ಸಹಕಾರ ಸಂಘದ ಹಣ ದುರುಪಯೋಗ ಆರೋಪ: ಕೇರಳ, ಚೆನ್ನೈ ಸೇರಿ 11 ಕಡೆ ಜಾರಿ ನಿರ್ದೇಶನಾಲಯದ ಶೋಧ
ನವದೆಹಲಿ, 04 ನವೆಂಬರ್ (ಹಿ.ಸ.): ಸಹಕಾರ ಸಂಘದಲ್ಲಿ ಸಾರ್ವಜನಿಕರು ಠೇವಣಿ ಇಟ್ಟಿದ್ದ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೇರಳ ಮತ್ತು ಚೆನ್ನೈ ಸೇರಿದಂತೆ 11 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯದ ಪ್ರಕಾರ, ಪ
प्रवर्तन निदेशालय (ईडी)


ನವದೆಹಲಿ, 04 ನವೆಂಬರ್ (ಹಿ.ಸ.):

ಸಹಕಾರ ಸಂಘದಲ್ಲಿ ಸಾರ್ವಜನಿಕರು ಠೇವಣಿ ಇಟ್ಟಿದ್ದ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೇರಳ ಮತ್ತು ಚೆನ್ನೈ ಸೇರಿದಂತೆ 11 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಜಾರಿ ನಿರ್ದೇಶನಾಲಯದ ಪ್ರಕಾರ, ಪ್ರೇಮಕುಮಾರ ತಮ್ಮ ಪ್ರಭಾವವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕ ಠೇವಣಿದಾರರು ಸಂಘದಲ್ಲಿ ಇರಿಸಿದ್ದ ಕೋಟ್ಯಂತರ ರೂಪಾಯಿ ಹಣವನ್ನು ತಮ್ಮ ಪತ್ನಿ ಮತ್ತು ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಈ ಹಣವನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ.

ಇದಲ್ಲದೆ, ಪ್ರೇಮಕುಮಾರ ಅವರು ಸಂಘಕ್ಕೆ ಸೇರಿದ ರಾಗಂ ಚಿತ್ರಮಂದಿರವನ್ನು ಬ್ರಿಯೋಸ್ ಫಿನ್‌ವೆಸ್ಟ್ ಸಂಸ್ಥೆಯ ಬಳಿ ಅಡಮಾನ ಇಟ್ಟಿದ್ದರು. ಆದರೆ, ಇದಕ್ಕೆ ಪ್ರತಿಯಾಗಿ ಪಡೆದ ಹಣ ಸಹಕಾರ ಸಂಘಕ್ಕೆ ತಲುಪಿಲ್ಲ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಅಲ್ಲದೆ, ಕಾಂಚೀಪುರಂನಲ್ಲಿ ಸುಮಾರು 500 ಎಕರೆ ಭೂಮಿಯನ್ನು ತಮ್ಮ ಪತ್ನಿಯ ಹೆಸರಿನಲ್ಲಿ ಖರೀದಿಸಿರುವ ಆರೋಪವೂ ಅವರ ಮೇಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande