ಮಾಜಿ ಸಿಎಂ. ಸಿದ್ಧರಾಮಯ್ಯನವರ ವಿರುದ್ಧ ಕಾಂಗ್ರೆಸ್ನಿoದಲೇ ಷಡ್ಯಂತರ ; ಆರ್. ಅಶೋಕ್ ವಾಗ್ದಾಳಿ
ಮಾಜಿ ಸಿಎಂ. ಸಿದ್ಧರಾಮಯ್ಯನವರ ವಿರುದ್ಧ ಕಾಂಗ್ರೆಸ್ನಿoದಲೇ ಷಡ್ಯಂತರ ; ಆರ್. ಅಶೋಕ್ ವಾಗ್ದಾಳಿ
ಕಾಂಗ್ರೆಸ್ ಷಡ್ಯಂತರದ ವಿರುದ್ಧ ಕೋಲಾರದಲ್ಲಿ ಬಿಜೆಪಿಯಿಂದ ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಬೃಹತ್ ಜಾಥಾ ನಡೆಯಿತು.


ಕೋಲಾರ, 03 ನವೆಂಬರ್ (ಹಿ.ಸ.)

ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದವರಿಗೆ ಆಡಳಿತಕ್ಕೆ ಬರಲು ಸಿದ್ದರಾಮಯ್ಯನವರ ನಾಯಕತ್ವ ಬೇಕಾಗಿತ್ತು. ಬಂದ ಮೇಲೆ ಅವರನ್ನು ಸ್ಟಿಂಗ್ ಅಪರೇಷನ್ ಮೂಲಕ ಅವರನ್ನು ಮನೆಯಿಂದ ಹೊರಗೆ ಬಾರದಂತೆ ಐಸಿಯುನಲ್ಲಿ ಇಡಲಾಗಿದೆ. ಕನಿಷ್ಟ ಗೌರವವನ್ನು ನೀಡದಂತೆ ಹೀನಾಯ ಪರಿಸ್ಥಿಗೆ ದೂಡಲಾಗಿದೆ ಎಂದು ರಾಜ್ಯ ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೋಲಾರ ನಗರದಲ್ಲಿ ಬಿಜೆಪಿ ಪಕ್ಷದಿಂದ ಪ್ರಜಾಪ್ರಭುತ್ವ ಉಳಿಸಿ-ಅರಾಜಕತೆ ಅಳಿಸಿ ಎಂಬ ಘೋಷಣೆಗಳೊಂದಿಗೆ ಆಯೋಜಿಸಿದ್ದ ಜನ ಜಾಗೃತಿಯ ಪಾದಯಾತ್ರೆಯ ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯನವರ ವಿರುದ್ದು ಸಂಚು ರೂಪಿಸಿ ಅವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಇಳಿಸಲಾಗಿದೆ. ಅವರ ವಿರುದ್ದ ಹುನ್ನಾರ ಮಾಡುವ ಮೂಲಕ ಬಾಯಿ ಮುಚ್ಚಿಸಲಾಗಿದೆ ಇದನ್ನು ಕಾಂಗ್ರೇಸ್ ಪಕ್ಷದವರೇ ಮಾಡಿದ್ದಾರೆಂದು ಇದರ ವಿರುದ್ದ ತನಿಖೆ ಬೇಕೆಂದು ಸಿದ್ದರಾಮಯ್ಯನವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯನವರೇ ಆರೋಪಿಸಿದ್ದಾರೆ. ಈ ಸಂಬoಧವಾಗಿ ಮಾಜಿ ಸಹಕಾರ ಸಚಿವ ರಾಜಣ್ಣ ಸ್ಟಿಂಗ್ ಅಪರೇಷನ್ ಕಾಂಗ್ರೆಸ್ ಪಕ್ಷದವರಿಂದಲೇ ಆಗಿದೆ ಎಂದು ಹೇಳಿದ್ದಾರೆ. ಈಗ ಸಿದ್ದರಾಮಯ್ಯನವರ ಪರಿಸ್ಥಿತಿ ಕಾಲಕಸಕ್ಕಿಂತ ಕಡೆಯಾಗಿದೆ ಎಂದು ವಿಷಾಧಿಸಿದರು.

ಕಳೆದ ೧೯೭೫ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ವಿರೋಧ ಪಕ್ಷಗಳ ಮುಖಂಡರು, ನ್ಯಾಯಾಧೀಶರು ಹಾಗೂ ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಗಿತ್ತು. ಅಂತಹ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಇಂದು ಪ್ರಜಾಪ್ರಭುತ್ವದ ರಕ್ಷಣೆಯ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು.

ದೇಶದಲ್ಲಿ ಶ್ರೀಲಂಕಾ, ಬಾಂಗ್ಲಾ ,ನೇಪಾಳ ಮಾದರಿಯಲ್ಲಿ ದಂಗೆ ನಡೆಸಬೇಕು ಎಂಬ ರೀತಿಯ ಹೇಳಿಕೆಗಳು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಆರಾಜಕತೆಯನ್ನು ಸೃಷ್ಠಿಸುವಂತ ಮನೋಭಾವದ ವಿರುದ್ಧ ಜನರು ಜಾಗೃತರಾಗಬೇಕು.ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರುವರೆ ವರ್ಷಗಳಾದರೂ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ರಸ್ಥೆ ನಿರ್ಮಾಣ ಸೇರಿದಂತೆ ಯಾವೂದೇ ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರದಿಂದ ಆದ್ಯತೆ ದೊರೆತಿಲ್ಲ. ಇದುವರಿಗೆ ಬರ ಪರಿಹಾರವಾಗಿ ರೂ ೨,೫೦೦ ನೀಡುವುದಾಗಿ ಘೋಷಿಸಿ ಒಂದೂವರೆ ತಿಂಗಳು ಕಳೆದರು

ಅವರಿಗೆ ಒಂದು ನಯಾಪೈಸೆಯೂ ತಲುಪಿಲ್ಲ. ಮತ್ತೊಂದೆಡೆ ಅಗತ್ಯ ವಸ್ತುಗಳ ಬಲೆ ಹೆಚ್ಚಿಸುವ ಮೂಲಕ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಈಡುಮಾಡಿದೆ ಎಂದು ಆರೋಪಿಸಿದರು.

ಈಗ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ರಾಹುಲ್ ನಡೆಸುತ್ತಿರುವ ಎಸ್,ಐ.ಆರ್. ವಿರುದ್ದದ ಹಾಗೂ ಪ್ರಜಾ ಪ್ರಭುತ್ವ ರಕ್ಷಣೆಯ ಹೆಸರಿನ ಪ್ರತಿಭಟನೆಯಲ್ಲಿ ರಾಜ್ಯದ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹೋಗಿರುವುದು ನಾಚಿಕೆಗೇಡಾಗಿದೆ ಎಂದು ವ್ಯಂಗವಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿವೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ ಭಾರತದಲ್ಲಿ ಬಡತನದ ಪ್ರಮಾಣ ವೇಗವಾಗಿ ಕಡಿಮೆಯಾಗುತ್ತಿದೆ ಎಂಬುದನ್ನು ಗಮನಿಸಬೇಕು. ಇಂತಹ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವ ಬದಲು ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವತ್ತ ಕಾಂಗ್ರೆಸ್ ಗಮನಹರಿಸಬೇಕೆಂದು ಕಿವಿ ಮಾತು ತಿಳಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯಗಳನ್ನು ಹಾಗೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಅರಾಜಕತೆಯ ವಿರುದ್ದ ಜನಜಾಗೃತಿ ಮೂಡಿಸುವ ಹೋರಾಟವನ್ನು ಮುಂದುವರಿಸಲಾಗುವುದು.ದೇಶದ ಏಳು ಜಿಲ್ಲೆಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಯ ಸಂದೇಶವನ್ನು ಜನರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ದೇಶದಲ್ಲಿ ಅರಾಜಕತೆ ಸೃಷ್ಠಿಸುತ್ತಿರುವ ಕಾಂಗ್ರೇಸ್ ಪಕ್ಷದ ಷಡ್ಯಂತರವನ್ನು ವಿರೋಧಿಸ ಬೇಕು. ದೇಶದ ಆಡಳಿತವನ್ನು ಸರಿದೂಗಿಸಲು ಓರ್ವ ವಿರೋಧ ಪಕ್ಷದ ನಾಯಕನು ಇರಬೇಕು. ಆದರೆ ದೇಶವನ್ನು ವಿರೋಧಿಸುವಂತ ನಾಯಕನು ಅಲ್ಲ. ಇಂದು ಎಸ್.ಐ.ಆರ್. ಬಗ್ಗೆ ದೇಶದಲ್ಲಿ ತಪ್ಪು ಕಲ್ಪನೆ ಹುಟ್ಟು ಹಾಕುವ ಮೂಲಕ ಅರಾಜಕತೆ ಸೃಷ್ಠಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷವು ಮಾಡುತ್ತಿದೆ ಎಂದು ದೂರಿದ ಅವರು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ನೆಲಕಚ್ಚಿಸುವ ಮೂಲಕ ತಕ್ಕ ಪಾಠ ಕಲಿಸ ಬೇಕೆಂದು ಕರೆ ನೀಡಿದರು.

ಚುನಾವಣೆಯ ವ್ಯವಸ್ಥೆಯಲ್ಲಿ ಇ.ವಿ.ಎಂ. ಮತಯಂತ್ರದ ವ್ಯವಸ್ಥೆಯನ್ನು ವಿರೋಧಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸ ಬೇಕೆಂದು ಒತ್ತಾಯಿಸಲಾಯಿತು ಅದರೆ ಮೊನ್ನೆ ನಡೆದ ಚುನಾವಣೆಯಲ್ಲಿ ಫಲಿತಾಂಶ ಏನಾಯಿತು. ಇ.ವಿ.ಎಂ. ಮೂಲಕ ಮಾಡಿದರೆ ಫಲಿತಾಂಶ ಬೆಳಿಗ್ಗೆ ಬರುತ್ತದೆ. ಬ್ಯಾಲೆಟ್ ಪೇಪರ್ ಮೂಲಕ ಮಾಡಿದರೆ ಸಂಜೆ ಫಲಿತಾಂಶ ಘೋಷಣೆಯಾಗುತ್ತದೆ. ಆದರೆ ಫಲಿತಾಂಶದಲ್ಲಿ ಮಾತ್ರ ಯಾವೂದೇ ವ್ಯತ್ಯಾಸವಾಗಿಲ್ಲ ಎಂಬ ಸತ್ಯಂಶವು ಬೆಳಕಿಗೆ ಬಂದಿದೆ. ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಸೃಷ್ಠಿಸಿ ಕಾಂಗ್ರೇಸ್ನ್ನು ತುಂಡು ತುಂಡಾಗಿ ಕತ್ತರಿಸಿ ಅರಬೀ ಸಮುದ್ರಕ್ಕೆ ಎಸೆಯುವಂತೆ ಪಾಠ ಕಲಿಸಬೇಕೆಂದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande