾಗ ಚರ್ಚ್ ನವರು ಅವರ ಗೆಳೆಯರನ್ನು ಕರಿಸಿ ಸುಮ್ನೆ ಯಾಕೆ ಅವನು ಜೀವನ ಹಾಳು ಮಾಡ್ಕೊತಾನೆ? ನಮ್ಮ ಚರ್ಚ್ ನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಿ. ಏಥೆನ್ಸ್ ನಗರ ಸ್ಥಳವನ್ನು ಬಿಟ್ಟು ಹೋಗಲಿ. ಅವನಿಗೆ ಮರಣದಂಡನೆ ಕ್ಯಾನ್ಸಲ್ ಮಾಡ್ತೀವಿ ಅಂದರು. ಆತನ ಗೆಳೆಯರು ಬಂದು ಅವನಿಗೆ ಹೇಳಿದ್ರು, ಅವಾಗ ಅವನು ನಾನು ನಿಮ್ಮ ಮಾತು ಕೇಳಿದರೆ, ನಾನು ನನ್ನ ಸಾವಿಗೆ ಹೆದರಿ ನಾನು ಬದುಕಿದರೆ ನನ್ನ ವಿಚಾರಧಾರಿಗಳು ಸಾಯುತ್ತವೆ.
ನಾನು ಸಾವಿಗೆ ಹೆದರದೆ ನಾನು ನನ್ನ ವಿಚಾರಧಾರಿಗೆ ಅಂಟಿಕೊಂಡರೆ ನಾನು ಸಾಯ್ತೀನಿ ಆದರೆ ವಿಚಾರಧಾರಿಗಳು ಮುಂದೆ ಉಳಿಯುತ್ತವೆ. ನನಗೆ ಎರಡನೇದು ನನ್ನ ಒಪ್ಪಿಗೆ ಮೊದಲನೆಯದಲ್ಲ. ಅಂತ ಕ್ರಾಂತಿಕಾರಿ ವಿಚಾರಗಳು ನಮ್ಮ ಭಾರತದಲ್ಲಿ ಈ ದಲಿತ ಮೂಮೆಂಟ್ ಅಲ್ಲಿ ಆಗಿದೆ ಎಂದು ಹೇಳಿದರು.
ದಲಿತ ಚಳವಳಿಯ ಮಹತ್ವ:ದಲಿತ ಮೂಮೆಂಟ್ ಎನ್ನುವುದು ಕೇವಲ ಸರ್ಕಾರಗಳಿಗೆ ಅನುಗುಣವಾಗಿರುವುದಕ್ಕಲ್ಲ, ಬದಲಾಗಿ ಭಾರತೀಯ ಸಂಸ್ಕೃತಿಯಲ್ಲಿ ಅಡಗಿರುವ ಮಾನವೀಯತೆಯನ್ನು ಜೀವಂತವಾಗಿರಿಸಿ, ತಳಮಟ್ಟದ ಜನರಿಗೆ ನ್ಯಾಯ ಒದಗಿಸುವ ಸುದೀರ್ಘ ಹೋರಾಟವಾಗಿದೆ.
ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುವುದನ್ನು ಬಿಟ್ಟು, ಅವರಿಗೆ ಶಿಕ್ಷಣ ಹಾಗೂ ಉದ್ಯೋಗದ ಮೂಲಕ ಸ್ವಾಭಿಮಾನದ ಬದುಕು ಕಲ್ಪಿಸಬೇಕು ಎಂದರು.
ಉದ್ಯೋಗ ಕೇವಲ ಆದಾಯವಲ್ಲ, ಉದ್ಯೋಗ ಒಂದು ಸ್ವಾಭಿಮಾನದ ಸಂಕೇತ, ಗೌರವದ ಸಂಕೇತ, ಸಾಮಾಜಿಕವಾಗಿ ಸ್ವಾಭಿಮಾನದ ಸಂಕೇತ.
ಅದಕ್ಕಾಗಿನೇ ನಾನು ಎಸ್ಸಿ-ಎಸ್ಟಿ ರಿಸರ್ವೇಷನ್ ಅನ್ನ ಹೆಚ್ಚು ಮಾಡಿದೆ. ಎಸ್ಸಿ ಮೀಸಲಾತಿ ಶೇ 15 ರಿಂದ ಶೇ17 ಮಾಡಿದ್ದೀನಿ, ಎಸ್ಟಿ ಮೀಸಲಾತಿ ಶೇ 3 ಶೇ 7% ಮಾಡಿದ್ದೀನಿ.
ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಕೊಡಬೇಕು ಅಂತ ಇದೆ. ಅದಕ್ಕೆ ತಕ್ಕಾಗಿ ಕೊಡಬೇಕು ಸಂವಿಧಾನದಲ್ಲೂ ಇದೆ, ಅದನ್ನು ಯಾರೂ ಮಾಡ್ತಾ ಇಲ್ಲ.
ಒಂದು ಸುಪ್ರೀಂ ಕೋರ್ಟ್ ಜಡ್ಜ್ಮೆಂಟ್ ಅನ್ನೇ ಆಧಾರ ಇಟ್ಟುಕೊಂಡಿದ್ದಾರೆ. ಅದನ್ನು ಮೀರಿ ವಿಚಾರ ಮಾಡುವಂತ ಕಾಲ ಬಂದಿದೆ. ಯಾಕಂದ್ರೆ, ಕರ್ನಾಟಕದಲ್ಲಿ ಉದಾಹರಣೆ ತಗೊಳ್ಳಿ ಮೂಲ ದಲಿತರ ಮೀಸಲಾತಿ ಆದಾಗ ಬರೀ ಆರು ಸಮುದಾಯಗಳಿತ್ತು.
ಈಗ 106 ಆಗಿದೆ. ಸಮುದಾಯಗಳನ್ನು ಸೇರ್ಪಡೆ ಮಾಡಿದ್ದೀರಾ, ಜನಸಂಖ್ಯೆ ಹೆಚ್ಚಾಗಿದೆ. ಸಮುದಾಯಗಳನ್ನು ಯಾರು ಸೇರ್ಪಡೆ ಮಾಡಿದ್ದಾರೆ ಅವರು ದೊಡ್ಡ ನಾಯಕರು. ಆರು ಜನ ಊಟ ಮಾಡುವಲ್ಲಿ 106 ಜನ ಊಟ ಮಾಡು ಅಂದ್ರೆ ಯಾವ ಪಾಲು ಎಷ್ಟಕ್ಕೆ ಸಿಗುತ್ತದೆ.
ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ನನಗೆ ಸಾಕಷ್ಟು ವಿರೋಧ ಮಾಡಿದರೂ ಜೇನು ಗೂಡಿಗೆ ಕೈ ಹಾಕಬೇಡಿ ಅಂದರು. ನನಗೆ ಜೇನು ಕಡಿದರೂ ಚಿಂತೆಯಿಲ್ಲ ಅವರಿಗೆ ಜೇನು ಸಿಹಿ ಕೊಡುತ್ತೇನೆ ಎಂದು ಮಾಡಿದೆ.
ಇದರಿಂದ ಸುಮಾರು ನಾಲ್ಕು ನೂರಕ್ಕು ಹೆಚ್ಚು ಮೆಡಿಕಲ್ ಸೀಟು, ಮೂರು ಸಾವಿರಕ್ಕು ಹೆಚ್ಚು ಇಂಜಿನಿಯರಿಂಗ್ ಸೀಟುಗಳು ದೊರೆತಿವೆ ಎಂದರು.
ಚಿ. ನಾ. ರಾಮು ಅವರ ಸಾಹಿತ್ಯಿಕ ಕೃಷಿಯ ಮೆಚ್ಚುಗೆ:ಲೇಖಕ ಚಿ. ನಾ. ರಾಮು ಅವರ 'ನನ್ನ ಜನ ಅನಾಥ' ಪುಸ್ತಕವು ಕೇವಲ ನೋವನ್ನು ಮಾತ್ರವಲ್ಲದೆ, ದೇಶದ ವಿವಿಧ ರಾಜ್ಯಗಳ ವಾಸ್ತವಿಕ ಚಿತ್ರಣವನ್ನು ಹಾಗೂ ಸತ್ಯವನ್ನು ಧೈರ್ಯವಾಗಿ ಕಟ್ಟಿಕೊಟ್ಟಿದೆ.
ಇಂತಹ ಶ್ರೇಷ್ಠ ಕೃತಿಗಳನ್ನು ಹೋರಾಟಗಾರರು ಗಂಭೀರವಾಗಿ ಓದಬೇಕು. ಸಮುದಾಯದ ಅಭಿವೃದ್ಧಿಗಾಗಿ ಮತ್ತು ಸ್ವಾಭಿಮಾನಿ ಸಮಾಜವನ್ನು ನಿರ್ಮಿಸಲು ಎಲ್ಲರೂ ಇವರ ಚಿಂತನೆ ಮತ್ತು ಸಂಘಟನೆಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R