ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ೫೩೯ನೇ ಕನಕದಾಸ ಜಯಂತಿ ಆಚರಣೆ
ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ೫೩೯ನೇ ಕನಕದಾಸ ಜಯಂತಿ ಆಚರಣೆ
ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ೫೩೯ನೇ ಕನಕದಾಸ ಜಯಂತಿ ಆಚರಣೆ


ಕೋಲಾರ, 27 ನವೆಂಬರ್ (ಹಿ.ಸ.)

ನಗರದ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಶ್ರೀ ಭಕ್ತ ಕನಕದಾಸರ ೫೩೯ನೇ ಜಯಂತಿಯನ್ನು ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ.ಆರ್. ತ್ಯಾಗರಾಜ್ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಭುವನೇಶ್ವರಿ ಕನ್ನಡ ಸಂಘದ ಗೌರವಾಧ್ಯಕ್ಷರಾದ ಅಕ್ರು ಸೋಮಶೇಖರ್, ಪೊಲೀಸ್ ಅಶ್ವಥ್ ನಾರಾಯಣಗೌಡ, ಮಾಜಿ ನಗರಸಭಾ ಸದಸ್ಯ ಏ. ಪ್ರಸಾದ್ ಬಾಬು, ಕುರುಬರ ಸಂಘದ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಡಿ. ಮುನಿಯಪ್ಪ, ಕಿಲಾರಿಪೇಟೆ ಮುನಿಕೃಷ್ಣ, ಗೋವಿಂದರಾಜು, ಗೌರಿಪೇಟೆಯ ನಿವೃತ್ತ ಎ.ಎಸ್.ಐ. ರವೀಂದ್ರನಾಥ್, ಕೆ.ಟಿ.ಎಸ್ ಮಂಡಿ ಶ್ರೀನಿವಾಸ್ ಹಾಗೂ ಭುವನೇಶ್ವರಿ ಕನ್ನಡ ಸಂಘದ ಕಾರ್ಯದರ್ಶಿ ಸುಬ್ರಮಣಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande