`ಬಸವಮಂಟಪ’ ಮನುಕುಲಕ್ಕೆ ದ್ರೋಹ : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು
ಬಳ್ಳಾರಿ, 27 ನವೆಂಬರ್ (ಹಿ.ಸ.) ಬಸವಣ್ಣನವರ ಬಗೆಗೆ ಸರಿಯಾಗಿ ಅಧ್ಯಯನ ಮಾಡದೇ, ತಿಳಿದುಕೊಳ್ಳದೇ, ವಚನಗಳ ನಿಜಾರ್ಥವನ್ನು ಗ್ರಹಿಸದೇ, ತನಗೆ ತೋಚಿದ್ದೇ ಸರಿ ಎಂಬ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲಿ ರವಿ ಹಂಜ್ ಅವರು ರಚಿಸಿರುವ ''ಬಸವಮಂಟಪ'' ಕನ್ನಡ ನಾಡಿನ ಶರಣ ಸಂಸ್ಕøತಿಯ ಪ್ರತೀಕಾರವಾಗಿ ಮಾನವ ಕ
`ಬಸವಮಂಟಪ’ ಮನುಕುಲಕ್ಕೆ ದ್ರೋಹ : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು


`ಬಸವಮಂಟಪ’ ಮನುಕುಲಕ್ಕೆ ದ್ರೋಹ : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು


ಬಳ್ಳಾರಿ, 27 ನವೆಂಬರ್ (ಹಿ.ಸ.)

ಬಸವಣ್ಣನವರ ಬಗೆಗೆ ಸರಿಯಾಗಿ ಅಧ್ಯಯನ ಮಾಡದೇ, ತಿಳಿದುಕೊಳ್ಳದೇ, ವಚನಗಳ ನಿಜಾರ್ಥವನ್ನು ಗ್ರಹಿಸದೇ, ತನಗೆ ತೋಚಿದ್ದೇ ಸರಿ ಎಂಬ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲಿ ರವಿ ಹಂಜ್ ಅವರು ರಚಿಸಿರುವ 'ಬಸವಮಂಟಪ' ಕನ್ನಡ ನಾಡಿನ ಶರಣ ಸಂಸ್ಕøತಿಯ ಪ್ರತೀಕಾರವಾಗಿ ಮಾನವ ಕುಲಕ್ಕೆ ಮಾಡಿದ ದ್ರೋಹವಾಗಿದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ರವಿಹಂಜ್ ಅವರು ಬಸವಮಂಟಪ ಬರೆಯುವ ಮೂಲಕ ಬಸವಣ್ಣ ಮತ್ತು ಇಡೀ ಮಾನವ ಕುಲಕ್ಕೆ ದ್ರೋಹ ಮಾಡಿದ್ದಾರೆ. ಸಕಲ ಜೀವಾತ್ಮರ ಲೇಸನ್ನೇ ತನ್ನ ಪರಮಧ್ಯೇಯವನ್ನಾಗಿಸಿಕೊಂಡು, ಪ್ರಜಾಪ್ರಭುತ್ವದ, ಸಮತಾವಾದದಂತಹ ಉದಾತ್ತ ಆದರ್ಶ ಮೌಲ್ಯಗಳ ಅಡಿಯಲ್ಲಿ ಸಮಾಜದ ಬದಲಾವಣೆಗೆ ನಾಂದಿ ಹಾಡಿದವರು ಜಗಜ್ಯೋತಿ ಶ್ರೀ ಬಸವಣ್ಣನವರು. ಬಸವಣ್ಣನವರ ಬಗ್ಗೆ ಮತ್ತು ಅವರ ವಚನಗಳ ಬಗ್ಗೆ ನಡೆದಷ್ಟು ಸಂಶೋಧನೆ, ವ್ಯಾಖ್ಯಾನ ಬೇರಾವ ವ್ಯಕ್ತಿಗಳ ಬಗೆಗೆ ನಡೆದಿಲ್ಲ ಎನ್ನುವುದು ಸರ್ವಕಾಲದ ಸತ್ಯ ಎಂದು ಅವರು ತಿಳಿಸಿದ್ದಾರೆ.

ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿಬಳಿಯುವ ರೀತಿಯಲ್ಲಿ ಅವರ ವಿಚಾರಗಳ ಬಗ್ಗೆ ತಿರುಚಿ ಬರೆಯುವಂತಹ ಮನಸ್ಸುಗಳು ಇದ್ದಾವೆಂಬುದು ಊಹಿಸಿಕೊಳ್ಳಲು ಸಾಧ್ಯವಾಗದ ವಿಷಯ. ಬಸವಣ್ಣನವರು ಒಬ್ಬ ವ್ಯಕ್ತಿ ಮಾತ್ರವಲ್ಲ; ಅವರು ಒಂದು ಸಾಮಾಜಿಕ ಮತ್ತು ಧಾರ್ಮಿಕ ಸಿದ್ಧಾಂತದಂತೆಯೇ ಚರಿತ್ರೆಯಲ್ಲಿ ಪರಿಗಣಿಸ್ಪಟ್ಟವರು. ಬಸವಣ್ಣನವರ ಕುರಿತ ಅಧ್ಯಯನ ಎಂದರೆ, ಎಲ್ಲ ಶರಣರ ಉನ್ನತ ತತ್ವ-ಸಿದ್ಧಾಂತ-ಮೌಲ್ಯ-ಆದರ್ಶಗಳ ಮತ್ತು ಮುಕ್ತ ಜೀವನ ಪದ್ಧತಿಯ ಉಜ್ವಲ ಪರಂಪರೆಯ ಜ್ಞಾನಸಂಪಾದನೆ ಎಂದರ್ಥ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರ.

ರವಿ ಹಂಜ್ ಅವರು ಬರೆದಿರುವ 'ಬಸವಮಂಟಪ'ವನ್ನು ಸರ್ಕಾರ ಮುಟ್ಟುಗೋಲು ಹಾಕಿರುವುದು ಸ್ವಾಗತಾರ್ಹ. ರವಿಹಂಜ್ ಅವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶ್ರೀಗಳು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande