ವಕೀಲರ ಮೇಲಿನ ದೌರ್ಜನ್ಯ ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ರಾಜ್ಯದಲ್ಲಿ ವಕೀಲರ ಸರಣಿ ಕೊಲೆ ಹಾಗೂ ದೌರ್ಜನ್ಯ ಖಂಡಿಸಿ ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಹೈಕೋರ್ಟ್ ಎದುರು ಬೃಹತ್ ಪ್ರತಿಭಟನೆ ನಡೆಸಿ, ಭದ್ರತಾ ಕಾಯ್ದೆ ಜಾರಿಗೆ ಒತ್ತಾಯಿಸಿದರು.
lawyers-protest-bengaluru


ಬೆಂಗಳೂರು, 03 ನವೆಂಬರ್ (ಹಿ.ಸ.):

ರಾಜ್ಯದಲ್ಲಿ ವಕೀಲರ ಸರಣಿ ಕೊಲೆ ಹಾಗೂ ದೌರ್ಜನ್ಯ ಖಂಡಿಸಿ ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಹೈಕೋರ್ಟ್ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಕಲಾಪ ಬಹಿಷ್ಕರಿಸಿದ ವಕೀಲರು, ವೃತ್ತಿನಿರತರಿಗೆ ಸೂಕ್ತ ಭದ್ರತೆ ಒದಗಿಸಲು ಮತ್ತು ರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಆಗ್ರಹಿಸಿದರು.

ನ್ಯಾಯಾಲಯದ ಕಲಾಪಗಳು ಸ್ಥಗಿತಪ್ರತಿಭಟನೆಯ ಹಿನ್ನೆಲೆಯಲ್ಲಿ ವಕೀಲರು ಸಿಟಿ ಸಿವಿಲ್ ಕೋರ್ಟ್ ಹಾಗೂ ಹೈಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಯಗಳ ದಿನನಿತ್ಯದ ಕಲಾಪಗಳಿಂದ ದೂರ ಉಳಿದಿದ್ದರು.

ರಾಜ್ಯಾದ್ಯಂತ ಇರುವ ಎಲ್ಲಾ ವಕೀಲರ ಸಂಘಗಳು ಈ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿವೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ವಿ. ಪ್ರವೀಣ್ಗೌಡ ಹಾಗೂ ಉಪಾಧ್ಯಕ್ಷ ಗಿರೀಶ್ಕುಮಾರ್ ಮಾಹಿತಿ ನೀಡಿದ್ದಾರೆ.

ಸರಣಿ ಅಪರಾಧ ಘಟನೆಗಳಿಗೆ ಆತಂಕವೈಟ್ಫೀಲ್ಡ್ ವಕೀಲ ಮಂಜುನಾಥ್ ಹತ್ಯೆ, ಅನ್ನಪೂರ್ಣೇಶ್ವರಿನಗರದ ವಕೀಲ ಶ್ರೀರಾಮ್ ಕೊಲೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸಣ್ಣಕ್ಕಿ ಮೇಲಿನ ಕೊಲೆ ಯತ್ನ ಸೇರಿದಂತೆ ಹಲವು ಘಟನೆಗಳು ವಕೀಲರ ಭದ್ರತೆಯ ಕುರಿತು ತೀವ್ರ ಆತಂಕ ಸೃಷ್ಟಿಸಿವೆ.

ಈ ಕಾರಣಕ್ಕಾಗಿ ವಕೀಲರು ಬೆಳಿಗ್ಗೆ 11 ಗಂಟೆಯಿಂದಲೇ ಕಲಾಪ ಬಹಿಷ್ಕರಿಸಿ ಧರಣಿ ಆರಂಭಿಸಿದ್ದರಿಂದ ಹೈಕೋರ್ಟ್ ಆವರಣ ಹಾಗೂ ನ್ಯಾಯಪೀಠಗಳು ವಕೀಲರಿಲ್ಲದೆ ಖಾಲಿ ಖಾಲಿಯಾಗಿದ್ದವು.

ನ್ಯಾಯಾಧೀಶರಲ್ಲಿ ಮನವಿವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದರಿಂದ ಕಲಾಪಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ.

ಆದ್ದರಿಂದ ಕಕ್ಷಿದಾರರ ವಿರುದ್ಧ ಯಾವುದೇ ರೀತಿಯ ವ್ಯತಿರಿಕ್ತ ಆದೇಶಗಳನ್ನು ಹೊರಡಿಸಬಾರದು ಎಂದು ವಕೀಲರ ಸಂಘದ ಅಧ್ಯಕ್ಷರು ನ್ಯಾಯಾಧೀಶರಲ್ಲಿ ವಿನಂತಿಸಿಕೊಂಡರು. ಈ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ ನ್ಯಾಯಾಧೀಶರು, ಇಂದು ಯಾವುದೇ ವ್ಯತಿರಿಕ್ತ ಆದೇಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.

ವಕೀಲರು ಭಯಮುಕ್ತ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ತಕ್ಷಣವೇ ಭದ್ರತಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ವಿವೇಕ್ ಸುಬ್ಬಾರೆಡ್ಡಿ ಒತ್ತಾಯಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande